ಓ ಸ್ವಪ್ನಾಗ್ನಿಸೃಷ್ಟಾ ನೌಕಾರೂಢಾ ಗೂಢಾ ಯಾರವನೋ ಚಿರತರುಣಾ ಬಂದಾ ಹುಬ್ಬೋ, ಅನಂಗನು ಚಿತೆಯಲಿ ಮಣಿಸಿದ ಕಬ್ಬೋ ಆಹಾ ಈ ಕಾಯಾ ಹಿರಣ್ಯಾಗರ್ಭಚ್ಛಾಯಾ – ಆಕೃತಿಬಂಧಾ ಮೌನಾ ಕರಗಿಸಿ ಎರೆದಾ, ಸೆಳೆಮಿಂಚಿನ ತೆರದಾ, ಸವಿನುಡಿ ಛಂದಾ- `ಆ ಹೃದಯ ಜ್ವ...

ಹೃದಯವು ದಣಿವಿಲಿ ನವೆದಿತ್ತು, | ಸ್ಪಂದಕೆ ಮರೆವೋ ಕವಿದಿತ್ತು ಎಲ್ಲವು ಇತ್ತೆಂದಾಗಿತ್ತು, | ಮುಂದಕೆ ಇನ್ನಿಲ್ಲೆನಿಸಿತ್ತು ಬಿಲ್ಲೇ ಕಳಚಿದೆ ಕೈಯಿಂದ, | ಹೆದೆ ಹರಿದಿದೆ ಒಳಹುರಿಯಿಂದ ಕೈಗಳ ಹಿಡಿತವೆ ಸಡಿಲಾಗಿ, | ಎನಿಸಿದೆ ಆಗದು ಒಂದಾಗಿ ಪ್ರಾಣಲ...

ಯಾರಣ್ಣ ನೀ ಬಿಡುಗಣ್ಣನೇ | ಎದೆಗೆಳೆಯ ! ಕುಳಿತಿಹ ತಣ್ಣನೇ ಮಾನವನ ಕರ್ಮವ ಬಿಮ್ಮನೇ | ಸುಖದುಃಖ ನೋಡುವೆ ಸುಮ್ಮನೇ ಸಂತಾಪ ಜಾಲಕೆ ಅದರದೇ | ಮರಣಕ್ಕೂ ವಿಧಿಗೂ ಬೆದರದೇ ಕುರುಡು ಜಗ ಉರುಳುವುದ ಕಾಯುವೆ | ಸಾಕ್ಷಿ ಕಣ್ಣೂ ನೋಯವೇ ? ಈ ವಕ್ರಚಕ್ರದ ಜೊತ...

ಆ ಅಸೀಮದಾ ಸಂಚುಹೊಂಚಿನಲಿ ಒಂದು ಕುದ್ರ ಘಟಕ ವೈಶ್ವಾನರನ ಆವರ್ತನೃತ್ಯರಂಗದಲಿ ಸಣ್ಣ ಚುಟುಕ. ಬಟಾಬಯಲು ಇದು, ಹೋ ಅಭಂಡ ತಾನರ್ಥಹೀನ ಹಳವು ಅಕಸ್ಮಾತ್ತೊ ಎನುವಂತೆ ಬಂತು ಭೂಮಿಯಲಿ ನರನ ಫಲವು. ತನ್ನ ನರೆತ ಅಜ್ಞಾನದಲ್ಲಿ ತಾನೆರೆತ ಒಂದು ಪ್ರಾಣಿ ನೆರಳ...

ಚಂದ್ರಶೈಲದುನ್ನತಿಯ ರಾಜವೀಥಿಯಲಿ ಅಬ್ಬ ಬಂಡೆ ಆದಿ ಶಂಕರನ ಚಿಕ್ಕ ಗುಡಿಯೊಂದ ಕಟ್ಟಿದಂತೆ ಕಂಡೆ- ಹೊತ್ತು ಮುಗಿದ ಮುಮ್ಮೂಕ ತುದಿಗೆ ಆನಂತ್ಯದಿದಿರುಕಡೆಗೆ ಇಹದಭಂಡ ಕಥೆ ಮುಗಿಸಿದಂತೆ ಪಾಳಿನಲಿ ಒಂಟಿನಡಿಗೆ ನಿರಾಕಾರ ಏಕಾಂತ ತಂತು ಸುತ್ತುತ್ತಲಿತ್ತು ...

