ಬುಗುರಿಹುಳದ ಧ್ಯಾನ

ನಡೆವುದೆಂದರೆ ಹೀಗೆ.... ಪ್ರದಕ್ಷಿಣಿಯೋ ಅಪ್ರದಕ್ಷಿಣಿಯೋ ಗಿರಗಿರನೆ ಗುಂಡಗೆ ಬುಗುರಿಹುಳದ ಇಡೀ ದೇಹವೇ ವೃತ್ತಾಕಾರ ತಿರುಗುತ್ತಾ ಗಾಳಿಯಿಲ್ಲದೆಯೂ ಗಿರಗಟ್ಟೆ. ತಿರುಗುತ್ತಲೇ ಒಂದಿಷ್ಟು ಮುಂದೆ ಯಾರಿಗೆ ಗೊತ್ತು? ಹಿಂದಕ್ಕೂ ಆಗಿರಬಹುದು ಆ ನಡಿಗೆ! ಅದರ ದಾರಿಯುದ್ದಕ್ಕೂ ಕಲ್ಲು...
ಕುವೆಂಪು ಕಂಡ ಅಡುಗೆಕೋಣೆ ಎಂಬ ಜಗತ್ತು

ಕುವೆಂಪು ಕಂಡ ಅಡುಗೆಕೋಣೆ ಎಂಬ ಜಗತ್ತು

ಅಡುಗೆಕೋಣೆ, ಸಾಹಿತ್ಯ ಎನ್ನುವುದನ್ನು ರೂಢಿಗತವಾಗಿ ಮಹಿಳಾ ಸಾಹಿತ್ಯದ ಬಗ್ಗೆ ಬಳಸುತ್ತಾ ಬಂದಿರುವ ವಿಮರ್ಶಾ ಲೋಕ ಕುವೆಂಪು ಚಿತ್ರಿಸಿದ ಅಡುಗೆ ಮನೆಯ ಚಿತ್ರಣಗಳನ್ನು ವಿಶೇಷವಾಗಿ ಗಮನಿಸುತ್ತದೆ. ಒಬ್ಬ ಲೇಖಕ ಎಷ್ಟು ಸೂಕ್ಷ್ಮವಾಗಿ ಅಡುಗೆಕೋಣೆಯನ್ನು ಗಮನಿಸಿದ್ದಾನೆ ಎಂದು...

ಗುರುವಿನ ಸಿರಿಪಾದಕೆ ಶರಣೆನ್ನಿರೊ

ಜೈ ತನ್ನನ್ನೇ ತಂದಾನೋ ತಾನೋ ತಂದಾನೋ ತಂದಾನಲೋ ತಂದಾನೋ ತಂದಾನೋ ದೇವರ ತಂದೋ ನಾನು ಗುರುವೇ ಗುರುವೇ ಮತ್ತೆ ಗುರುಪಾದ ಯೆಣ್ಣುವೋ ಗುರುನ ಸಿರಪಾದಕೆ ಶರಣೆನ್ನಿರೋ || ೧ || ಹಾಲುಂಡ ಹ್ಯಾಲುಂಡ ಬೇಡುಂದು...

ಎಮ್ಮಾದಿ ಪುರುಷರ ಸಂಪ್ರದಾಯವೆಂತಿತ್ತು ಗೊತ್ತಾ?

ಎಮ್ಮ ಪದ ಸಂಪ್ರದವಾದೊಡೆಮ್ಮ ಜೀವನ ಕ ಸೀಮ ಸಿರಿ ಸಂಪದ ಚಯನ ಬೇಕಿಲ್ಲವೆನು ತೆಮ್ಮ ಪಿರಿಯರಂದದ ಕೃಷಿಯನುಸುರಿದರು ಕಮತದೊಳೊಸರುವ ಬೆವರಿನೊಳಮ್ಮನರ್ಚನೆ ಮಾಡಿ ತಮ್ಮನ್ನದಾರ್‍ಜನೆಯ ದೋಷ ಕಳೆಯುತ ಬೆಳೆದಿಹರು - ವಿಜ್ಞಾನೇಶ್ವರಾ *****

