Home / ಲೇಖನ / ಸಾಹಿತ್ಯ

ಸಾಹಿತ್ಯ

ಕೆಲವೊಮ್ಮೆ ಕವಿತೆ, ಕತೆ, ಕಾದಂಬರಿ ಅಥವಾ ಪ್ರಬಂಧಗಳಂಥ ‘ಪಠ್ಯ’ಗಳಲ್ಲಿನ ಶಬ್ದಗಳನ್ನೋ ಸಂದರ್ಭ ಸೂಚನೆಗಳನ್ನೋ ಅರ್ಥಮಾಡಿಕೊಳ್ಳಬೇಕಾದರೆ ನಮಗೆ ಅಡಿಟಿಪ್ಪಣಿಗಳ ಅಥವಾ ಕೊನೆಟಿಪ್ಪಣಿಗಳ ಸಹಾಯ ಬೇಕಾಗುತ್ತದೆ; ಆಯಾಪುಟಗಳ ಅಡಿಯಲ್ಲೇ ಮುದ್ರಿತವಾದುವು ಅಡ...

ನವೋದಯದಲ್ಲೇ ಪ್ರಾರಂಭಿಸಿ ನಮ್ಮ ನವ್ಯೋತ್ತರ ಕಾವ್ಯಮಾರ್ಗಗಳನ್ನೂ ಹಾದು ಬಂದ ನಿಸಾರ್ ಅಹಮದ್ರ ಕಾವ್ಯ ಕೃಷಿ ಮೂವತ್ತೈದು ವರ್ಷಗಳಿಗಿಂತ ಹೆಚ್ಚಿನದು. ಕನ್ನಡ ಕಾವ್ಯಕ್ಕೆ ಲವಲವಿಕೆ, ಅನುಭವ ವೈವಿಧ್ಯ, ಪ್ರಯೋಗಶೀಲತೆ, ಮಾತುಗಾರಿಕೆಯ ರೋಚಕತೆಗಳನ್ನು ರ...

ವಿಚಾರ ಸಾಹಿತ್ಯಕ್ಕೆ ತನ್ನದೇ ಆದ ಅನನ್ಯತೆ ಇದೆ. ಆದ್ದರಿಂದಲೇ ಇದರ ಹರವು ದೊಡ್ಡದು. ಇಲ್ಲಿ ವಿಷಯದ ನೇರ ಮತ್ತು ಸುಲಭ ಸಂವಹನ ಸಾಧ್ಯ. ಹೆಚ್ಚು ಹೆಚ್ಚು ಯಾಂತ್ರೀಕೃತಗೊಳ್ಳುತ್ತಿರುವ ಹಾಗೂ ಸಮಯವೇ ದುರ್ಲಭವಾಗುತ್ತಿರುವ ಇವತ್ತಿನ ದಿನಗಳಲ್ಲಿ ‘ವಕ್ರ...

ವೃತ್ತಿಪರತೆ ಎನ್ನುವುದು ಇಂದು ಎಲ್ಲಾ ಕ್ಷೇತ್ರಗಳನ್ನೂ ಆವರಿಸಿಕೊಂಡಿದೆ. ದಿನನಿತ್ಯದ ಸಂಗತಿಗಳಾದ ಆಡುಗೆ, ಹೊಲಿಗೆ, ಪಾಠ ಹೇಳುವುದು, ಕೂದಲು ಕತ್ತರಿಸಿಕೊಳ್ಳುವುದರಿಂದ ಹಿಡಿದು ಕ್ರಿಕೆಟ್‍ನಂತಹ ಕ್ರೀಡೆಗಳ ತನಕವೂ ಈ ಪ್ರವೃತ್ತಿ ಇಣುಕುತ್ತಿದೆ. ಕ...

‘ಕಾವ್ಯಪ್ರಭಾವ’ದ ಮೂಲಕ ನಾನು ಹಿಂದಣ ಕವಿಗಳಿಂದ ಮುಂದಣ ಕವಿಗಳಿಗೆ ಪ್ರಸರಿಸುವ ವಸ್ತುವಿಷಯಗಳನ್ನಾಗಲಿ ಪ್ರತಿಮೆಗಳನ್ನಾಗಲಿ ಉದ್ದೇಶಿಸುವುದಿಲ್ಲ. ಇದು ‘ಸಾಧಾರಣವಾಗಿ ನಡೆಯುವಂಥ ಸಂಗತಿ’, ಹಾಗೂ ಮುಂದಣ ಕವಿಗಳಲ್ಲಿ ಇಂಥ ಪ್ರಸರಣ ಆತಂಕ ಉಂಟುಮಾಡುತ್ತ...

