ಸ್ವಾತಂತ್ರ್ಯಕ್ಕೆ ೫೦ ತುಂಬಿದಾಗ

ಸ್ವಾತಂತ್ರ್ಯ ನಿನಗೀಗ ಐವತ್ತು ನೀನು ಬಂದು ಹತ್ತು ವರ್ಷಗಳಿಗೆ ನನ್ನ ಹುಟ್ಟು ತುಂಬಿದೆ ನನಗೀಗ ನಲವತ್ತು ನೀನು ಅರ್ಧರಾತ್ರಿಯಲಿ ಕತ್ತಲೆಯನ್ನು ಸೀಳುತ್ತಾ ಸೂರ್ಯನಂತೆ ಬಂದೆಯಂತೆ, ನನಗದು ಗೊತ್ತಾಗಲೇಯಿಲ್ಲ. ಏಕೆಂದರೆ ನಾನಾಗ ಹುಟ್ಟಿರಲೇ ಇಲ್ಲ. *****

ಮೂಲವರಿಯದೆ ಪಥ್ಯವಿಲ್ಲದೆ ಚಿಕಿತ್ಸೆ ಫಲಿಸೀತೇ?

ಜಲದಾಹವತಿಯಾದರದರರ್ಥ ಮಧುಮೇಹವಿ ರಲಾಗ ಸೋಲೆನೆಂದಂತೆ ಅಪಥ್ಯದೊಳಿರಲುಂಟೇ? ಬಲು ವಿಧದ ಕಷ್ಟನಷ್ಟಗಳೆಮ್ಮ ಕೃಷಿಯೊಳಿ ರಲಿದಕೆ ಧನದಾಹ ಕಾರಣವಿದನುಪೇಕ್ಷಿಸಲಳ ವಿಲ್ಲ, ಏಕಬೆಳೆಯಧಿಕ ಬೆಳೆ ಇಳೆಯ ಕಜ್ಜಿಗೆ ಮೂಲ - ವಿಜ್ಞಾನೇಶ್ವರಾ *****

ತೇಲು

ನಿನ್ನ ತೆರೆದ ಆಕಾಶದ ಮನೆಯಲ್ಲಿ ಎದೆ ತೆರೆದು ಯಾವ ಅರಿಕೆಯಿಲ್ಲದೇ ನಾನು ಹಾಡುತ್ತಿದ್ದೇನೆ ಮತ್ತೆ ಎಲ್ಲ ರೂಹುಗಳ ಕಳಚಿಕೊಂಡ ರೆಕ್ಕೆಗಳು ಈಗ ವಿಶಿಷ್ಠವಾಗಿದೆ. ಓಣಿಯ ಕೆಸರು ದಾಟಿದ ಹೆಜ್ಜೆಗಳು ಬಯಲ ಸಂಭ್ರಮದಲ್ಲಿ ಬದುಕ ಅರಳಿಸಿ...

ಜೋಗದ ಜೋಗಿ ನೀನು

ಜೋಗದ ಜೋಗಿ ನೀನು ಏಕೆ ಕಾಡುವೆ ನನ್ನನ್ನು ನೀನು ನೀನಾಗಿರಲು ಜೋಗಿ ನನಗಿಲ್ಲ ಚಿಂತೆ ಏನು ಹೋಗು ಹೋಗೆಲೋ ಜೋಗಿ ಮುಂದಕೆ ಹೊಟ್ಟೆಗಿಲ್ಲದೆ ಕಟ್ಟೆಯೇ ಆಸರೆ ಆಗಿದೆ ಏನೆಂದು ಹೇಳಲೋ ಜೋಗಿ ಏನನ್ನು ಕೊಡಲೋ...
ಹೆಂಗುಸರು ಬಡಗಿ ಕೆಲಸ ಕಲಿಯಬೇಕೆ?

ಹೆಂಗುಸರು ಬಡಗಿ ಕೆಲಸ ಕಲಿಯಬೇಕೆ?

ಪ್ರಶ್ನೆಯು ಸುಲಭವಾದುದು ; ಕಷ್ಟವೆಂಬುದು ..... ಉತ್ತರ ಮಾತ್ರ. ಆದರೆ, ವಿದ್ಯಾರ್ಥಿಗಳ ಮೇಲೆ ಕರುಣೆಯಿಲ್ಲದೆ, ಕೇಶವ ಮಾಸ್ಟ್ರು ಅದನ್ನು ವಿದ್ಯಾರ್ಥಿಗಳ ಮುಂದೆ ಇಟ್ಟರು! ಸಹಶಿಕ್ಷಣವು ಶಾಲೆಯಲ್ಲಿ ಆರಂಭವಾದಂದಿನಿಂದ ಪುರುಷರ ಜೀವನಕ್ಕೆ ಸಂಬಂಧಿಸಿದ ವಿಷಯಗಳ ಮೇಲೆಯೇ...

