ಆಸೆ – ೨
ದಟ್ಟವಾಗಿ ಹಬ್ಬಿರುವ ಈ ಬಳ್ಳಿಯಲ್ಲಿ ಪುಟ್ಟದಾಗರಗಳಿರುವ ನೂರಾರು ಹೂಗಳ ನಿಗೂಢದಲ್ಲಡಗಿರುವ ಸೂಜಿ ಮನೆ ಮಕರಂಧ ಬಿಂದುಗಳಿಗೆ ಇನ್ಯಾವುದೋ ಗೂಡ ಸೇರಿ ಜೀನಾಗಿಬಿಡುವಾಸೆ. *****
ದಟ್ಟವಾಗಿ ಹಬ್ಬಿರುವ ಈ ಬಳ್ಳಿಯಲ್ಲಿ ಪುಟ್ಟದಾಗರಗಳಿರುವ ನೂರಾರು ಹೂಗಳ ನಿಗೂಢದಲ್ಲಡಗಿರುವ ಸೂಜಿ ಮನೆ ಮಕರಂಧ ಬಿಂದುಗಳಿಗೆ ಇನ್ಯಾವುದೋ ಗೂಡ ಸೇರಿ ಜೀನಾಗಿಬಿಡುವಾಸೆ. *****
ಆವಿಯಾಗಿ ಆಕಾಶಕ್ಕೇರಿ ಮಳೆಯಾಗಿ ಮತ್ತೆ ಇಳೆಗಿಳಿದು ಬಂದ ಒಂದೊಂದು ನೀರ ಹನಿಗೂ ಹೊಳೆಯಾಗಿ ಸಾಗರವ ಸೇರುವಾಸೆ *****
ಇರುವುದೊಂದೇ ಬಣ್ಣ ಅದು ಹೋಳಾದಾಗ ಕಾಣುವುದು ಏಳು ಇದಕ್ಕೆ ಏನೇನೋ ಹೆಸರು ಮಳೆಬಿಲ್ಲು, ಇಂದ್ರ ಧನಸ್ಸು, ಸೂರೆಗೊಂಡಿದೆ ಇದು ಕವಿ ಜನರ ಮನಸ್ಸು ಎಷ್ಟೊಂದು ಸುಮಧುರ ಎಂದ್ಯಾರೋ […]
ಉದ್ದ ಕೊಕ್ಕಿನ ಬೆಳ್ಳಕ್ಕಿಗೆ ಮೀನ ಹಿಡಿಯುವುದಕ್ಕಾಗಿಯೇ ದೇವರು ಕೊಟ್ಟಿದ್ದಾನೋ ಈ ಕೊಕ್ಕು ಅಥವಾ ಕೊಕ್ಕು ಉದ್ದಕ್ಕಿದೆಯೆಂಬುದಕ್ಕಾಗಿ ಇವು ಮೀನು ಹಿಡಿಯುತ್ತವೆಯೋ ಗೊತ್ತಿಲ್ಲ ಸ್ಪಷ್ಟ. ಸೃಷ್ಟಿ ರಹಸ್ಯವನ್ನು ಅಡಗಿಸಿಕೊಂಡಿರುವ […]
ಮಳೆಗಾಲದಲ್ಲಿ ಬಸಿರಿಯಂತೆ ಮೈತುಂಬಿ ಬಾಯ್ಗೆ ಸಿಕ್ಕ ಜೊಂಡು ಹುಲ್ಲನ್ನೆಲ್ಲ ತಿಂದುಂಡ ನದಿ, ಈಗ ಬೇಸಿಗೆಯಲ್ಲಿ ಬಾಣಂತಿಯಂತೆ ಕೃಶವಾಗಿ ಬೆಂಡು; ಹೆತ್ತು ಮರಳ ಹಾಸಿಗೆಯ ಮೇಲೆ ಮಲಗಿಸಿದ್ದು ಮಾತ್ರ […]
ದಿನವೂ ಅದರ ದಂಡೆ ಮೇಲೆ ವಾಕ್ ಹೋಗುವ ಆ ಕೆರೆ ಕಂಡರೆ ನನಗೆ ಪಂಚಪ್ರಾಣ ಆದರೇನು ಮಾಡೋಣ ಕೆಲವು ನತದೃಷ್ಟರಿಗೆ ಆ ಕೆರೆ ಪ್ರಾಣ ಬಿಡಲಿಕ್ಕೆ ಆಗಿಬಿಟ್ಟಿದೆ […]
ಕಂಡು ಕೇಳರಿಯದ ಇಂಥ ಪ್ರಳಯಾಂತಕ ಅನಾಹುತ ಮಾಡಿದ ಈ ಬದ್ನಾಮಿಗೆ ಯಾವ ಆಸಾಮಿ ಇಟ್ಟನೋ ಸ್ವಾಮಿ ಇನ್ನೊಂದು ಅಪ್ಯಾಯಮಾನ ಹೆಸರು ಸುನಾಮಿ. *****
ಹಾಲನ್ನೇ ಕಾಣದ ಕೊಳಗೇರಿ ಮಕ್ಕಳ ನೀರಿಲ್ಲದ ನಲ್ಲಿಗಳಲ್ಲಿ ಆಲ್ಕೋಹಾಲ್ ವಾಸನೆ ಚುನಾವಣೆ ಸಂದರ್ಭದಲ್ಲಿ. *****
ಹಣದಿಂದ ಚುನಾವಣೆ ಚುನಾವಣೆಯಿಂದ ಅಧಿಕಾರ ಅಧಿಕಾರದಿಂದ ಹಣ ಮತ್ತೆ ಚುನಾವಣೆ, ಇದೊಂದು ವಿಷ ಚಕ್ರ ಬರೀ ಚಕ್ರವಲ್ಲ, ಒಮ್ಮೆ ಒಳ ಹೊಕ್ಕರೆ ಹೊರ ಬರಲಾರದ ಸುಯೋಧನರ ಚಕ್ರವ್ಯೂಹ […]