ಒತ್ತಾಸೆ : ದಿನಾಂಕ ೨೩, ೨೪, ನವೆಂಬರ್ ೨೦೦೨ರಂದು ಮಹಲಿಂಗಪುರದಲ್ಲಿ ನಡೆದ ೧೩ನೇ ರಾಜ್ಯ ಬಂಡಾಯ ಸಾಹಿತ್ಯ ಸಮ್ಮೇಳನದ ಸಂದರ್ಭಕ್ಕಾಗಿ ಬರೆದ ಲೇಖನ. ಬಂಡಾಯದ ಕ್ರಿಯೆ ಮತ್ತು ಸಾಹಿತ್ಯ ಇವತ್ತಿಗೂ ಜೀವಂತವಾಗಿದೆ. ಆದರೆ ಪ್ರಖರವಾಗಿಲ್ಲ. ಈ ಪ್ರಶ್ನೆ ಸ...

ಈಗ ಎಲ್ಲವೂ ಮಸಕು ಮಸಕಾಗುತ್ತಿವೆ; ಒಂದು ದಿನ ನಾನು ಎಲ್ಲವನ್ನೂ ಮರೆತುಬಿಡುತ್ತೇನೆ. ಆದರೂ ಕೆಲವೊಂದು ನೆನಪುಗಳು ಇನ್ನೂ ಗಾಢವಾಗಿ ಉಳಿದುಕೊಂಡಿವೆ. ಅವನ್ನು ದಾಖಲಿಸುವ ತವಕವೋ ತಿಳಿಯದು; ಅವು ಧುಮ್ಮಿಕ್ಕಿ ಬರುತ್ತವೆ. ಕೆಲವು ವರ್ಷಗಳ ಹಿಂದೆ ನಾನು...

(ಕೆಲವು ಟಿಪ್ಪಣಿಗಳು) ೧೯೭೩ರಲ್ಲಿ ಹೊರಬಂದ ‘ಅಬಚೂರಿನ ಪೋಸ್ಟಾಫೀಸು’ ಸಂಕಲನಕ್ಕೆ ತೇಜಸ್ವಿ ಬರೆದ ಮೊದಲ ಮಾತು ಅವರ ಕಥಾಸಂಕಲನದ ಕಥೆಗಳಂತೆಯೇ ಮುಖ್ಯವಾದ ಚರ್ಚೆಗೆ ವೇದಿಕೆಯಾಗುವಂತಿದೆ. ‘ಹೊಸದಿಂಗಂತದೆಡೆಗೆ’ ಎಂಬ ಶೀರ್ಷಿಕೆಯಡಿ ಬರೆದ ಮಾತುಗಳಲ್ಲಿ ...

ಬಂಡಾಯದ ಸಂವೇದನೆ ಯಾವತ್ತೂ ಜೀವಂತವಾದುದು. ಇದು ಕೆಲವು ಕಾಲಗಳಲ್ಲಿ ಉನ್ನತಾವಸ್ಥೆಯಲ್ಲಿರಬಹುದು, ಇನ್ನೂ ಕೆಲವು ಕಾಲಗಳಲ್ಲಿ ಕ್ಷೀಣಾವಸ್ಥೆಯಲ್ಲಿರಬಹುದು. ಆದರೆ ಇವುಗಳಲ್ಲಿ ಯಾವೊಂದು ಅವಸ್ಥೆಯ ಅಸ್ತಿತ್ವವನ್ನು ಸಹ ಬಹುಮುಖಿ ಕಾರಣಗಳು ನಿರ್ಧರಿಸುತ...

ಜಾನ್ ರಸ್ಕಿನ್ (೧೮೧೯-೧೯೦೦) ತನ್ನ ‘ಸೇಸಮೆ ಮತ್ತು ಲಿಲಿಹೂಗಳು’ (Sesame and lilies) ಎಂಬ ಎರಡು ಭಾಷಣಗಳ ಮೊದಲನೆಯದರ ಮಧ್ಯೆ ಅಚಾನಕ ಎಂಬಂತೆ ೧೮೬೭ರ ಡೈಲಿ ಟೆಲಿಗ್ರಾಫ್ ಪತ್ರಿಕೆಯಿಂದ ವರದಿಯೊಂದನ್ನು ಉದ್ದರಿಸುತ್ತಾನೆ. ಅದೊಂದು ಸಾವಿಗೆ ಸಂಬಂ...

ಬೀರ ಹಾಸಿಗೆಯಲ್ಲಿ ಹೊರಳುತ್ತಿದ್ದಾನೆ, ಕಣ್ಣಿಗೆ ನಿದ್ರೆಯಿಲ್ಲ; ಮನಸ್ಸಿಗೆ ಶಾ೦ತಿಯಿಲ್ಲ. ಸಾಯಂಕಾಲ ಊರ ಚಾವಡಿಯಲ್ಲಿ “ಹೆಚ್ಚು ಆಹಾರ ಧಾನ್ಯ ಬೆಳೆಯಿರಿ!” ಎಂಬ ವಿಷಯದ ಮೇಲೆ ಅಧಿಕಾರಿಗಳ ವ್ಯಾಖ್ಯಾನ ಕೇಳಿದ್ದನಾತ. ಆಗಿನಿಂದಲೂ ಅವನಿಗೆ ತಾನೊಂದು ಬಾವಿಯನ್ನೇಕೆ ತೋಡಬಾರದು ಎನ್ನ...

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...