
ಹೂವು ಕೋಮಲವು ಒಲುಮೆಯೆ ನಿಶ್ಚಯವಾಗಿಯೂ ಹೂವಿನ ಬಲವು ಹೂವು- ಪ್ರಖರ ಸೂರ್ಯನನ್ನೂ ದಿಟ್ಟಿಸಿ ನೋಡುವುದು ಬಿರುಗಾಳಿಯನೂ ಬೆದರಿಸಿ ಅಟ್ಟುವುದು ಮಂಜಿಗೆ ಅಂಜದು ಮಳೆಗೂ ತಲ್ಲಣಿಸದು ದೇವರ ಕೊರಳನ್ನೂ ತಬ್ಬುವುದು ದಾಸಿಯ ಹೆರಳಲ್ಲೂ ಹಬ್ಬುವುದು ಮನುಷ್ಯನ...
ಹೂವು ಮಿತಭಾಷಿ ಮರಿ ದುಂಬಿಯ ಜೊತೆ ಸ್ನೇಹ ಮಾಡುವುದು ಗಾಳಿಯೊಡನೆ ಲಲ್ಲೆಯಾಡುವುದು ಚಿಟ್ಟೆಯನೂ ಮಾತಿಗೆ ಎಳೆಯುವುದು ಪ್ರೀತಿಯೆ ಹೂವಿನ ಭಾಷೆ ಅದಿಲ್ಲದಿರಲು ಪೂರೈಸದು ಹೂವಿನೊಂದಿಗೆ ಮಾತಾಡುವ ಆಶೆ. *****...
ಕರುಣಾಮಯಿ ಹೂವು ಜಗತ್ತಿನ ಒಳಿತಿಗಾಗಿ ಧೇನಿಸುವುದು ಹೂವಿನ ಧ್ಯಾನವೆ ಧ್ಯಾನ ಅದು ಪರಿಮಳಿಸಿ ಲೋಕವ ವ್ಯಾಪಿಸುವುದು ಪರಿಮಳಕೆ ಪಕ್ಕಾಗಿ ಕೇಡು ತಂತಾನೆ ಹಿಂಜರಿದು ನಿರ್‍ಗಮಿಸುವುದು ಹೂವಿಗೆ ಧ್ಯಾನವೇ ಜೀವನ ಮರಣವೂ ಹೂವಿಗೆ ಸಮಾನ. *****...
ಗರ್‍ವವೆಂಬುದು ಹೂವಿನ ಬಳಿ ಸುಳಿಯದು ಎಷ್ಟೊಂದು ಚೆಲುವು ಘನವಾದ ಒಲವು ನಿರಂತರ ಧ್ಯಾನದ ಫಲವು ಮೈತ್ರಿ-ಕರುಣೆ ಎಂದು ಬುದ್ಧ ಬೋಧಿಸಿದ್ದ ಪೂರ್‍ವಜನ್ಮದ ಸ್ಮರಣೆ ಅವನು ಹೂವಾಗಿದ್ದ. *****...
ಕಗ್ಗತ್ತಲ ಭೇದಿಸಲೊಂದು ಬಿಸಿಲ ಕೋಲು ಉಸಿರಾಡಲು ಒಂದಿಷ್ಟು ಗಾಳಿ ಇನ್ನೇನು ಬೇಕು? ಕಚ್ಚಲೊಂದು ಬಣ್ಣದ ಚೆಂಡು ಚಚ್ಚಲೊಂದು ಮರದ ಕುದುರೆ ಇನ್ನೇನು ಬೇಕು? ಬರೆಯಲೊಂದು ಮಣಿಕಟ್ಟಿನ ಸ್ಲೇಟು ಬತ್ತಾಸು ಕೊಳ್ಳಲು ಆರು ಕಾಸು ಇನ್ನೇನು ಬೇಕು? ಕಣ್ಣಿಗೆ ಹ...







