ಕವಿತೆ

ತಾತ ನೀನು ಕಥೆ ಹೇಳಿರುವೆ ನಿನಗೆ ಕಂಪ್ಯೂಟರ್ ಬಗ್ಗೆ ಹೇಳುವ ಮೊದಲಿಗೆ ಒತ್ತಿ ಆನ್ ಗುಂಡಿ ಬೆಳ್ಳಿ ಪರದೆ ಮೂಡಿತು ನೋಡಿ ಇದಕ್ಕೆ ಹೇಳುವರು ಮೌಸೆಂದು ಗಣಪತಿ ವಾಹನ ಇಲಿಯೆಂದು ಕನ್ನಡ ನುಡಿ ಫಾಂಟಾವನ್ನು ಗಣಕ ಪರಿಷತ್ತು ನೀಡಿದೆ. ಕನ್ನಡ ನುಡಿಯ ಅಕ್ಷ...

ಶಾಲೆಗೆ ಹೋಗೋ ಜಾಣ ಮರಿ ರವಿವಾರ ತಾತಾ ಬಿಡುವರಿ ಮೊಬೈಲ್ ತಂದು ತೋರಿಸುವೆ ನಿಮಗೆ ಪಾಠವ ಮಾಡುವೆ ಕಿವಿಗೊಟ್ಟು ಕೇಳಿ ನಾ ಹೇಳುವುದ ಪ್ರಪಂಚವೆ ಅಂಗೈಲಿ ಇರುವುದ ಮೊಬೈಲ್ ಕಂಪ್ಯುಟರ್ ಗೊತ್ತಿರಬೇಕು ಇಲ್ಲದಿರೆ ಗಮಾರೆಂದು ಕರೆಯುವರು ಬಣ್ಣದ ಅಂಡ್ರಾಯ್ಡ...

ಬೋಳು ತಲೆ ಬೊಚ್ಚು ಬಾಯಿ ಇದ್ದರೇನು ಅಜ್ಜಗೆ ಪಾಠ ಕಲಿವ ಧಾಟಿ ಕಂಡು ನಕ್ಕು ಬಿಡುವ ಮೆತ್ತಗೆ ಬಿಳಿಯ ತಲೆ ಸುಕ್ಕು ತೊಗಲು ಇದ್ದರೇನು ಅಜ್ಜಿಗೆ ಎಲೆ ಅಡಿಕೆ ಜಜ್ಜಿ ಕೊಟ್ರೆ ಮುತ್ತು ಕೊಡುವಳು ಕೆನ್ನೆಗೆ ಮಂದ ಕಿವಿ ಮೈ ನಡುಕ ಇದ್ದರೇನು ಅಜ್ಜಗೆ ಅಚ್ಚ...

ಮರಳಿ ಯತ್ನವ ಮಾಡು! ಮರಳಿ ಯತ್ನವ ಮಾಡು! ತೊರೆಯದಿರು ಮೊದಲು ಕೈ ಗೂಡದಿರಲು. ಹಿರಿದು ಧೈರ್‍ಯವ ಹಾಳು! ತೊರೆಯದಿರು, ತೊರೆಯದಿರು! ಮರಳಿ ಯತ್ನವ ಮಾಡು, ಸಿದ್ಧಿಸುವುದು. ಒಂದು ಸಲ ಕೆಟ್ಟುಹೋ ಯ್ತೆಂದು ನೀ ಅಂಜದಿರು ಕುಂದಿಲ್ಲ. ಕೈಗೂಡ -ದನಿತರಿಂದ ನ...

ಮಗುವೆ, ನಿನ್ನಯ ಮೈಗೆ ಗುರಿ ಇಟ್ಟು ಹೊಡೆವಾ ಬಗೆ ಬಗೆಯ ಬೇಡರಿಂದಲಿ ದೂರವಾಗು. ಹೊತ್ತನ್ನು ತಿಂಬ ಸೋಮಾರಿತನ ಬೇಡ! ಮತ್ತು ಹಿಡಿಸುತ ಮೈ ಕೊಲುವ ಕಳ್ಳು ಬೇಡ! ಕತ್ತು ಕೊಯ್ಕರ ಕೂಡೆ ನಂಟುಬೇಡತನ! ಉತ್ತಮೋತ್ತಮರಲ್ಲಿ ನಿನ್ನ ಹಗೆ ಬೇಡ! ಎತ್ತಿದ್ದ ಸಾಲ...

