Home / ಉಯ್ಯಾಲೆ

Browsing Tag: ಉಯ್ಯಾಲೆ

ದುಃಸಾಧ್ಯಸಂಭಾವ್ಯವೆಂಬ ಸೊಲ್ಲಿನ ಗುಲ್ಲು ಗುಡುಗಾಡುತಿದೆ. ಕನ್ನಡದ ಕನ್ನಡಿಯು ಒಡೆದು ಬೆಸೆಯ ಬರದಂತೆ ದೆಸೆದೆಸೆಗೆ ಬಿದ್ದಿದೆ. ಹಿಡಿದು ಕಟ್ಟಬಲ್ಲಾ ಕೈಯೆ ಕಾಣದಿದೆ. ಒಡಹುಲ್ಲು ಬೆಳೆಯೆ, ಹೂದೋಟ ಹುದುಗಿದೆ ನೆಲದೊಳೆಲ್ಲೆಲ್ಲು. ದನದ ಜಂಗುಳಿಯಂತೆ ...

ವಿಂಧ್ಯದ ಅನುಲ್ಲಂಘ್ಯ ಮಸ್ತಕವ ಮೆಟ್ಟಿ, ದ- ಕ್ಷಿಣದ ದಾರಿಯ ತೆರೆದು ತೋರಿದಿರಿ; ಉತ್ತರಕೆ ಉತ್ತರೋತ್ತರವಾಯ್ತು. ದಕ್ಷಿಣದ ಏಳ್ತರಕೆ ಎಡೆಯಾಯ್ತು. ನಿಮ್ಮ ಪಾವನ ಪಾದ ಮೆಟ್ಟಿದ- ