ಮುಂಜಾನೆ ಅರಳಿ ಸಂಜೆಗೇ ನಿನ್ನ ಮಣ್ಣ ತಣ್ಣನೆಯ ಮಡಲಿಗೆ ಮರಳಿಬಿಡುವ ಹೆಸರಿರದ ಸಣ್ಣ ಸಣ್ಣ ಬಣ್ಣ ಬಣ್ಣದ ಹೂವುಗಳಿಂದಾಗಿಯೇ ಧಾರಿಣೀ, ನೀನು ನವ ನವೋನ್ಮೇಶ ಶಾಲಿನಿ *****...

ತಾರೆಯರು ತಾರೆಯರು ಅಪೂರ್ವ ಸುಂದರಿಯರು – ನನಗೆಲ್ಲಾ ಗೊತ್ತೋ ತಮ್ಮ ಥಳಕು ಮೇಕಪ್‌ನಲ್ಲಿ ರಾತ್ರಿ ಆಕಾಶ ತೋರ್‍ಸಿ ಥಳಪಳ ಹೊಳೆಯುವ ಈ ವಯ್ಯಾರಿಯರು; ಹೇಳ್ತೇನೆ ಕೇಳು ಹಗಲು ಮುಖವನ್ನೇ ತೋರಿಸಲು ಅಂಜಿ ಓಡುವ ಇವರು ಬರೀ ರಾತ್ರಿ ರಾಣಿಯರು. ***...

ಬೇಡ ಕಣೋ ಚಂದ್ರ ಭೂಮಿ ಜತೆ ಸರಸ, ಅದರ ಮೈಮೇಲೆ ಅಂಟಿಕೊಂಡಿರೋ ಮನುಷ್ಯ ಜಿಗಣಿಗಳು ಒಮ್ಮೆ ನಿನ್ನ ಅಂಗಳದಲ್ಲಿ ಡೇರೇ ಹಾಕಿದರೂ ಅಂದರೆ ಮುಗೀತು ತಿಳಕೋ ನಿನ್ನ ಕೆಲಸ. *****...

ಎಲ್ಲವೂ ಫಲ, ಎಲ್ಲೆಲ್ಲೂ ಫಲ ಒಂದು ಇನ್ನೊಂದರದ್ದು, ಇನ್ನೊಂದು ಮತ್ತೊಂದರದ್ದು ಈ ಭೂಮಿ ಫಲಭರಿತ ಕಾರಣ – ಕೆಲವು ಸಚ್ಚರಿತ ಮತ್ತು ಹಲವಾರು ಬರಿದುರಿತ *****...

ಸೂರ್ಯನ ಸುತ್ತ ಭೂಮಿ ಭೂಮಿಯ ಸುತ್ತ ಚಂದ್ರ ಏನಿದರ ನಿಜ ಮರ್ಮ…? ಮರ್ಮವೂ ಇಲ್ಲ ಗಿರ್ಮವೂ ಇಲ್ಲ ಹೇಳುತ್ತೇನೆ ಕೇಳಿ ಇದೆಲ್ಲ ನಮ್ಮ ನಮ್ಮ ಕರ್ಮ. *****...

ಹಗಲಿಗೆ ಸೂರ್ಯ ರಾತ್ರಿಗೆ ಚಂದ್ರ ಲಕ್ಷ ನಕ್ಷತ್ರ ಗಾಳಿ, ಬೆಂಕಿ, ನೀರೆಂಬ ವಿಚಿತ್ರ ಕಾಲ ಕಾಲಕ್ಕೆ ಮಳೆ ಬೆಳೆ ಸಮೃದ್ಧವಾದಿಳೆ ಇಷ್ಟಿದ್ದರೂ ನೀನು ಹಗಲೂ ರಾತ್ರಿ ಮುನ್ನೂರು ಅರವತ್ತೈದು ದಿನವೂ ಸುತ್ತುವುದೇಕೆಂದು ಕೇಳುವ ನನ್ನ ಮಕ್ಕಳ ಪ್ರಶ್ನೆ ಕೇಳ...

ಅಮ್ಮಾ, ಅಮ್ಮಾ, ಸೂರ್ಯ ಮುಳುಗೋದು ಇಲ್ವಂತೆ ಮಲಗೋದು ಇಲ್ವಂತೆ ಅದೆಲ್ಲಾ ಸುಳ್ಳಂತೆ ಹ್ಹೂ ನಮ್ಮ ಮಿಸ್ಸೇ ಹೇಳಿದ್ರು ಅವನು ಸಂಜೆ ಆಗ್ತಿದ್ದಂತೆ ಸ್ಪೀಡಾಗಿ ಅಮೇರಿಕಾಕ್ಕೆ ಹೋಗಿ, ಬೆಳಗಾಗ್ತಿದ್ಹಾಂಗೆ ವಾಪಸ್ಸು ಬಂದ್ಬಿಡ್ತಾನಂತೆ. *****...

ರಾತ್ರಿ ಸೂರ್ಯ ಎಲ್ಲಿಗೆ ಹೋಗ್ತಾನೆ? ಅಪ್ಪ ಎಲ್ಲಿಗೆ ಹೋತ್ತಾನೆ? ಅದೆಲ್ಲಾ ಕೇಳ್ಬೇಡಾ ಸುಮ್ಮನೆ ಕಣ್ಮುಚ್ಚಿ ಮಲಕ್ಕೋ ಪುಟ್ಟು ಅದೆಲ್ಲಾ ನಿನಗೆ ಅರ್ಥವಾಗೋದಿಲ್ಲ ನೀನಿನ್ನು ಸಣ್ಣವನು. *****...

1...1314151617...25