ಹಳದಿ ಎಲೆ ಉದುರಿ ಹಸಿರು ಎಲೆ ಚಿಗುರು, ಹೊದ್ದ ಹೂವ ಗಿಡಗಳಿಗೆ ಅವನ ಸ್ಪರ್ಶ ಇನ್ನೂ, ರೆಕ್ಕೆ ಬಿಚ್ಚಿದ ಮುದ್ದು ಮರಿಗಳ ಕೆಂಪು ಕೊಕ್ಕು, ಮೋಡಗಳ ಬೀಜ ಹರಡಿದ ನೀಲ ಬಾನು, ನಾಳೆಯ ಚಿಂತೆಯಿರದ ವಸಂತನ ಹಸಿರು ಓಕುಳಿ. ಮೊಳೆತ ಮೌನ ಮಾತುಗಳಿಗೆ ಸೂರ್ಯನ ...

ಈ ನೋವಿನ ಬದುಕಿನಲ್ಲಿ ಬರೀ ಬುದ್ಧಿಯ ವಿಚಾರಗಳಿಂದ ಉಪಯೋಗವಿಲ್ಲ ದೇವರೇ ಈ ಮೂಳೆಯೊಳಗೆ ಇಳಿಯುವ, ಹಲ್ಲು ಉದುರಿಸುವ ಚಳಿಯಿಂದ ನನಗೆ ನಿನ್ನ ಬೆಚ್ಚನೆಯ ಭರವಸೆಯ ಕಂಬಳಿ ಹೊದೆಯಬೇಕಾಗಿದೆ. ಒಂದು ಮಧುರ ಹಾಡು ಮತ್ತೆ ಮಬ್ಬಾದ ಚಿಕ್ಕಿಗಳ ಹೊಳಪು ಈ ಜಗದ ಹ...

ಬಿಟ್ಟು ಬಿಡದೇ ನಡೆದೆ ನಡೆದರು ದಾರಿತುಂಬ ಕಲ್ಲು ಮಣ್ಣು ಹೆಂಟೆಗಳು. ಹಟ್ಟಿಯ ಮಾಡಿನಲಿ ಗುಬ್ಬಚ್ಚಿ ಗೂಡು. ಪುಟ್ಟ ಸೇತುವೆಯ ಕೆಳಗೆ ಸಳಸಳ ಮೀನುಗಳು, ಎಲ್ಲಾ ಗಿಡಗಳ ತುಂಬ ಹಕ್ಕೀ ಹಾಡು. ಹಸಿರು ಸೊಂಪಿನ ದಾರಿತುಂಬ ಕಂಡ, ಬೇಟೆಯ ಹೆಜ್ಜೆಗಳು, ಏರು ದ...

ಭಾವ ಚಿತ್ರಗಳನ್ನು ಹೊತ್ತ ಗೋಡೆ ಮೌನದಲ್ಲೂ ಇತಿಹಾಸ ಬಿಂಬಿಸುತ್ತದೆ. ಗೋಡೆಗಳು ಕಿಟಕಿಗಳು, ಬಾಗಿಲುಗಳು ತಮ್ಮೊಳಗೆ ಮನೆಯ ಮನಸ್ಸಿನ ಕಂಪನಗಳ ಬಗ್ಗೆ ಮಾತನಾಡಿಕೊಳ್ಳುತ್ತವೆ. ಮತ್ತೆ ಇರುವೆಗಳು ಎಲ್ಲಾ ಜಾಗಗಳನ್ನು ಮೂಸಿಸುತ್ತವೆ ಹಿತವಾಗಿ. ಬಚ್ಚಲ ಮನ...

ಆ ಜಾತ್ರೆಯ ತುಂಬೆಲ್ಲಾ ಮಣ್ಣ ವಾಸನೆ ಹರ್ಷ ಗೆಲವು ಅತಿರೇಕಗಳು ತೊಟ್ಟಿಕ್ಕುವ ನಾಟಕಗಳು ಅಂಕದ ಪರದೆ, ಹೆಜ್ಜೆಗಳ ಮೇಲೆ ಅವರಿವರ ಪಾದದ ಗುರುತುಗಳು. ಆಶ್ಚರ್ಯ ಆಸಕ್ತಿಯ ಪರದೆಯ ಕತ್ತಲು ಬೆಳಕಿನಲಿ ಮಾರಾಟಕ್ಕೆ ಇವೆ ನಿರ್ಗತಿಕನ ಕನಸುಗಳು. ಗುಂಪಿನ ಮಧ...

