ಹನಿಗವನ

ಉಮರನ ಒಸಗೆ – ೨೧

ಬಳಿಕ ನಾಂ ಜೀವನನದೃಶ್ಯಲೋಕಕೆ ಕಳುಪಿ ಮುಂದೆ ಗತಿಯೇನೆಂದು ತಿಳಿದು ಬಾರೆನಲು, ತಿರುಗಿಬಂದಾಜೀವವೆನಗುಸಿರಿತೀ ತೆರದಿ: “ನಾಕ ನರಕಗಳೆರಡುಮಾನಲ್ಲದಾರು?” *****

ಉಮರನ ಒಸಗೆ – ೨೦

ಬಾಲ್ಯದಲಿ ತಾರ್‍ಕಿಕರ ತಾತ್ವಿಕರ ಸಭೆಗಳಿಗೆ ಆದರದೊಳಾಂ ಸಾರಿ ವಾದಗಳ ಕೇಳಿ, ಕಾದಾಟಕೆತ್ತ ಕೊನೆಯೆಂದು ಕಾಣದೆಯಿರಲು ಪೋದ ದಾರಿಯೊಳೆ ನಡೆಯುತ ಮರಳಿ ಬಂದೆಂ. *****

ಉಮರನ ಒಸಗೆ – ೧೯

ಮುದಿ ಉಮ್ಮರನ ಕೂಡೆ ನಡೆ; ಪಂಡಿತರನ್ನೆಲ್ಲ ವಾದಿಸಲು ಬಿಡು; ದಿಟವಿದೊಂದಿಹುದು ಕೇಳು: ಬಾಳು ಅಳಿವುದೆ ದಿಟವು; ಮಿಕ್ಕೆಲ್ಲ ಸಟೆಯೆ ಸರಿ; ಒಮ್ಮೆ ಅರಳಿದ ಹೂವು ಬಾಡುವುದೆ ದಿಟವು. […]

ಉಮರನ ಒಸಗೆ – ೧೮

ಪಂಡಿತರು ಶಾಸ್ತ್ರಿಗಳು ಸೂಕ್ಷ್ಮ ಚತುರತೆಯಿಂದೆ ಚರ್‍ಚಿಸಿಹರುಭಯಲೋಕಗಳ ಮರುಮಗಳ; ಅವರ ಪಾಡೇನಾಯ್ತು? ಉಳಿದರಂತವರೆಲ್ಲ, ಮಣ್ಣು ಬಾಯನು ಮುಚ್ಚೆ, ಸೋತು ಮಲಗಿದರು. *****

ಉಮರನ ಒಸಗೆ – ೧೭

ಇಂದಿಗೆಂದಾಯಾಸಪಡುವಂಗಮಂತಿರದೆ ನಾಳೆಯಿನ್ನೇನೆಂದು ಕೇಳ್ವಂಗಮಿಂತು ಕತ್ತಲೆಯ ಗೋಪುರದ ಗುರು ಸಾರ್‍ವನ್ : “ಎಲೆ ಮರುಳೆ! ಇರದು ಸೊಗಮಿತ್ತ, ನಿನಗಿರದದತ್ತಾನುಂ.” *****