ಮಲೆನಾಡ ಸಮೃದ್ಧ ಗಿರಿರಾಜಿಯ ಪ್ರಶಾಂತ ಮೊಗದಲ್ಲಿ ಹಿಮಾಲಯದ ಮೇಗಣ ಶುಭ್ರಾಭ್ರ ಮಂಜಿನ ತೆರೆತೆರೆ ತಲೆಮೇಲೆ ಅಲ್ಲಿ ಕುಳಿತು ಬಂಗಾಳಕೊಲ್ಲಿ ಅರಬ್ಬಿ ಕೊಲ್ಲಿಗಳ ಕಣ್ಣ ಕೋಲ್ಮಿಂಚು ತೂರುತ್ತವೆ ಗಂಗೆಯಮುನೆಯರ ತೀರದನುಭವದಲೆಯಲೆ ಹಣೆಯಂದ, ಎರಡು ಕೆನ್ನ...

ಹೋಗುವಿಯೋ ನೀ ಹೋಗು – ಮತ್ತೆ ನುಡಿಯದೆ ಇರುವುದೆ ಮುರಳಿ? ಬಂದೇ ಬರುವೆ ಹೊರಳಿ-ನೀ ಬಂದೇ ಬರುವೆ ಮರಳಿ. ಅದ್ದುವಳಲ್ಲ ನನ್ನೀ ಬಾಳನು ಸಲ್ಲದ ಕಣ್ಣೀರಲ್ಲಿ ತೆರಳುವಳಲ್ಲ ದೀಪವ ನಂದಿಸಿ ಜೀವನದುತ್ಸವದಲ್ಲಿ ಏನೇ ಕಂಟಕ ಬಂದರು ಏನು ಬೆಚ್ಚುವ ಜ...

ಕಚ್ಚಾ ಸ್ವಾಮೀ ಬಹಳ ಕಚ್ಚಾ ಕಚ್ಚಾ ಬರೀ ಕಚ್ಚಾ ತೆರೆದು ನೋಡಿದರೂ ಕಚ್ಚಾ ಅರೆದು ನೋಡಿದರೂ ಕಚ್ಚಾ ಕೊರೆದು ನೋಡಿದರೂ ಕಚ್ಚಾ ಬರೆದು ನೋಡಿದರೂ ಕಚ್ಚಾ ಆಕಾಶ್ದಾಗೆ ಚುಕ್ಕೀ ಎಣಿಸಾಕ ಸೃಷ್ಟೀ ಚೆಂದಾ ಬಣ್ಣಿಸಿ ಗುಣಿಸಾಕ ಬಾಗಿಲು ಬಾಗಿಲು ಬಡಿದು ಕರೆದ...

ತಗೊ ಹಿಂದಕೆ ತಗೊ ಹಿಂದಕೆ ನೀ ನೀಡಿದ ವರವ ಓ ಆನಂಗದೇವ ಮುಕ್ತಿ ನೀಡು ಅಳಿಸಿ ನಿನ್ನ ಈ ಮಿಥ್ಯಾ ಜಾಲ ಓ ಅನಂಗ ದೇವ ಸುರಿವೆ ನಿನ್ನ ಪಾದದಲ್ಲಿ ಹುಸಿಯಾದೀ ಚೆಲುವ ಮರೆಸಿ ಪಡೆದ ಫಲವ ನೀಡುತಿರುವೆ ಹಿಂದಕೆ ಅರ್ಥವಿರದ ಸೊಬಗ ಓ ಅನಂಗ ದೇವ ನಿನ್ನ ದಯದಿ ಅ...

ಹಾಲಿದ್ದರೂ ಪಾತ್ರೆ ಇಲ್ಲವಲ್ಲಾ ಪಾತ್ರೆ ಇದ್ದರೂ ಗಾತ್ರವಿಲ್ಲವಲ್ಲಾ ಸಕಲ ಸಂಬಾರವಿದೆ ಅಡಿಗೆಯವರಿಲ್ಲ ಒಲೆಯೇಸೋ ಇದೆ ಉರಿಯೇ ಇಲ್ಲವಲ್ಲಾ. ಕಟ್ಟಿಗೆಗಳಿದ್ದರೂ ಕಡ್ಡಿ ಇಲ್ಲವಲ್ಲಾ ಭಾವಗಳಿದ್ದರೂ ಬಂಥುರ ಇಲ್ಲವಲ್ಲಾ. ರಾಗವಿದ್ದರೂ ಮಧುರ, ತಾಳತಪ್ಪಿ...

