Home / ಕಥೆ / ಹನಿ ಕಥೆ

ಹನಿ ಕಥೆ

ಒಬ್ಬ ಗಣಿತಜ್ಞ ಮತೊಬ್ಬ ತತ್ವಜ್ಞಾನಿ ಮಾತುಕತೆಯಲ್ಲಿ ತೊಡಗಿದ್ದರು. ಗಣಿತದಲ್ಲಿ ಎಲ್ಲಾ ನಿಖರವಾಗಿ ಎಣಿಸಲು ಗುಣಿಸಲು ಸಾಧ್ಯ ಎಂದ ಗಣಿತಜ್ಞ, ತತ್ವಜ್ಞಾನಿ ಒಡನೆ ಕೇಳಿದ ಆಕಾಶವನ್ನು ಅಳೆಯಲು, ಗಗನದ ಚುಕ್ಕಿಗಳನ್ನು ಎಣಿಸಲು ನಿನಗೆ ಸಾಧ್ಯವೇ? ಮಳೆಹನ...

ಭೋರ್ ಎಂದು ಮಳೆ ಸುರಿಯುತ್ತಿತ್ತು. ಎಲೆ ಎಲೆಯು ಮಳೆಹನಿಯ ಉದಿರಿಸಿ ಮಳೆಹನಿಯೊಂದಿಗೆ ತಾಳ ಹಾಕುತ್ತಿತ್ತು. ವೃಕ್ಷದ ಕೆಳಗೆ ಇದ್ದ ಬುದ್ಧನ ವಿಗ್ರಹ ಮರದ ಬುಡದಲ್ಲಿ ನೆನೆಯದೇ ಧ್ಯಾನಾವಸ್ಥೆಯಲ್ಲಿ ಸ್ಥಿತಪ್ರಜ್ಞವಾಗಿತ್ತು. ಮಳೆಯ ಬಡಿತ ತಾಳಲಾರದೆ ಆಶ...

ಅವನಿಗೆ ಪ್ರಶ್ನೆ ಕೇಳುವುದೆಂದರೆ ಬಲು ಪ್ರಿಯ. ಪ್ರಶ್ನಾರ್ಥ ಚಿನ್ಹೆಗೆ ಜೋತುಬಿದ್ದು ಉತ್ತರ ಧೃವದಿಂದ ದಕ್ಷಿಣ ಧೃವಕೆ ಉತ್ತರವ ಹುಡಿಕಿ ಬಾಳು ಸಾಗಿಸುತಿದ್ದ. ಉತ್ತರಗಳು ತಲೆ ತುಂಬಿದರು ಹೃದಯ ಬರಿದಾಗಿ ಬರಡಾದಾಗ ಎಚ್ಚೆತ್ತು ಪ್ರಶ್ನೆಗಳನ್ನು ಹೂಳಿ...

ಬರುವ ಅಪರಿಚಿತರಿಗೆ ನನ್ನ ಹೃದಯ ಬಾಗಿಲು ತೆಗಿಯುತ್ತಿರಲಿಲ್ಲ. ಅವರು ಎಂದೂ ಅಪರಿಚಿತರಾಗಿಯೇ ಉಳಿಯುತ್ತಿದ್ದರು. ಒಮ್ಮೆ ಮನಸ್ಸು ಚಿಲಕ ತೆಗೆಯಲು ನಿರ್ಧರಿಸಿತು. ಆಗ ಇಡೀ ವಿಶ್ವ ಓಡಿ ಬಂದು ನನ್ನ ಹೃದಯದೊಳಗೆ ಸೇರಿಕೊಂಡಿತು. ಆಗ ನಾನೇ ವಿಶ್ವವಾದೆ. ...

ಆರು ವರ್ಷದ ಪುಟ್ಟ ಪೋರ ಅಪ್ಪನನ್ನು ಕೇಳಿದ “ದೊಡ್ಡವರಾಗಿ ಬೆಳದ ಮೊದಲದಿನ ಸುಲಭವಾಗಿರುತ್ತಾ? ಹೇಗೆ?” ಎಂದ. “ಹುಂ, ಸುಲಭವಾಗಿರುತ್ತೆ” ಎಂದ ಅಪ್ಪ. ಅವನು ಪ್ರಶ್ನೆ ಮುಂದುವರಿಸಿ “ನಿನಗೆ ಗಡ್ಡ ಮೀಸೆ ಹೆರದುಕೊಳ...

