ಬಲು ಕಾಳಜಿಯೆಮ್ಮ ವಿದ್ವತ್ ಜಗದೊಳಗೆ ಲ್ಲೆಲ್ಲೂ ಕುಡಿನೀರ ಶೋಧಿಸಲುಪಕರಣಗಳು ಬಲು ಬಗೆಯೊಳಿರುತಿರಲು ಬಲು ಬಗೆಯೊ ಳಾಲೋಚಿಸಿದೊಡರಿಯುವುದೀ ಮಾಲಿನ್ಯ ಕೆಲ್ಲ ಮಾಹಿತಿಗಳನಂತೆ ಹೀರ್‍ವಜ್ಞಾನ ಕಾರಣವು – ವಿಜ್ಞಾನೇಶ್ವರಾ *****...

ಅಪ್ಪಂಗೊಂದು, ಅಮ್ಮಗೊಂದು, ಪರಿಸರಕೊಂದು ಇಪ್ಪ ಪರಿಸರದ ಸಂಬಂಧಗಳನೆಲ್ಲ ಕೊಂದು ಕಳೆ ದಿರ್‍ಪ ಸಿರಿತನವ ನೆನೆದು ಮರುಗಲಿಕೆಂದು ತಪ್ಪದಾಚರಿಪರಲಾ ವಿಶ್ವ ದಿನಗಳನೆಷ್ಟೊಂದು ಒಪ್ಪದೊಳಿಪ್ಪಲ್ಲೇ ಮೇಯದೊಡೆಲ್ಲ ಶ್ರಾದ್ಧವು ವ್ಯರ್‍ಥ – ವಿಜ್ಞಾನೇಶ...

ಅಪ್ಪದಿನ, ಅಮ್ಮದಿನ, ಮಣ್ಣದಿನ, ನೀರದಿನ ತಪ್ಪುಗಳೆಮ್ಮದೆಷ್ಟೊಂದು? ವರುಷದೆಲ್ಲ ದಿನವನು ಬೆಪ್ಪುತನದೊಳದ್ದೂರಿಯೊಳಾಚರಿಪೆವಲಾ ಚಪ್ಪರಿಸೆ ಮೂಳೆ ಮೂಳ್ಳನು ಬಾಯಿ ಕತ್ತರಿಸೆ ಬಪ್ಪ ರಕುತವ ನೆಕ್ಕುತಲಿ ನಲಿವವೊಲ್ – ವಿಜ್ಞಾನೇಶ್ವರಾ *****...

ಹೃಸ್ವವಾಗುತಿದೆ ವಿಶ್ವದಿನದರ್‍ಥ ದಿನದಿನವು ವಿಶ್ವ ಶ್ವಾಸವನವಗಣಿಸಿದಭಿವೃದ್ಧಿ ಪಥ ಪಂಥ ಹೊಸ ಹೊಸತು ಹೊಸಕುತಿರೆ ಹಸುರ ಹಂದರ ಕಸು ಕಳೆದು ಧೂಳಾಗುತಿದೆ ದಮ್ಮಿಗಾಸ್ಪದವಾಗಿ ವರ್‍ಷದೆಲ್ಲ ದಿನ ಮುಗಿದಿಹುದೆಮ್ಮ ದೌಷ್ಟ್ಯದ ನೆನಪಾಗಿ – ವಿಜ್ಞಾ...

ದಿನಕೊಂದು ವಿಶ್ವದಿನವೇನ ಮಾಡಿದೊಡೇನು ? ದಿನಪನೊಲವಿನ ದಿನಚರಿಯ ನೇಮವಿಲ್ಲದೆಲೆ ಘನತರದ ದಿನವೆಲ್ಲ ತರತರದ ವಿಶ್ವದಿನಕಾಹುತಿಯು ಧನಕಿಂತಧಿಕ ಧಾನ್ಯವೆಂಬರಿವು ಬಂದಂದು ವನ ವನ್ಯ ಧ್ಯಾನವೊಲಿದಂದು ವಿಶ್ವ ತಾ ಧನ್ಯ – ವಿಜ್ಞಾನೇಶ್ವರಾ *****...

ಸರಮಾಲೆ ಕಷ್ಟದೊಳು ಮನುಜಕುಲ ನೊಂದಿಹುದು ತರತರದ ವಿಶ್ವದಿನ ದಿನಕೊಂದು ದೋಷ ಸರಿಸಲಿಕೆಂದು ಏನೆ ಮಾಡಿದೊಡದು ಕುಂದು ಪರಿಹಾರ ಸುಲಭದೊಳಿಹುದೆಲ್ಲ ತೊಂದರೆಗು ಚರ್‍ಯೆಯೊಳು ದಿನಪನೊಡಗೂಡಿ ಬಾಳಿದಂದು – ವಿಜ್ಞಾನೇಶ್ವರಾ *****...

ಅರರೇ ! ಏನ ಪೇಳಲಿ ಎಮಗಿಂದೊದಗಿರುವ ಪರಿಸರದ ಪಾಠದೊಳಡಗಿರುವ ಹೂಟವನು ? ಪರಿಸರಕೆಂದೊಂದು ದಿನವನು ಮೀಸಲಿಡುತಲಿ ತೋರ್‍ವ ಛಾಯಾ ಚಿತ್ರದೊಳ್, ನೂರೆಂದು ಫಲಕದೊಳ್ ಮೆರೆವ ಹೊಟ್ಟೆ ಗಾಹುತಿಯಲಾ ಪೊರೆವ ಪರಿಸರವು – ವಿಜ್ಞಾನೇಶ್ವರಾ *****...

ಪರಿಸರ ದಿನದ ಸಂಭ್ರಮದೊಳೊಬ್ಬ ವಿಚ್ಛೇದಿತನು ಪಕ್ಷಿ ತಾ ಗುಟುಕಿಡುವ ಛಾಯಾ ಚಿತ್ರವನು ಪ್ರಕಟಿಸುತ ಪ್ರಶಸ್ತಿಗಳೇನ ಪಡೆದೊಡದೇನು? ಪಾಠವೆಲ್ಲವು ಜೀವ ಜಗ ಸಂಬಂಧ ವಿಚ್ಛೇದನೆಗ ಪ್ಪಂತೆ ನಡೆಯುತಿರಲೇನು ಶಾಲೆಯದೇನು? – ವಿಜ್ಞಾನೇಶ್ವರಾ *****...

ಅವರಿಗವರೇ ತುತ್ತಿನುಂಡೆಯ ಮಾಡದಿರೆ ಕೆಟ್ಟಿ ರುವ ಪರಿಸರವನುಳಿಸುವೆವೆಂದು ಬಿತ್ತಿನುಂಡೆಯನೆ ಸೆವ ಮಕ್ಕಳಾಟಕದೇನೆಂಬೆ? ಆಟವದು ಪಾಠವ ಪ್ಪಾವ ಲಕ್ಷಣವು ತೋರದಲಾ ಆ ಕ್ರಿಕೆಟ್ಟಿನೊಳೆ ಸೆವ ಚೆಂಡಿಗೆ ಮತಿ ಕಳೆವ ಮಕ್ಕಳಿಳೆಯ ತುಂಬಿರಲು – ವಿಜ್ಞಾ...

ಕೃಷಿಗೊಂದು ಕಟ್ಟಡಕೊಂದು ಕಾರ್‍ಖಾನೆಗೊಂದು, ಕಾಲಸೂಚಿಗೊಂದು ಕಾಣೀ ಜಗದೊಳೊಂದೊಂದಕೊಂದೊಂದು ಕೃತಿ ಸೂತ್ರವಾದೊಡಂ ಒಂದ ಕೊಂದಿನ್ನೊಂದು ಬದು ಕುವುದೇ ಕಾಲಸೂತ್ರವಿದರೊಳೆಲ್ಲವೂ ಬಂಧಿ – ವಿಜ್ಞಾನೇಶ್ವರಾ *****...

12345...26