ಇಬ್ಬನಿಯಲಿ ತೊಯ್ದಂತಿರುವ
ಆ ಕಣ್ಣುಗಳನ್ನೂ
ಉಕ್ಕಿನಂತ ಗಡುಸಾಗಿರುವ
ಆ ತೋಳುಗಳನ್ನೂ
ಹೂವಿನಷ್ಟೇ ಮೃದುವಾದ
ಅವನಾತ್ಮವನ್ನೂ ಮುಟ್ಟಿದೆ

ದೇವರೇ…
ಅದು ಅಹಂಕಾರದ ಮೊಟ್ಟೆ!

ಅಂತೆಯೆ
ಉರಿಗಣ್ಣಲಿ ನಿಲಿಸಿ
ಹದವಾಗಿ ಬೇಯಿಸಿದೆ

ಚಿಪ್ಪೊಡೆದು
ಹೊಳೆಯಿತು ಮಿಂಚು

ಹಣೆಯಲ್ಲಿ ಧರಿಸಿದೆ.
*****