
ಹನ್ನೊಂದು ಸಾವಿರದ ಮುಂದೆ ಹನ್ನೊಂದು ಸಾವಿರಿದ ಮುಂದೆ ಮತ್ತೆ ಹನ್ನೊಂದು ಸಾವಿರ ಅದಕ್ಕಿಂತ ಹೆಚ್ಚು ಸಂಖ್ಯೆ ಸೂರ್ಯರಿದ್ದಾರೆ ಸಾಕೇ? ಸೂರ್ಯ, ಸೂರ್ಯ, ಇವನೊಬ್ಬನೇ ಅಂತ ಇನ್ನೊಂದ್ಸಾರಿ ಹೇಳಿದರೆ ಜೋಕೆ. *****...
ಅವನು ನನಗೆ ಬೆವರಿಳಿಸ್ಬೇಕೂಂತ ಏನ್ಮಾಡಿದರೂ ನಾನು ಜಪ್ಪೈಯಾ ಅನ್ನದಿರೋದು ನನ್ನಗತ್ತು. ಅವನು ನನ್ಮೇಲೆ ಸುರಿಸಿದ ಬೆಂಕಿನೆಲ್ಲಾ ಬೆಳದಿಂಗಳು ಮಾಡೋದ್ಹೇಗೇಂತ ನನಗೆ ಚೆನ್ನಾಗಿ ಗೊತ್ತು. *****...
ನಾನು ನೋಡಿ, ತಾರೆಗಳಿಗೆ ತಮ್ಮ ಪಾಡಿಗೆ ಮಿನುಗಿ ಮಿಂಚೋದಕ್ಕೆ ಧಾರಾಳವಾಗಿ ಬಿಡ್ತೇನೆ ಪ್ರತಿ ಅಮಾವಾಸ್ಯೆಗೂ ಅವರುಗಳಿಗೇ ಇಡೀ ಆಕಾಶ ಬಿಟ್ಟುಕೊಡ್ತೇನೆ. ಆದರೆ ಆ ಸ್ವಾರ್ಥಿ ಸೂರ್ಯ ಬಂದಾ ಅಂದರೆ ಆಯ್ತು ಇಡೀ ಆಕಾಶ ಅವನಿಗೇ ಬೇಕು. ಅವನು ಇಟ್ಟಾ ಕಾಲ...