ದೇಹ ಆತ್ಮ

ಆತ್ಮ ದೇಹಗಳದೇ ಒಂದು ಇತಿಹಾಸ ಇವುಗಳ ನಡುವಿನ ಹೋರಾಟ ದೊಡ್ಡ ಸಹಾಸ ಇಂದ್ರಿಯಗಳತ್ತ ಸರಿಯುವುದು ಪ್ರೇಯಸ್ಸು ಆತ್ಮ ಅನುರಾಗದ ಚಿಂತನೆಯೇ ಶ್ರೇಯಸ್ಸು ಅನಾತ್ಮನಾಗುವುದೆಂದರೆ ದೇಹ ಭಾವ ಆತ್ಮ ಅನುಭವಿಸುವಿಕೆ ದೇವ ಭಾವ ನಿತ್ಯವೂ ನಾವು...

ನನ್ನ ಹೆಂಡತಿ

ನನ್ನ ಹೆಂಡತಿ ನನ್ನನೀಗ ಕರೆಯುವುದು| ಅದು ಐತಿ, ಅದು ಕುಂತತಿ ಅದು ಪೇಪರ್ ಓದುತ್ತತಿ, ಇಲ್ಲಾ ಟಿ.ವಿ ನೋಡ್ತುತಿ|| ಮದುವೆಯಾದ ಹೊಸದರಲಿ ರೀ, ಎನ್ರೀ, ರೀ ಬರ್ರೀ, ರೀ ಹೌದಾರೀ ಅದೂ ಒಂತರಾ ರೀ.......

ಮಾತಿನ ಮರ್ಮ

ಎರಡು ಕಲ್ಲುಗಳ ನಡುವೆ ಬೆಳದ ಒಂದು ಅರಳಿ ಗಿಡವನ್ನು ಉಳಿಸಲು ಅವನು ಕಲ್ಲುಗಳನ್ನು ಜರಿಗಿಸಲು ಶ್ರಮ ಪಡುತ್ತಿದ್ದ. ಒಬ್ಬ ಶ್ರೀಮಂತ ಅಲ್ಲಿಗೆ ಬಂದು ‘ಕಲ್ಲಿನ ಮಧ್ಯ ಹೇಗೆ ಗಿಡ ಬೆಳದಿದೆಯೋ ತಿಳೀತಾ ಇಲ್ಲ’ ಎಂದ....

ಎಚ್ಚರಿಕೆ

ಹಣೆ ಬರಹದಣೆಕಟ್ಟು ಜಾತಿ ಮತಗಳ ಸುಟ್ಟು ಬಂದೇವು ಬಡವರು ಹೊಸ ಪಂಜು ಹಿಡಿದು. ಭೋರ್ಗರೆವ ನೀರೊಳಗೆ ಬಡವರೊಂದಾದೇವು ಹನಿ ಹನಿಯ ಕಿಡಿಗೊಳಿಸಿ ಅಲೆಯಾಗಿ ಹರಿದೇವು. ಅಪ್ಪಳಿಸಿ ಅಲೆಯಾಗ್ನಿ ಬೆಟ್ಟ ಬೂದಿಯಾದೀತು ಮಂತ್ರ ಹೇಳುವ ಮರ...
ಪ್ರೊಫೆಶನಲಿಸಂ ಎಂಬ ಮಾಯೆ

ಪ್ರೊಫೆಶನಲಿಸಂ ಎಂಬ ಮಾಯೆ

ವೃತ್ತಿಪರತೆ ಎನ್ನುವುದು ಇಂದು ಎಲ್ಲಾ ಕ್ಷೇತ್ರಗಳನ್ನೂ ಆವರಿಸಿಕೊಂಡಿದೆ. ದಿನನಿತ್ಯದ ಸಂಗತಿಗಳಾದ ಆಡುಗೆ, ಹೊಲಿಗೆ, ಪಾಠ ಹೇಳುವುದು, ಕೂದಲು ಕತ್ತರಿಸಿಕೊಳ್ಳುವುದರಿಂದ ಹಿಡಿದು ಕ್ರಿಕೆಟ್‍ನಂತಹ ಕ್ರೀಡೆಗಳ ತನಕವೂ ಈ ಪ್ರವೃತ್ತಿ ಇಣುಕುತ್ತಿದೆ. ಕಡೆಗೆ ಸಂಬಂಧಗಳನ್ನು ನಿರ್ವಹಿಸುವುದೂ ಕೂಡ...