Chandrashekara AP

ತಾನಾಗಿರ್‍ಪ ದರ್‍ಪ ಸಾಲದೇ? ನಾವಾಗಿ ಬೆಳೆಸಬೇಕೇ?

ವನ್ಯದ ಹಿತಮಿತವನರಿತಲ್ಲಲ್ಲೇ ಶೂಲದ ಮೊನೆಯೊಳಾಡಿದ ಬೇಟೆ ಭೋಜನ ಬಿಟ್ಟೇನಿ ದೇನಿದೆಲ್ಲ ವನ ಕಾನನ ಕಡಿದಲ್ಲಿ ಮುಸುಕಿನ ಜೋಳ ವನು ಬೆಳೆದದನು ಹದಿನಾರಕೊಂದಂಶ ಮಾಂಸಕಿಳಿಸುವಾ ಧುನಿಕ ಪಶುಪಕ್ಷಿ ಸಂಗೋಪನೆಗೆ […]

ಮೌಲ್ಯದನ್ನ ಉಣ್ಣದೆ ಬದುಕಿಗೆತ್ತಣ ಮೌಲ್ಯ?

ಮಸಣಕೊಯ್ದ ಹೆಣವಿದನು ಸುಟ್ಟು ಕಳೆಯೆಂದು ಮಾರುಕಟ್ಟೆಗೊಯ್ದ ಕೃಷಿ ಸರಕುಗಳನವಗಣನೆ ಮಾಡುತಲಿ ಬೆಳೆದಿಹರೆಮ್ಮ ವರ್‍ತಕರು ಮಸಣವಾಸಿಗಳವರು ಮಾರಿದಾ ಹೊಲಸು ಮ್ಹಾಲನು ತಿನುವರಲಾ ನಗರವಾಸಿಗಳು – ವಿಜ್ಞಾನೇಶ್ವರಾ *****

ಹಸಿದಮ್ಮನೆದೆಯೊಳೆಂತು ಹಾಲುದಿಸುವುದು?

ಹೊಟ್ಟೆ ಹಸಿವೊಂದೆ ದಿಟದ ಹಸಿವದನು ಹೆರರು ತಣಿಸುತಿರಲಿಂದು ಆ ಒಂದು ಹಸಿವೆ ನೂರೊಂದಾಗಿ ಭೂಗರ್‍ಭವನೆ ಹರಿದು ಮುಕ್ಕುತಿರಲಿನ್ನು ತಿನ್ನುವುದೇನು? ಹಿಂತಿರುಗಿ ದುಡಿದುಣಲು ಕಲಿಯಬೇಕಿನ್ನು – ವಿಜ್ಞಾನೇಶ್ವರಾ *****

ಹಿಟ್ಟನ್ನದ ಕಷ್ಟಕಂಜುತೆ ಗಡಿ ಬಿಟ್ಟರೇನಹುದು?

ಎಷ್ಟೆ ಗಡಿಬಿಡಿ ಇರಲಿ, ಗಡಿಬಿಡಿ ಸಾರು ಮಾ ಳ್ಪಷ್ಟಾದೊಡಂ ಅಡುಗೆಮನೆ ಕೆಲಸವೆಮಗಿರಲಿ ಲೊಟ್ಟೆ ಜಾಹೀರಿಗೆಮ್ಮ ಮನ ಜಾರದಿರಲಿ ಹೊಟ್ಟೆಯೊಳು ಬರಿ ತೊಟ್ಟೆಯಬ್ಬರವೇರದಿರಲಿ ರಟ್ಟೆಯೊಳನ್ನದಭಿಮಾನ ಆರದಿರಲಿ – ವಿಜ್ಞಾನೇಶ್ವರಾ […]

ಮಂಥನವಿಲ್ಲದದೆಂತು ಮೌಲ್ಯವರ್‍ಧನೆಯಪ್ಪುದೋ?

ಬೆಂಕಿ ಬಿಸಿಲುಪ್ಪು ಸಕ್ಕರೆಯೊಡಗೂಡಿ ಅಲಫಲಗಳಿ ನ್ನೊಂದು ರುಚಿಯೊಳುದಿಸಿ ದೀರ್‍ಘಾಯುವಪ್ಪಂತೆಮ್ಮ ಸ್ವಂತಿಕೆಯೊಡಗೂಡಿ ಗುರು ಹಿರಿಯರಾದರ್‍ಶ ಸೇರಿದರದನು ಖಂಡಿತದಿ ಮೌಲ್ಯವರ್‍ಧನೆ ಎನಬೇಕಲ್ಲದಿದೇನು ನಿಂದ್ಯ ಪರಿರಕ್ಷಕಗಳೊಡ್ಡೋಲಗಕೆ ಮೌಲ್ಯವರ್‍ಧನೆಯೆನ್ನುವುದೋ? – ವಿಜ್ಞಾನೇಶ್ವರಾ ***** […]

