
ಕರಿಯಪೂರ ನಗರದಲ್ಲಿ | ಕಽವರವರು ಪಾಂಡವ್ರವರು | ಧರಿಯ ಮ್ಯಾಲ ಲೆತ್ತನಿಟ್ಟು ಜೂಜನಾಡ್ಯಾರ ||೧|| ಪರಮಪಾಪಿ ಶಕುನಿ ತಾನು| ಫಾಶಾದೊಳಗ ಫಕೀರನಾಗಿ| ಧರ್ಮರಾಜ ಧರುಣಿ ದೌಽಪತಿನ ಸೋತರ ||೨|| ಸೋತನಂತ ದುರ್ಯೋಧನ| ಸಂತೋಷದಿಂದ ಕೇಳಿದಾನ| ದೂತನ್ಹಚ್ಚಿದಾ...
ಅಂಕ ಬಂಕಽದೆವನ| ಟೊಂಕಿನ ಮ್ಯಾಲ ಕೈಽಯಿಟ್ಟು | ಡೊಂಕಽ ನಿಂತಾನ ಇವನ್ಯಾರ| ಕೋಲೆಣ್ಣ ಕೋಲ ||೧|| ಅವ ನನ್ನ ಅಽಣ್ಣನ| ಅವ ನನ್ನ ತಽಮ್ಮನ| ಅವ ನನ್ನ ಊರ ಒಡಿಯಽನ| ಕೋ ||೨|| ಅವಽ ನನ್ನ ಊರ| ಒಡಿಯಽನ ನನ್ನ ಮಗಳ| ಅವನಿಽಗಿ ನಿನಗ ಕೊಡತೀನ| ಕೋ ||೩|| ನ...
ವರಸೀಗಿ ಬರವೂದು| ಸರಸವ್ವ ಎಳ್ಳಾಮಾಸೀ| ಕೋಲಣ್ಣ ಕೋಲ ||೧|| ಏಳ ಮಂದಿ ನೆಗೇಣಿ ಮಕ್ಳು | ಬೆಳ್ಳೆ ಬೆಳಗಾಽನ ಏಳ್ರೆ| ಕೋ ||೨|| ಬೆಳ್ಳೆ ಬೆಳಗಾಽನ ಏಳ್ರೆ| ಮನಮಾರ ಸಾರಿಸರೆವ್ವಾ| ಕೋ ||೩|| ಮನಮಾರ ಸಾರಿಸರೆವ್ವಾ | ತಲಿಯಾರೆ ಎರಕೋರೆವ್ವಾ| ಕೋ ||೪...














