ಸ್ವಾತಂತ್ರ್ಯ ನಿನಗೀಗ ಐವತ್ತು
ನೀನು ಬಂದು ಹತ್ತು
ವರ್ಷಗಳಿಗೆ ನನ್ನ ಹುಟ್ಟು
ತುಂಬಿದೆ ನನಗೀಗ ನಲವತ್ತು

ನೀನು ಅರ್ಧರಾತ್ರಿಯಲಿ
ಕತ್ತಲೆಯನ್ನು ಸೀಳುತ್ತಾ
ಸೂರ್ಯನಂತೆ ಬಂದೆಯಂತೆ,
ನನಗದು ಗೊತ್ತಾಗಲೇಯಿಲ್ಲ.
ಏಕೆಂದರೆ ನಾನಾಗ
ಹುಟ್ಟಿರಲೇ ಇಲ್ಲ.
*****