ತಾಯಿ ಬೇಯುತಿರಲಿನ್ನೆಷ್ಟು ತಿನುವುದೋ? ತಾನು ಹಾಯಾಗಿ

ಕಾಯಿ ಹಲಸನೆಣ್ಣೆಯೊಳು ಕರಿದು ಮಾರಲಾ ಧನದೊಳಾ ದಾಯವೇರಿದೊಡದನು ಮೌಲ್ಯ ವರ್‍ಧನೆಯೆನುವರಲಾ? ಕಾಯ ಕಷ್ಟದ ಕೃಷಿಯ ಬಯಸದೆ, ಕೃಷಿಯ ಕಷ್ಟವ ಮಯಣವೆನ್ನದೆ, ಎಣ್ಣೆ ಸವರುತ ಮಯಣ ಕಳೆಯದೆ ನಯದೊಳುಣುವರನೋಲೈಸಿದೊಡದು […]

ಹೆಚ್ಚು ಹಲಸೆನ್ನದೆ ಜೀವನಕದೆಷ್ಟು ನಷ್ಟವೋ?

ರುಚಿಯೊಳ್ ಮಾವನು ಫಲರಾಜನೆಂದೊಡೆನಬಹುದು ಯೋಚಿಸಲಾ ಪಟ್ಟ ಹಲಸಿಗಿರಬೇಕು ದಿಟದಿ ಉಚ್ಛತನವಿದಕೆ ಸಲ್ಲುವುದು ಗಾತ್ರದಲಿ ಅಡುಗೆ ಪಾತ್ರದಲಿ ಒಕ್ಕೊರಿಯೊಳಿದರಿಂದ ಮಾಡಲುಬಹುದನೇಕ ಮೇಲೋಗರವ ಅಚ್ಚರಿಯೊಳಿದುವೆ ಓಗರಕೆ ಬದಲಹುದನೇಕ ತರಹ – […]

ಹಾಗೆ ಬೆಳೆವ ಹಲಸಿನ ಬಗೆಯ ಬಲ್ಲಿರಾ?

ಹಾ ಎಂದೊಡದು ಆನಂದವಿರಬಹುದು ಹಾ ಎಂದೊಡದು ಆಕ್ರಂದವಿರಬಹುದು ಹಾ ಎನಲಿಕ್ಕೆಡೆಗು ಹಲಸಿನೊಳುತ್ತರವಿಹುದು ಹಬ್ಬದಡುಗೆಯದೇಕೆನುವ ರುಚಿ ಹಲಸಿನೊಳಿಹುದು ಹಸಿದ ಹೊಟ್ಟೆಗೆ ಹಲಸು ಹಬ್ಬದೂಟವೆ ಹೌದು – ವಿಜ್ಞಾನೇಶ್ವರಾ *****

ಕೋಜವಾದೊಡಂ ಮೊಹರೊತ್ತಿ ತಾಜವೆನಲಿದೇನಾತುರವೋ?

ನಿರ್‍ಜೀವ ಜಗದೊಳಗಿಂದೆಲ್ಲರಾ ಶಕ್ತಿ ಯುಕ್ತಿಯಾಸಕ್ತಿ ಗೌಜಿ ಗದ್ದಲವೆಲ್ಲ ವಸನ ವಸತಿ ವ್ಯಸನದೊಳತಿ ಉಜ್ಜೀವನದ ಹಣ್ಣು ಹಾಲನ್ನಕಪ್ಪ ದುಡಿಮೆಯೊಳಿಲ್ಲ ಮತಿ ಮೋಜಿನಾ ನಗರ ಬದುಕಿನೊಳೆಲ್ಲ ಜೀವಜಗಭಾವ ಹತಿ ತಾಜ […]

ಹಸಿದುಣುವಾರೋಗ್ಯ ಹೆಚ್ಚೊ? ಕಾಸುಣುವಡುಗೆ ಹೆಚ್ಚೊ?

ಹಸಿದು ಹಸಿಯುಣುವವರ ಕಂಡು ಮರುಗುತಲದಕೆ ಬಿಸಿ ಉಪ್ಪಡುಗೆ ರುಚಿಯನು ಕೊಟ್ಟುಪಚರಿಸಿದರೆ ಭಲೆ ಎನಬಹುದು ಹುಸಿ ಭರವಸೆಯ ಉಪ್ಪನೆಲ್ಲರಷ್ಟಷ್ಟಿಡುತಿರಲತಿಯಾಗಲದ ನು ಸರಿಪಡಿಸೆ ಸುರಿದ ನೀರತಿಯಾಗಿ ಮಿಕ್ಕಿದಡುಗೆಯ ಗಬ್ಬು ವಾಸನೆಗೆಲ್ಲರಾ […]