ಬಣ್ಣ ಬಣ್ಣದಾ ಚಿಟ್ಟೆ ಸುಂದರ ಅದರ ಬಟ್ಟೆ ಹಿಡಿಯಲು ಓಡಿಬಿಟ್ಟೆ ಅಯ್ಯೋ ಬಿದ್ದು ಕೆಟ್ಟೆ ಕಾಮನ ಬಿಲ್ಲಿನ ಬಣ್ಣ ತಣಿಸಿತು ನನ್ನ ಕಣ್ಣ ಬರೆದವರಾರು ಚಿತ್ರ ಹೇಳು ನನ್ನ ಹತ್ರ ಹೂವಿನ ತೋಟಕೆ ಹಾರಿ ಹೂವಿನ ತೇರನ್ನೇರಿ ಕುಣಿವ ನಿನ್ನ ರೆಕ್ಕೆ ನೋಡಿ ನಾನ...

ಆಡಿನಾ ಮರೀ, ಆಡ ಬಾರೆಲೆ! ಓಡ ಬೇಡೆಲೆ, ನೋಡಿ ನನ್ನನು! ಅರಳಿ ಎಲೆಯನೂ, ಹಲಸಿನೆಲೆಯನೂ, ಹುರುಳಿ ಕಡಲೆಯಾ, ಕಲಸಿ ಕೊಡುವೆನು. ಮಾತನಾಡದೇ, ನನ್ನ ನೋಡದೆ, ಏತಕ್ಹೋಗುವೆ? ಆಡಿನಾ ಮಗೂ! ***** (ಕವಿಶಿಷ್ಯ)...

ಚದುರಿ ಹೋದ ಮುತ್ತುಗಳು ಒಟ್ಟುಗೂಡಿವೆ ಒಂದೆ ಬಣ್ಣ ಅಂಗಿತೊಟ್ಟು ಶಾಲೆಗ್ಹೊರಟಿವೆ ಬಾಡಿಹೋದ ಮೊಗದಲೀಗ ನಗೆಯು ಉಕ್ಕಿದೆ ಪಾಠಕಲಿಯುವತ್ತ ಅವರ ಮನವು ಹೊರಳಿದೆ ಕೂಲಿಯಿಂದ ಮುಕ್ತರಾಗಿ ಬಂದುಬಿಟ್ಟರು ಆಟಪಾಠ ಎಲ್ಲವನ್ನು ಕಲಿತು ನಲಿದರು ಶಾಲೆ ಬಯಲಲೀಗ ಅ...

ಡೊಳ್ಳು ಹೊಟ್ಟೆ ಬೆನಕ ಸಣ್ಣ ಇಲಿ ಯಾಕಪ್ಪ ದೊಡ್ಡ ಕಿವಿ ಗಣಪ ನಾ ಹೇಳೋದನ್ನ ಕೇಳಪ್ಪ ಚೌತಿಯಂದು ಬಾರಪ್ಪ ಚಕ್ಕುಲಿ ಉಂಡೆ ತಿನ್ನಪ್ಪ ಮಿಸ್ಸಿಗೆ ಸ್ವಲ್ಪ ಹೇಳಪ್ಪ ಹೋಂವರ್‍ಕ ಕಡಿಮೆ ಮಾಡ್ಸಪ್ಪ ನಿನ್ನಯ ಬೆಲ್ಟು ನಾಗಪ್ಪ ನಂಗೊಂದಿನ ಕೊಡಪ್ಪ ಗಣಿತದ ಮಿಸ...

ದೇವರ ದೇವನು ಮಹಾವಿಷ್ಣುವು ದಶಾವತಾರವ ತಾಳಿದನು ದುಷ್ಟರ ಶಿಕ್ಷಿಸಿ ಶಿಷ್ಟರ ರಕ್ಷಿಸಿ ಲೋಕಕಲ್ಯಾಣವ ಮಾಡಿದನು- ಹಿಂದಿನಿಂದಲೂ ಕೇಳುತಲಿರುವೆವು ದಶಾವತಾರದ ಕಥೆಯನ್ನು ಇಂದು ಬೇರೆಯೇ ರೀತಿಯೊಳರಿಯುವ ಕಥೆಯಲಿ ಅಡಗಿದ ತತ್ವವನು! ಮೊದಲಿಗೆ ಪ್ರಳಯವು ಘಟ...

1...1314151617...31

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....