“ಮಳೆಹನಿ ಬೊಗಸೆಯಲಿ ಹಿಡಿದು ಕೆರೆ ತುಂಬಿಸೋಣ ಬಾ! ಗೆಳತಿ!” ಎಂದು ಕರೆದ ಅವನು. ನಂಬಿ ಎದೆ ಬಿಂದಿಗೆಯ ತುಂಬಿ ಬಂದವಳು ಆ ಮುಗ್ದೆ. ಹನಿ ಹನಿಯಲ್ಲಿ ಕೆರೆ ತುಂಬಿದಾಗ ಮತ್ತೊಂದು ಜಾಲ ಹಾಕಿ ಹತ್ತಿರಕೆ ಕರೆದ “ನವಿಲು ಗರಿ ಮರಿ ಹ...

“ನಾನು ನಿರಪರಾಧಿ. ನನ್ನದೇನು ತಪ್ಪಿಲ್ಲ” ಎಂದು ಮಗುವಿನಂತೆ ಅಳುತಿತ್ತು ಚೂಪಾದ ನಾಲಿಗೆ ಚಾಚಿ. “ನಾನು ಹಿಡಿದುಕೊಂಡೆ ಅಷ್ಟೇ” ಎಂದಿತು ಕೈ. “ನನ್ನ ನೀನು ಎತ್ತಿ ಮರಕ್ಕೆ ಏಟು ಹಾಕಲಿಲ್ಲವೇ? ಎಂದಿತು ಅಳುವನ್ನು...

ಒಂದು ಗುಡಿಯಲ್ಲಿ ಹರಿಕಥೆ ನಡೆಯುತ್ತಿತ್ತು. ದಾಸರು ಪರಿಸರ ಪ್ರಿಯರು. ದೇವರಷ್ಟೇ ಭೂಮಿತಾಯಿಯನ್ನೂ ಪ್ರೀತಿಸುತ್ತಿದ್ದರು. ನೆರದ ಜನ ಅಶಕ್ತಿಯಿಂದ ಹರಿಕಥೆ ಕೇಳುತಿದ್ದರು. “ಭಕ್ತಿಗೆ, ಮುಕ್ತಿಗೆ ಮಾರ್ಗವನ್ನು ತಿಳಿಸುವೆ ಮನುಜರೆ! ಕೇಳಿ, ಕಿ...

ಒಂದು ಗುಡಿ ಗೋಪುರವನ್ನು ನೋಡಿದ ಓರ್ವ “ಎಂತಹ ಅದ್ಭುತ ಶಿಲ್ಪ! ಇಲ್ಲಿ ದೇವರು ಇದ್ದನೆ” ಎಂದು ಕೊಂಡ. ಅದರ ಪಕ್ಕದಲ್ಲೇ ಆಕಾಶವನ್ನು ಚುಂಬಿಸುತ್ತಾ ತನ್ನ ಹಸಿರು ಗರಿಗಳಿಂದ ಗಾಳಿಯಲ್ಲಿ ತೂರಾಡುತ್ತಿತ್ತು ಭವ್ಯವಾಗಿ ನಿಂತಿದ್ದ ತೆಂಗಿನ...

ಓರ್ವ ವ್ಯಕ್ತಿಗೆ ಒಂದು ಸಸ್ಯ ಕಾಶಿಯ ಮ್ಯೂಸಿಯಂ ನಿರ್ಮಿಸಬೇಕೆಂಬ ಮಹತ್ವಾಕಾಂಕ್ಷೆ ಉಂಟಾಯಿತು. ಜಗತ್ತಿನ ಎಲ್ಲಾ ಮರಗಳನ್ನು ಕಡೆದು ಮ್ಯೂಸಿಯಂನಲ್ಲಿ ಇಟ್ಟ. ಜನರು ನೂರು ಡಾಲರ್ ಕೊಟ್ಟು ಟಿಕೆಟ್ ಕೊಂಡು ನೋಡಲು ಬಂದರು. ಮರದ ಹಸಿರು ಸ್ವರ್ಗವನ್ನು ಕಡ...

ಶಠಗೋಪ ಹದಿನಾರಾಣೆ ಶ್ರೀವೈಷ್ಣವ. ಒಂದುದಿನ ಅವನ ಅತ್ತಿಗೆ ಅಡುಗೆಯ ಕೆಲಸದಲ್ಲಿದ್ದು ವೀಳೆಯದೆಲೆಯ ವರ್ತನೆಯವಳು ಬಂದಾಗ ಎಲೆ ತೆಗೆಯಲು ಶಠಗೋಪನಿಗೆ ಹೇಳಿದಳು. ಶಠಗೋಪನು ಹೊರಗೆ ಬಂದು, ಎದುರಿಗಿದ್ದ ವೀಳೆದೆಲೆಯವಳನ್ನು ನೋಡಿದ. ಅವಳು ಸಾಧಾರಣದ ಹೆಣ್ಣು. ರತಿಯಲ್ಲ, ಚಪ್ಪನ್ನಾರು ದೇಶದಲ್ಲ...

