ವಿರಹ

ಕಾಣಬಾರದೇನೊ ಕಣ್ಣಿಗೆ ತಾಣವಾವುದೆನ್ನ ಆಸೆಗೆ. ಕುಕ್ಷಿಗಾಗಿ ಭಿಕ್ಷೆ ಬೇಡದೆ ರಕ್ಷಣಕ್ಕೆ ಕಯ್ಯ ನೀಡಿದೆ. ಅಂತರಂಗದಮಲ ಬೆಳಕಿಗೆ ಅಂತರಾಳವೆಲ್ಲ ಹಸಿದಿದೆ. ಕಣ್ಣತುಂಬ ಮೋಡ ಮುಸುಕಿದೆ ಕಣ್ಣಗೊಂಬೆ ಕುಗ್ಗಿ ಕುಸಿದಿದೆ. ಪ್ರಳಯದಗ್ನಿ ಒಳಗೆ ಅಡಗಿದೆ ಜ್ವಲನಜ್ವಾಲೆ ಧೂಮವೆದ್ದಿದೆ....

ಬೇರೊಂದು ಬಾಯಾರಿಕೆ

ಬಾವಿಕೆರೆ ಹೊಳೆಹಳ್ಳ ಕುಂಟೆಕಾಲುವೆ ನೀರ ಕುಡಿಕುಡಿದು ಸಾಕುಸಾಕಾಯಿತೆನಗೆ ಯಾವ ಹೊಂಡದೊಳಿಳಿದು ಎಷ್ಟು ಈಂಟಿದರು ಸಹ ತೀರಲಾರದ ತೃಷೆಯು ಒಳಗೆ ಒಳಗೆ ಒಮ್ಮೆ ಕುಡಿದರೆ ಸಾಕು ತಿರುಗಿ ತೃಷೆ ತಾನೆಂದು ಸುಳಿಯಬಾರದು ಜೀವಶುಕದ ಮುಂದೆ ಒಮ್ಮೆಯಾದರು...

ವಸಂತನ ಮರೆ

ಸಂತಸದ ಸಾಗರದಿ ಶರಶೂರೆ ಸರಸಾಟ ನೆಲಕಿಷ್ಟು ಸಿರಿಯು ವಾಸಂತದಲ್ಲಿ ಅಂತವಿಲ್ಲದ ಇಂಥ ಶುಭದ ಸಂತೆಯು ಕೂಡ ಹರಿಯುವದು ಕೊನೆಗೆ ಮಳೆಗಾಲದಲ್ಲಿ ದೊರೆಯ ಭಯ ಅಲ್ಲಿಲ್ಲ ಹಿರಿಯರಂಜಿಕೆಯಿಲ್ಲ ಋತುರಾಜ ವಾಸಂತ ಕಾಲದಲ್ಲಿ ಕೊರತೆಯಿಲ್ಲದ ಸುಖವ ಬಡವಬಲ್ಲಿದರೆಲ್ಲ...

ಪಥಿಕ

ನಡೆದಿಹೆನು ನಡೆದಿಹೆನು ಅಡವಿಯ ಅರಣ್ಯದಲಿ ಮುಂಜಾನದಲ್ಲಿ ನಿನಗೆ ಕಾಣದೇನು? ಕಡುಕತ್ತಲೆಯ ಸುತ್ತು ಬಿತ್ತರಿಸಿ ಮುತ್ತುತಿಹ ಮೊದಲೆ ಬೆಳಕು ಕೊಡಲುಬಾರದೇನು? ಕಂಟಿಕಲ್ಲಗಳೆಡವುತೆಡವುತ್ತ ಮುಗ್ಗರಿಸು - ತಿರೆ ಎತ್ತಿ ನೀ ಹಿಡಿಯಬಾರದೇನು? ಕುಂಠಿಸಿತು ಅಸುಶಕ್ತಿ ಸೋತು ಸಣ್ಣಾಗಿರಲು...