ಗಗನದಂಗಳ ಹಾರು ಹಕ್ಕಿಯೆ

ಗಗನದಂಗಳ ಹಾರು ಹಕ್ಕಿಯೆ ಯಾವ ಜಾತಿಯು ನಿನ್ನದು ಶಾಂತ ಶೀತಲ ಮಧುರ ಗಾಳಿಯೆ ಯಾವ ದೇಶಾ ನಿನ್ನದು ಮನುಜ ಮನುಜನ ಜಡಿದು ಒಡೆದನು ಮನುಜ ದನುಜಾ ಅದನೆ ಆತ್ಮ ಧರ್ಮಾ ವಿಶ್ವ ಧರ್ಮಾ ಮರೆತು...

ಸಂಕ್ರಮಣ ಕಾಲ

ಬದಲಾಗಿದೆ ಕಾಲ ಸೂಕ್ಷ್ಮಾತಿಸೂಕ್ಷ್ಮ ಸಂಕ್ರಮಣ ಕಾಲ ಅಡಿಯಿಡುವ ಮುನ್ನ ನುಡಿ ಜಾರುವ ಮುನ್ನ ಎಚ್ಚರವಿರಲಿ ಹೂವೇ ಹಾವಾಗಿ ಪ್ರಕೃತಿ ವಿಕೃತಿಯಾಗಿ ಅಮೃತವೇ ವಿಷವಾಗಿ ಜೀವ ತೆಗೆಯಬಹುದು ಎಚ್ಚರವಿರಲಿ ಮಾತು ಮುತ್ತಾಗದೇ ಮೃತ್ಯುವಾಗಿ ನಗುವ ಬೆಳದಿಂಗಳು...
ವಚನ ವಿಚಾರ – ಆಸೆ ರೋಷ

ವಚನ ವಿಚಾರ – ಆಸೆ ರೋಷ

ಆಸೆಯೆಂಬ ಕೂಸನೆತ್ತಲು ರೋಷವೆಂಬ ತಾಯಿ ಮುಂದೆ ಬಂದಿಪ್ಪಳು ನೋಡಾ ಇಂತೆರಡಿಲ್ಲದೆ ಕೂಸನೆತ್ತಬಲ್ಲಡೆ ಆತನೆ ಲಿಂಗೈಕ್ಯನು ಗೊಹೇಶ್ವರ ಅಲ್ಲಮನ ವಚನ. ಮನಸ್ಸಿನಲ್ಲಿ ಹುಟ್ಟುವ ಆಸೆ ಮತ್ತು ರೋಷಗಳಿಗೆ ಇರುವುದು ತಾಯಿ ಮಕ್ಕಳ ಸಂಬಂಧ. ಒಂದನ್ನು ಬಿಟ್ಟು...

ಭಿಕ್ಷುಕಿ

ಭಿಕ್ಷುಕಿ:- ಬಿಕ್ಷಾಂದೇಹಿ! ಭಿಕ್ಷಾಂದೇಹಿ! (ಅರಸನು ಬೀದಿಯಲ್ಲಿಯ ಇವಳನ್ನು ನೋಡಿ) ಅರಸ:- ಹಗಲಿರುಳು ಗಣಿಸದಲೆ, ಮಳೆಗಾಳಿಯೆಣಿಸದಲೆ ಮನೆಮಾರು ನೆನೆಯದಲೆ, ಬಳಗವನು ಕೂಡದಲೆ ಹರಕು ಸೀರೆಯನುಟ್ಟು, ಮಾಸಿದಾ ತಲೆಬಿಟ್ಟು ಕರದಿ ಜೋಳಿಗೆ ತೊಟ್ಟು, ಕಣ್ಣೆರಡು ಒಳನಟ್ಟು ಬೀದಿ...