ಮರಣಂ ಶರಣಂ

ದಿನಪತ್ರಿಕೆಯ ಪುಟವ ತಿರುಗಿಸಲು ಕಾಣುತಿಹವು ಸಾವು ರೈತರ ಆತ್ಮಹತ್ಯೆ ಸಾವು ಅಲ್ಲಿ ಸಾಯುವನು ಇಲ್ಲಿ ಸಾಯುವನು ದಿನವು ಸಾಯುವರು ಮಣ್ಣಿನ ಮಕ್ಕಳು ದಿನವು ಸಾಯುತಿದೆ ದೇಶದೊಕ್ಕಲು ಬೆನ್ನೆಲುಬು ಬಾನು ಬಿಕ್ಕಲು ಬೀಜ ಬಂಜೆಯಾಯಿತೋ ರೋಗ...

ಶ್ರಮದ ಹಿರಿಮೆ

ಶ್ರಮ ಜೀವನಕೆ ಜಯವೆನ್ನಿ ಶ್ರಮಿಕರಿಗೆಲ್ಲಾ ಜಯವೆನ್ನಿ ಶ್ರಮವೇ ಜೀವನಕಾಧಾರ ಶ್ರಮದಿಂದಲೇ ಜೀವನಸಾರ ಶ್ರಮವೇ ಬದುಕಿನ ಬೇರು ಶ್ರಮವಿಲ್ಲದೆ ಬದುಕೇ ನಿಸ್ಸಾರ ಮಣ್ಣಿನ ಕಣಕಣದೆಲ್ಲಿಡೆ ಮಿಡಿಯುತ ಹೂವೂ ಹಣ್ಣು ನಿತ್ಯಾ ನಿಸರ್ಗವೆಲ್ಲಾ ಚೆಲುವಿನ ತವರು ಶ್ರಮವೇ...

ಭೂತ

ಕಾಡುತಿದೆ ಭೂತ ಅನೇಕ ರೂಪಗಳಲ್ಲಿ ಅನೇಕ ಪರಿಗಳಲ್ಲಿ ಮನೆ ಬಾಗಿಲು ಕಿಟಕಿಗಳ ಕೊನೆಗೆ ಕೋಣೆ, ಮೆಟ್ಟಲುಗಳ ದಿಕ್ಕ ದೆಸೆಗಳ ನಿರ್ಧರಿಸುತ್ತದೆ ಸಾಯುವ ಹುಟ್ಟುವ ಕ್ಷಣ ಗಣನೆಗಳ ಗುಣುಗುಣಿಸಿ ಪೂಜೆ ಬಲಿದಾನಗಳ ಮಾಡಿಸುತ್ತದೆ ಗಂಡು ಹೆಣ್ಣು...

ಬುಡು ಬುಡುಕಿ ಹಾಡು

ಟಿಂವ್ ಟಿವಕು ಟಿವಕು ಟಿಂವ್ ಟಿವಕು ಟಿವಕು ಟಿಂವ್ ಟಿವಕು ಟಿವಕು ಟಿಂವ್ ಟಿಂವ್ ||ಪ|| ಐತೆ ಐತೆ ಶುಭವಾಗತ್ಯೆತೆ ಬಲವಾಗತ್ಯೆತೆ ತಂಗೀ ಹಕ್ಕಿ ಹಾಡುತದ ಶಕುನ ನುಡಿಯುತದೆ ಶುಭವು ನಿನಗೆ ತಂಗೀ ||೧||...

ಡೊಳ್ಳನ ಪದ

ಗುರುವೇ ನಮ್ಮಾಯ ದೇವಾರ್ ಬಂದಾವ ಬನ್ನಿರೂ ಹರನೇ ನಮ್ಮಾಯ್ ದೇವರಿಗೆ ಶರಣೆನ್ನಿರೋ ಸ್ವಾಮಿ ನಮ್ಮಾಯ್ ದೇವಾರ್ ಬಂದಾವ ಬನ್ನಿರೋ ||ಪ|| ದೇವರು ಊರಿಗೆ ಬಂದಾವೇ ಅಕ್ಷರ ವರವಾ ತಂದಾವೆ ಸಾವಿರದಂಥ ನೋವಿರದಂಥ ವಿದ್ಯೆಯ ಅಮೃತ...

