
ಹೊಸ ವರುಷವೀಗ ಹಳೆಯಾಸೆಗಳ ಬಲಿಸುತಿದೆ; ಜಾನಿಗಳ ಜೀವವೇಕಾಂತವೆಳಸುತಿದೆ; ಕೊಳದ ಕೆಲದಲಿ ತಳಿರ ಮರಲ ಸೊಂಪನರುತಿದೆ; ದ್ರಾಕ್ಷಿಯಲಿ ಮಾಣಿಕ್ಯ ರಸವು ಹೊಮ್ಮುತಿದೆ. *****...
ಕನಸೊಂದ ಮುಂಜಾವದಲಿ ಕಂಡೆನೇನೆಂಬೆ ನರವಟಿಗೆಯಿಂದ ಸದ್ದೊಂದಾದುದಿಂತು : “ಏಳಿರೆಲೆ ಮಕ್ಕಳಿರ, ಬಟ್ಟಲನು ತುಂಬಿಕೊಳಿ ನಿಮ್ಮೊಡಲ ಜೀವರಸವಿಮರದೀಮುನ್ನ.” *****...
ಮೂಡಲತ್ತಣ ಬೇಡನಿದೊ! ಸಾರಿ ಬಂದೀಗ, ನೋಡು, ಸುಲ್ತಾನನರಮನೆಯ ಗೋಪುರಕೆ ಹೂಡಿಹನು ತನ್ನ ಹಗ್ಗದ ಕುಣಿಕೆಯನು ಬೀರಿ; ನೋಡು ಬಾರೆಲೆ ಮುಗುದೆ, ನೀಡು ನಿನ್ನೊಲವ. *****...
ಏಳೆನ್ನ ಮನದನ್ನೆ! ನೋಡು, ಪೊಳ್ತರೆ ಬಂದು ನಿಶಿಯ ಬೋಗುಣಿಯೊಳಕೆ ಹೊಂಬುಗುರಿಯೆಸೆದು ತಾರೆಯರಳುಗಳನಲ್ಲಿಂದೆ ಚೆಲ್ಲಾಡಿಹನು; ನಿದ್ದೆ ಸಾಕಿನ್ನೀಗ ಮುದ್ದಣುಗಿ ಬಾರ. *****...














