
ಇರುವಿಗರಿವೇ ಮರೆವು, ಮರೆವಿಗೆ ಅರಿವೆ ಇರುವಿನ ಪರಿಯು, ಈ ಪರಿ ಹರಿವ ಇರುವಿನ ಅರಿವೆ ಹಿಗ್ಗಿನ ಸಮರಸದ ಬಾಳು! ಈ ಘನದ ನೆಲೆ ಪಿಂಡಗೊಂಡಿಹ ಆ ಮಹತ್ತಿನ ಉಂಡೆ ಗರ್ಭೀ- ಕರಿಸಿ ಮೊಗ್ಗಾಗಿಹುದು ಮನದುನ್ಮನದ ಬಯಲಿನಲಿ ॥೧॥ ಮನದ ಶೂನ್ಯ ಸ್ಥಿತಿಯು ಪೂರ್ಣದ...
ಹಲಸು, ಮಾವು, ಕೊಕಂ, ಸಾವಯವವೆಂದೆನುತ ಬಲುತರದಾದರ್‍ಶ ಸಂತೆಗಳೇನ ಮಾಡಿದೊಡೇನು ? ಹಾಳಾದ ಪರಿಸರವನುಳಿಸಿ ಬಳಸುವ ನಿಟ್ಟಿನಲಿ ಹುಲಿಯ ಕಂಡೋಡ್ವ ತೆರದಲಿ ಕಳೆದಿರ್‍ಪೆಮ್ಮನ್ನ ಮೂಲದ ಹಳ್ಳಿಮನೆಗೋಡದಿರಲಿನ್ನುಳಿವು ಸಂಶಯವು – ವಿಜ್ಞಾನೇಶ್ವರಾ *...
ಮಾನವಾಗಿ ತಾನು ಬದುಕಿ, ಹೀನ ಬಡತನವೇನೆ ಇರಲಿ, ನಾಚಿಕೊಳುವ ನೀಚತೊತ್ತ ಆಚೆನೂಕು, ಏನೆ ಇರಲಿ, ಏನೆ ಇರಲಿ, ಏನೆ ಇರಲಿ, ಕಷ್ಟನಿಷ್ಟುರವೇನೆ ಇರಲಿ, ಮೆರೆವ ಪದವಿ ವರಹಮುದ್ರೆ, ಆಳು ಚಿನ್ನ, ಏನೆ ಇರಲಿ! ಹೊಟ್ಟೆಗಿಷ್ಟು ಹಿಟ್ಟು ಗಂಜಿ, ಬಟ್ಟೆ ಚಿಂದಿ,...
ಬತ್ತಿದ ಮಾಯೆಗೆ ಹಸಿ ಹಸಿ ಮಾಡುವ ಮನ ನಿನ್ನ ಕರ್ಮ ಪಾತಾಳಕ್ಕೆ ಅಟ್ಟುತ್ತಿದೆ ಇದು ನನ್ನ ಕುಕರ್ಮ ಹಾಡಿನಲಿ ಕುಣಿ ಕುಣಿದು ದೇವನೊಲಿಸಿದೆ ನಾನು ನನ್ನ ಗಣನೆಗೆ ಮಣ್ಣು ತೂರಿ ಇಂದ್ರಿಯದತ್ತ ಸರದಿತ್ತು ತಾನು ಹಲವು ಜನುಮಗಳಲ್ಲೂ ಬೆಂಬಿಡದೆ ನನ್ನ ಸಂಗಾ...
ಅವನ ಒಂದು ಮಾತಿಗೆ ಕಾಯುತಿದ್ದಾರೆ ಜನ ಅವ ಮಾತ್ರ ಮಾತಾಡುವುದಿಲ್ಲ ಭಿತ್ತಿಮುಖಿ ತೀರ ಮೌನಿ ಮಾತು ಮಾತಾಡಿ ಆಗಿಲ್ಲವೇ ಸಾಕಷ್ಟು ಇಷ್ಟೂ ಕಾಲ ಮಾತಾಡಿ ಕೊನೆ ಮುಟ್ಟಿದವರೇ ಇಲ್ಲ ಮಾತು ಮಾತಿನ ನಡುವಣ ಶೂನ್ಯತೆಯಷ್ಟೆ ಅರ್ಥಗರ್ಭಿತ ಮೌನಕಣಿವೆಯ ಅಗಾಧತೆ ...
ಮರದೊಳೆಂತೋ ಅಂತೆ ತುಂಬೊಲುಮೆ ಸಂತನೆಡೆ ನಿಶ್ಶಂಕೆಯೊಳು ನೆರೆವ ಹಕ್ಕಿಗಳ ತೆರದಿ ನಿಸ್ತಬ್ಧನೆನ್ನೆಡೆಗೆ ಬಹ ಭೀರುಭಾವಗಳ ಕೆಳೆಯ ನೋನೋಡೆಂದು ಸರಸ ಕೌತುಕದಿ ನುಡಿಬೆರಳ ನೇವರಿಕೆಗಳವಡುವ ಹಲಕೆಲವ- ನಾದರಿಸಿ ತೋರುತಿಹೆ ವೃತ್ತ ವೃತ್ತದೊಳು ಜೀವ ಜೀವದ ನ...
ಸೆಲ್ಫೀ ಹಿಡಿದು ಸಂಭ್ರಮಿಸುತ್ತಿರುವ ಅವರು ನಮ್ಮ ನಾಡಿನವರಲ್ಲ ಬಿಡು ಭಂಟನೆ ಇಂದು ಜುಲೈ ಐದು, ಎರಡುಸಾವಿರದ ಹದಿನೈದು ಬದುಕಿದ್ದರೆ ಕಾಸರ್‌ಬಾನು, ಅವಳ ಮಗುವಿಗೆ ಈಗ ಹದಿಮೂರರ ಹರೆಯ ಮೂಡುತ್ತಿತ್ತು. ನಿಮ್ಮ ರಕ್ತ ಸಿಕ್ತ ಕ್ರೌರ್ಯದಲ್ಲಿ ಬದುಕುಳಿದ...