ಕೋಲು ಕೋಲನ್ನ ಕೋಲೇ

ಕೋಲು ಕೋಲನ್ನ ಕೋಲೇ ರನ್ನದ ಕೋಲು.... ||ಪ|| ಶಾಲು ಬಣ್ಣದ ಹೊದ್ದೋನ್ಯಾರೆ ಲೋಲು ಕಿನ್ನುರಿ ನುಡಿಸೋನ್ಯಾರೆ ಬಾಲವೃದ್ಧರಿಗೆಲ್ಲ ಮೋಡಿಯ ಮಾಡೋನ್ಯಾರೆ ||ಅ.ಪ|| ಬಾವ್ಯಾಗೆ ಜಲಬತ್ತಿ ಬಾಯಾರಿ ನಾವೆಲ್ಲ ಇರುವಾಗ ಕಾವಾಳದೊಳಗೊಂದು ಕೋಲ್ಮಿಂಚು ಹೊಳೆದಾಂಗ ದೇವಾಲಯದೊಳಗಿಂದ...

ಅಕ್ಷರ ಜ್ಯೋತಿ

ಅಕ್ಷರ ಜ್ಯೋತಿಯ ಬೆಳಗೋಣ ನಾವ್ ಅಕ್ಷರ ಸುಖವನು ಪಡೆಯೋಣ ||ಪ|| ಬಾಳಿನ ನೆಮ್ಮದಿ ಸುಖ ಸೌಭಾಗ್ಯದ ಮನ್ವಂತರಕಿದು ಮೊದಲ ಪಣ ನೂತನ ಸಮಾಜ ಕಟ್ಟೋಣ ನಾವ್ ಭವ್ಯ ಭಾರತವ ಬೆಳೆಸೋಣ ||೧|| ಅಜ್ಞಾನವೆಂಬ ಕತ್ತಲೆ...

ನಗ್ತಾರಲ್ಲೋ ತಮ್ಮಾ

ನಗ್ತರಲ್ಲೋ ತಮ್ಮ ನಮ್ಮನ್ನು ನಗ್ತಾರಲ್ಲೋ ಅಣ್ಣಾ ||ಪ|| ಎದುರಿಗೆ ಕೊಂಡಾಡಿ ಭಾಷಣ ಬಿಗಿದಾಡಿ ಹಿಂದಿಂದೆ ನಗ್ತಾರೋ ತಮ್ಮಾ ನಮ್ಮನ್ನು ನಗ್ತಾರಲ್ಲೋ ಅಣ್ಣಾ ||ಅ.ಪ.|| ನೀನೇ ದೇಶಕ್ಕೆ ಬೆನ್ನೆಲುಬು ಅಂತಾರೆ ತಾಂಡವ ತುಳದಾರೆ ಮ್ಯಾಲೆ ದೇಶಕ್ಕೆ...

ದುಡಿಮೆಯೆ ದೇವರು

ದುಡಿಮೆಯೆ ದೇವರು ದುಡೀ ದುಡೀ ಅಕ್ಷರ ಬ್ರಹ್ಮನ ಪಡೀ ಪಡೀ ||ಪ|| ಭೂಮಿ ತಾಯಿಯು ದುಡಿತಾಳೆ ಸೂರ್ಯ ಚಂದ್ರರು ದುಡಿತಾವೆ ಗಾಳಿ ಬೀಸುತಾ ನೀರು ಹರಿಯುತಾ ಬೆಂಕಿ ಉರಿಯುತಾ ದುಡಿತಾವೆ ||೧|| ದುಡಿಮೆಯಿಂದಲೇ ಕೋಟೆ...

ಎಲ್ಲಿದೆ ಧರ್ಮ

ಧರ್ಮಾ ಧರ್ಮಾ ಅಂತಾರೋ ಎಲ್ಲಿದೆ ಧರ್ಮಾ ತೋರಿಸರೋ ||ಪ|| ನಮ್ಮದು ಧರ್ಮಾ ನಿಮ್ಮದು ಧರ್ಮಾ ಅವರದು ಧರ್ಮಾ ಅಂತಾರೆ ಜನಗಳ ನಡುವೆ ಗೋಡೆಗಳೆಬ್ಬಿಸಿ ಆಗಸ ಕಾಣದೆ ನಿಂತಾರೆ ||೧|| ಕೊಂಬಿ ರೆಂಬಿಗಳ ಜೋತು ಬಿದ್ದು...