
ಲೋಕಮಾನ್ಯರಾದ ಗುಲಾಮು ಅಲಿ ಹಾಗು ಮಾಯೆಯ ಆಹ್ವಾನಕ್ಕನುಸರಿಸಿ ಜಹಗೀರಿನೊಳಗಿನ ಶಸ್ತ್ರಹಿಡಿಯಲು ಶಕ್ತರಾದ ಎಲ್ಲ ಗಂಡಸರೂ ತಮ್ಮ ಮನೆಯಲ್ಲಿದ್ದ ಬಿದ್ದ ಶಸ್ತ್ರಗಳನ್ನು ತಕ್ಕೊಂಡು ಬಂದು ದಂಡಿನಲ್ಲಿ ಸೇರಿದರು. ಆ ಜಹಗೀರಿನೊಳಗಿನ ಎಲ್ಲ ಬಡಿಗ-ಕಮಾರರು ಹ...
ನವಾಬ-ಪುತ್ರ ಯಾಕೂಬನನ್ನು ಸಂಹರಿಸಿದ ಮರು ದಿವಸವೇ ಗುಲಾಮ ಅಲಿಯು ಬಂಗಾಲದ ನವಾಬನಾದ ಮಜೀದಖಾನನಿಗೆ ಒಂದು ಪತ್ರ ಬರೆದನು. ಅದರಲ್ಲಿ ಅವನು ಯಾಖೂಬಖಾನನ ನಿಂದ್ಯ ಹಾಗು ತಿರಸ್ಕರಣೀಯ ಕೃತ್ಯವನ್ನೂ, ತಾನು ಅದನ್ನು ಸಹಿಸಲಾರದೆ ಅವನ ಕೊಲೆ ಮಾಡಿದ್ದನ್ನೂ,...
ಮುಂದೆ ಕೆಲ ದಿನಗಳ ತರುವಾಯ ಒಂದು ದಿನ ರಾತ್ರಿ ಗುಲಾಮ ಆಲಿಯು ಆ ನೂತನ ಚಂಡಿನಂಣಪದ ಪ್ರಾಂಗಣದಲ್ಲಿ ಯಾವನೊಬ್ಬ ತರುಣ ಯವನನ ರುಂಡವನ್ನು ತನ್ನ ಕೈಯೊಳಗಿನ ಹದನಾದ ಖಡ್ಗದಿಂದ ಕತ್ತರಿಸಿ, ಒಳ್ಳೇ ದ್ವೇಷದಿಂದ ಆ ರುಂಡದ ಕಡೆಗೆ ನೋಡುತ್ತಿರಲು, ದೇವಿ ಮಂದ...
ಎಷ್ಟೋ ವರ್ಷಗಳು ಕಳೆದವು. ಶಿವದಾಸನು ಮೃತ್ಯು ಶಯ್ಯೆಯಲ್ಲಿ ಪವಡಿಸಿದ್ದನು. ಅವಸಾನ ಕಾಲಕ್ಕೆ ಅವನು ಗುಲಾಮ ಆಲಿಯನ್ನು ಕರೆಸಿಕೊಂಡು ಮಾಯೆಯ ಕೈಯನ್ನು ಅವನ ಕೈಯಲ್ಲಿತ್ತು, ಗದ್ಗದ ಕಂಠದಿಂದ ಏನೋ ಹೇಳಬೇಕೆಂದನು; ಆದರೆ ಅಷ್ಟರಲ್ಲಿ ಅವನ ವಾಣಿಯೇ ಕುಂಠಿ...
ಮಾಯೆ ಶಿವದಾಸನ ಒಬ್ಬೊಂಟಿಗಳಾದ ಮೊಮ್ಮಗಳು. ಬಾಲ್ಯದಲ್ಲಿಯೇ ಅವಳಿಗೆ ಮಾತಾ-ಪಿತೃಗಳ ವಿಯೋಗವಾಗಿತ್ತು. ಶಿವದಾಸನಿಗೆ ಮತ್ತೆ ಇಬ್ಬರು ಮಕ್ಕಳಿದ್ದರು. ಅವರ ಮಕ್ಕಳು-ಮರಿಗಳಿಂದ ಅವನ ಮನೆ ಸುಶೋಭಿತವಾಗಿತ್ತು; ಆದರೆ ಶಿವದಾಸ ಆ ಎಲ್ಲ ಹುಡುಗರಿಗಿಂತ ತಂದೆ...
ಒಬ್ಬ ಹುಡುಗಿ ಒಂದು ತಾಂಬೂಲ ಕರಂಡಕದಲ್ಲಿ ಕೆಲವು ವೀಳ್ಯಗಳನ್ನಿಟ್ಟು ಕೊಂಡು ಶಿವದಾಸ-ಗುಲಾಮ ಆಲಿಯವರು ಕುಳಿತಲ್ಲಿಗೆ ಬಂದಳು. ಆ ಬಾಲಿಕೆ ಹನ್ನೊಂದು- ಹನ್ನೆರಡು ವರ್ಷದವಳಾಗಬಹುದು. ಅಪ್ಸರ ಕನ್ಯೆಯಂತೆ ಅವಳು ಅನುಪಮೇಯ ಸುಂದರಿಯಾಗಿದ್ದಳು. ಆ ಹುಡುಗ...
(ಒಂದು ಐತಿಹಾಸಿಕ ಪ್ರಸಂಗ) ಇಳಿ ಹೊತ್ತಿನ ಸಮಯ. ಶಿವದಾಸನು ಚಂಡಿನಂಟಪದ ಮುಮ್ಮಗಲಿನ ಛಾವಣೆಯಲ್ಲಿ ಕುಳಿತು ಎಂಥದೋ ವೇದಾಂತ ಗ್ರಂಥವನ್ನು ಏಕಾಗ್ರ ಚಿತ್ರದಿಂದ ಪಠಣಮಾಡುತಲಿದ್ದನು. ದೇವಾಲಯದ ಸಭಾಂಗಣದಲ್ಲಿ ಪ್ರೌಢ ವಯಸ್ಸಿನ ಓರ್‍ವ ಮುಸಲ್ಮಾನನು ನಿಂತ...