ಮಂಜಿನ ತೆರೆಯ ಹೊದ್ದ ಬೆಟ್ಟದ ಮೇಲೆ ಗೋಣು ಹೊರಳಿಸಿ ತೇಲುವ ಹಕ್ಕಿ ಮತ್ತೆ ರೆಪ್ಪೆ ಭಾರದ ಬೆಳಗು, ತೆರೆದ ಕಿಟಕಿಯ ಹೊರಗೆ ಮುಸುಕು ಮುಗಿಲು, ಧೂಳು ಬೀದಿಯಲಿ ಬೆನ್ನಹತ್ತಿ ತಿರುಗುವ ನಾಯಿಗಳು. ಬಾಗಿಲಿಗೆ ಬಿದ್ದ ವರ್ತಮಾನ ಪತ್ರಿಕೆಯ ತುಂಬ ಕೆಂಪು ನೆ...

ಹೂವು ಅರಳಿದ ಮರದ ಕೆಳಗೆ ಕುಳಿತ ಅವಳು ಕನಸಿನ ಅರಮನೆಯ ರಾಜಕುಮಾರಿಯಂತೆ ಮಗಳ ತಬ್ಬಿ ಎದೆಗಪ್ಪಿಕೊಂಡಿದ್ದಾಳೆ. ಆಕಾಶದಲ್ಲಿ ಒಂಟಿ ಹದ್ದು ಹಾರಾಡುತ್ತಿದೆ ಆ ಮಟಮಟ ಮಧ್ಯಾಹ್ನದಲಿ. ನೆರಳ ನೆನಪುಗಳಲಿ ತಣ್ಣ ಮಣ್ಣಲಿ ಸಡಗರದಲ್ಲಿ ಬೆಳಕು ಅರಳುತಿರಲು ಯಾವ...

ಮನಸ್ಸಿನಾಳಕೆ ಇಳಿದ ನಿಮ್ಮ ಘನ ವೇದ್ಯ, ಪಾಪ ಪುಣ್ಯ ಸುಖ ದುಃಖ ಎಲ್ಲವ ದಾಟಿ ಮರಣವನು ಜನನವಾಗಿಸಿ, ಕಾಲ ಸರಿದ ಮಹಿಮೆ ಅವನ ನಿಜ ಒಲವು. ಎಲ್ಲ ವಿಷಯಗಳ ಅರಿದೆನೆಂಬ ಅಹಂ ಭಾವ ನಿಜದ ನೆರಳ ಸವರಿ ಸುಖಕ್ಕೆ ಆರೋಚಕವಿಲ್ಲ. ಶರಣನಿಗೆ ಭಯವಿಲ್ಲ ಬಂಧನವಿಲ್ಲ...

ಮುಂಜಾನೆ ಸೂರ್ಯನ ಕಿರಣಗಳು ಸೋಕಿ ತೆರೆದ ಕಣ್ಣುಗಳ ತುಂಬ ಕಾಲಾತೀತ ಕವಿತೆಗಳು. ಗುಂಪಿನಲಿ ತೇಲಿಹೋದ ಅವರಿವರ ಹೆಜ್ಜೆಗಳು ಕಾಲುದಾರಿ ನಿರ್ಮಿಸಿ ಸುಖದ ಸಂತೋಷದ ಗಳಿಗೆಗಳು. ನಂಬಿಕೆಗಳು ಊರತುಂಬ ಹರಡಿದ ಗಾಳಿ. ಯಾರದೋ ಪಾಪ ಪ್ರಾಯಶ್ಚಿತ ತೊಳೆದು, ಸರಿ...

ಕಾಲ ಮಾಗಿದ ಹಾಗೆ ಆಳ ನಿರಾಳವಾಗಿ ಹೃದಯಗಳ ಕಂಪನಗಳ ಭಾವ, ಸ್ಪುರಣದ ಶಕ್ತಿ ಅಂತಃಕರಣ ಕಲುಕಿದ ಕ್ಷಣಗಳು, ಮತ್ತೆ ಆಧ್ಯಾತ್ಮದ ಅರಿವು ಒಳಗೊಳಗೆ ಇಳಿದಾಗ ಸೂರ್ಯ ಉದಯಿಸುತ್ತಾನೆ. ಗಂಧದ ಹೂಗಳ ಪರಿಮಳದ ಸೂಕ್ಷ್ಮ ಗಾಳಿಯಲಿ ತೇಲಿ ಮನಸ್ಸು ಅರಳಿದಾಗ, ಅವ ದ...

12345...21