ಇಲ್ಲಿ, ಅಲ್ಲಿಹ, ಎಲ್ಲೆಲ್ಲೂ ಅವ ಮುಖಕ್ಕೆ ಪ್ರತಿಮುಖನಾಗಿಹನು ಹಮ್ಮಿನ ಕೋಟೆಯ ಗೋಡೆಯ ತನ್ನಯ ಬಲಭುಜದಲಿ ಸೈತಾಗಿಹನು ನಾನೋ ಅಗಸೆಯ ಸೀಮೆಗೆ ನಿಂತು ದಿಟ್ಟಿಸಿ ನೋಡೇ ನೋಡುವೆನು ಬಯಲು ಬಯಲು ನಿರವಯಲಿನಾಚೆ ನಾನನಂತ ಅನಂತ ತೋಡುವೆನು ಒಡವೆ ಒಡನೆ ಒಮ್ಮ...

`ಅಹಂಕಾರರಹಿತ ನಾನು ಮುಕ್ತ ಆತ್ಮನಂದನು- ಸುಡಲಿ ಊಟ ಬರದು ಏಕೆ ಕೂಡಲೆ ತಾನೆ’೦ದನು. ಅವನಿಗೆಂದೆ `ಏಕೊ ರೋಷ?’ `ಎಂಥ ರೋಷ ಎದರದು? ಉದರದೇವ ಹಸಿದುಕೊಂಡ ಆ ಗರ್ಜನೆ ಆದರದು!’ `ಹೀಗೊ’ ಎಂದೆ- ‘ಹೌದು’ ಎಂದ ...

ಸ್ವರ್ಣಸಮುದ್ರದಿ ಪಯಣಿಸಿಹೆ ರಜತತೀರವನು ನೂಕಿರುವೆ ಜ್ಞಾನಭಾಸ್ಕರನ ತಲುಪಿರುವೆ ಇಳೆಯಿರುಳಭಿಜಿತ್ ಸೋಕಿರುವೆ. ದೃಷ್ಟಿದೀಪಿಸುವ ಕ್ಷೇತ್ರಗಳು ಕೆಚ್ಚಿನ ಕಸುವಿನ ಬೆಟ್ಟಗಳು ಹರ್ಷಜ್ವಾಲೆಯ ಶಿಖರಗಳು ಕೇವಲ ಬೆಳಕಿನ ಗಾಳಿಯೊಳು. ಆತ್ಮವಿಸ್ಕೃತಿಯ ಕಡಲು...

ಬೆಳಕು ಬೆಳಕು ಕೊನೆಯಿರದ ಬೆಳಕು ಕತ್ತಲೆಗೆ ಖಣವೆ ಇಲ್ಲ. ಪ್ರಾಣದಲ್ಲಿ ಅಜ್ಞಾತ-ಖಾತ ತೆರೆವುದು ರಹಸ್ಯವೆಲ್ಲ. ಜಡದಗಾಧ ಆಖಾತ ಮುಂಚೆ ಮುಚ್ಚಿತ್ತು ತನ್ನ ನೆಲೆಯ. ಲವಲವಿಕೆಯಲ್ಲಿ ಎಚ್ಚೆತ್ತು ಈಗ ಎತ್ತಿಹುದು ತನ್ನ ತಲೆಯ. ಬೆಳಕು, ಹೊತ್ತಿರದ ಬೆಳಕು ...

ನನ್ನ ಜೀವ ಮನ ಹಿಗ್ಗಿ ಹಿಗ್ಗಿ ಆಕಾಶಕಿಂತ ಅಗಲ ಆವರಣರಹಿತದಾಕಾಲ ಮುಳುಗಿ ಉಂಡಿತ್ತು ಹರ್ಷ ಮಿಗಿಲ ಮೈಯ ಪಿಂಡ ಉಡುಗಿತ್ತು ಉಳಿದು ಜಲಲಿಪಿಯ ರೇಷೆಯಾಗಿ ಆತ್ಮದೇಕಾಂತ ಚಿಂತೆಯಲ್ಲಿ ಸ್ಮೃತಿ ಮಾತ್ರ ಶೇಷವಾಗಿ. ಬಣ್ಣ ಹಾರಿ ಅಡಗಿತ್ತು ವಿಶ್ವ ಸುತ್ತೆಲ್ಲ...