ಕೋರ್‍ಟಿನಿಂದ ಬಂದ ಮೀರಾ ಬಳಲಿದವಳಂತೆ ಕುಸಿದು ಕುಳಿತಳು. ದೇಹ ಬಳಲಿದ್ದರೂ ಸಂತಾಪದಿಂದ ಎದೆ ಕುದಿಯುತ್ತಿತ್ತು. ಎದೆಯಲ್ಲಿ ಕುದಿತ, ಮುಖ ಕಣ್ಣುಗಳನ್ನು ಕೆಂಪು ಮಾಡಿ, ಇಡೀ ದೇಹ ಕೋಪದಿಂದ ಕಂಪಿಸುವಂತೆ ಮಾಡಿತ್ತು. ಕಾಲಲ್ಲಿದ್ದ ಚಪ್ಪಲಿಗಳನ್ನು ಕೂಡಾ ಕಳಚದೇ, ಕೈಯಲ್ಲಿದ್ದ ಪರ್ಸ್, ಪುಸ...

ಮಳೆ ಎಂದರೆ ಅಂತಹ ಇಂತಹ ಮಳೆಯಲ್ಲ. ಕೈ ಹೊರುವುದನ್ನು ಮೈ ಹೊರಲಿ ಎಂದು ಎಲ್ಲಾ ಬಟ್ಟೆ ಬರೆಗಳನ್ನೂ ಮೈಯ ಮೇಲೆಯೇ ಹಾಕಿಕೊಂಡಿದ್ದೆ. ಹಿಡಿದುಕೊಂಡಿದ್ದ ಛತ್ರಿ, ಹೊದ್ದಿದ್ದ ಜಮಖಾನೆ, ಉಟ್ಟಿದ್ದ ಎರಡು ಗಾಂಧಿಪಂಚೆ, ತೊಟ್ಟಿದ್ದ ಕಾಕಿಚೆಡ್ಡಿ, ಇಷ್ಟೆಲ್ಲಾ ನೆನೆದುದಲ್ಲದೆ, ಕಟ್ಟಿದ್ದ ಕಾಚ ...

ಲಲಿತೆ ಬಾಲವಿದವೆ. ಮದುವೆಯಾದ ಮೂರು ತಿಂಗಳಿಗೆ ಗಂಡ ಸಿಡುಬಿನಲ್ಲಿ ಸತ್ತ. ಲಲಿತೆ ಕುಂಕುಮವಳಿಸಿದಳು. ಒಂದೆರಡು ತಿಂಗಳ ನಂತರ ಕಣ್ಣೀರನ್ನೊರೆಸಿ ಮುಖ ತೊಳೆದುಕೊಂಡು ತನ್ನ ವಿದ್ಯಾಭ್ಯಾಸವನ್ನು ಮುಂದುವರಿಸಿದಳು. ಅವಳು ಆಗ ತಾನೇ ಇಂಟಿರ್‌ ಮೀಡಿಯಟ್‌ ಪಾಸುಮಾಡಿದ್ದಳು. ಎಂ. ಬಿ. ಬಿ. ಎಸ್...

ತೆಂಕಣದಿ ಹದಿನಾರು ಮೈಲಿಗಳಾಚಿ ಬಾಂದಳಕೆ ಭುಜಗೊಟ್ಟು ನಿಂತಿರುವ ಸಿಂಹಗಡವೇ-ಇದೋ ನಿನಗೆ ತಲೆಬಾಗುವೆನು. ಶತಮಾನಗಳ ಹಿಂದೆ, ನರಜಾತಿಯಲಿ ಹರಿಯಂತೆ ಮೆರೆದ ವೀರಲೀಲಾಲೋಲ ಶಿವಪ್ರಭುವನು ಶಿರದಲಿ ಹೊತ್ತು ಮೆರೆಯಿಸಿದ ಸಿಂಹಗಡವೇ ಇದೋ-ನಿನಗೆ ವಂದಿಸುವೆನು. ಅಂದು ನಮ್ಮ ನಾಡಿನ ಧರ್‍ಮ-ನಮ್ಮ ಹ...

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...