
ನನಗೇಕೋ ಈಗೀಗ ಮಾತುಗಳೇ ಕೇಳುವುದೇ ಬೇಡಾಗುತ್ತದೆ, ಸುಮ್ಮನೆ ಹೀಗೆ ಮೌನವಾಗಿ ನಡೆಯ ಬೇಕೆನಿಸುತ್ತದೆ, ಮಾತಿನ ಗದ್ದಲದ ಸಂತೆಯಲಿ ಸಿಕ್ಕು ಮನಸ್ಸೀಗ ನಜ್ಜುಗುಜ್ಜಾಗಿದೆ ಅಜ್ಜಿಯಾಗಿದೆ. ಈಗ ಮಾತುಗಳೇ ಕಿವಿಗಳಿಗೆ ಬೇಡ ಎಲ್ಲಿಯೂ ಒಂದು ಪ್ರಮಾಣಿಕ ಮಾತಿನ...
ಬೀಜ ಬಿತ್ತಿದ ಅಮ್ಮನ ಹಿತ್ತಲಲಿ ಹಕ್ಕಿ ಪಕ್ಷಿಗಳ ಇನಿದನಿ ಚಿಮ್ಮಿ ಅರಳಿ ಘಮ್ಮೆಂದು ಸೂಸಿ ನೆಲತುಂಬ ಹರಡಿ ಹಾಸಿದ ಪಾರಿಜಾತ ಹೂರಾಶಿ. ಅಲ್ಲೇ ಬಟ್ಟೆ ಒಗೆಯುವ ಕಲ್ಲಮೇಲೆ ಮೂಡಿವೆ ಅವಳ ಕೈ ಬೆರಳ ಬಳೆಗಳ ಚಿಕ್ಕೀ ನಾದ ರೇಖೆಗಳು ಚಿತ್ತ ಪಟ ಪಾತರಗಿತ್ತಿ...