ಹರಿಯುವ ನೀರಿನ ತರ ಈ ಬಾಳು ಸರಿದು ಹೋಯಿತೇ! ನಾರಿಯಾಗಿ ನಾ ಪಡೆದದ್ದೆಲ್ಲಾ ವ್ಯರ್ಥವಾಯಿತೇ! ಒಂದೆ ಗಳಿಗೆ ಕಣ್ಣೀರ ತೇವಕೆ ಹಮ್ಮು ಆರಿತೇ, ನೋವಿನ ದನಿ ವಸಂತನ ಮುಖದ ಗೆಲುವ ಅಳಿಸಿತೇ! ಕಂಬನಿ ಸೂಸುವ ಇಂಥ ಚೈತ್ರನ ಕಾಣಲಿಲ್ಲ ಎಂದೂ ಅಗಲಿದ ವ್ಯಥೆಗೆ...

ಹಣ್ಣೊಂದು ಇತ್ತು ಮರದಿಂದ ಬಿತ್ತು ಮಣ್ಣಿನಲಿ ಬಿದ್ದು ಹೋಯ್ತು ಸಣ್ಣಾಗಿ ಸೋತು ಸುದ್ದಾಗಿ ಮತ್ತೆ ಕಣ್ಣಿನಲಿ ನೀರು ಬಂತು ಬೆಳೆದಂತೆ ಕಾಯಿ ತಾ ಭಾರವಾಯ್ತು ಬೆಳೆದದ್ದೆ ಮುಳುವದಾಯ್ತು ತಳೆದೀತೆ ಭಾರ ತೆಳ್ಳನೆಯ ತುಂಬು ಕಳವಳದಿ ತಡೆಯದಾಯ್ತು ತೊಯ್...

ಯಾವ ದೇವಿಯೋ ಯಾವ ವಿನೋದಕೊ ನಮ್ಮನೆಸೆದಳೀ ಮಾಯೆಯಲಿ, ಬಾ ಒಲವೇ ಮೈಮರೆಯುವ ನಾವು ಪ್ರೇಮದ ಮಧು ವೈಹಾಳಿಯಲಿ ಸ್ನೇಹದ ಹೊನಲಲಿ ವಿನೋದದಲೆಯಲಿ ಬಯಕೆಯಾಳದಲಿ ಮೀಯೋಣ ಬಗೆಬಗೆ ರಂಗಿನ ಗಂಧವನಗಳಲಿ ಪರಿವೆಯೆ ಇಲ್ಲದೆ ಅಲೆಯೋಣ ಪುಲಕಿತ ವಕ್ಷಸ್ಥಳದಲಿ ತೂಗು...

ಆಗಾಗ ಬರ್ತೀರು ರೋಗಣ್ಣಾ ನಿಜವಾದ ಗುರುವೆ ನೀನಾಗಣ್ಣಾ ಜೀವದಾಗ ಭಯವನ್ನು ಹುಟ್ಸೀ ಮನಸ್ಸನ್ನು ದೇವ್ರಕಡೆ ಮುಟ್ಸೀ ಮೈಯನ್ನು ಮೆತ್ತಗೆ ಮಾಡ್ತಾ ಮತಿಯನ್ನ ಜೊತೆಯಲ್ಲಿ ಕಾಡ್ತಾ ಹಮ್ಮನ್ನ ಬಿಮ್ಮನ್ನ ಕಳದೂ ಮನಸ್ಸಾಗೆ ಜೀವಸೂತ್ರ ಹೊಳದು ಮುಂದೋಡೋ ವೇಗ...

ಎದೆಯೊಳು ಮೊರೆದಿದೆ ಒಂದೇ ಸಮನೆ ಅತಲ ಜಲದ ಗಾನ ಮನವಿದು ಯಾಕೋ ನಿಲ್ಲದು ಮನೆಯಲಿ ತುಯ್ಯುತಲಿದೆ ಪ್ರಾಣ ತೂರಿಬಿಡಲೆ ಈ ಬಾಳನ್ನೇ ದುಡುಕುವ ನೆರೆಯಲ್ಲಿ ಬಾಳಿನ ಹಾಹಾಕಾರವನು ನುಂಗುವ ಮೋದದಲಿ? ನದಿಯೊಳು ಅಲೆ ಸಾಲೇಳಂತಿದೆ, ನನ್ನೀ ಎದೆಯೊಳಗೂ; ಏನೋ ವ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....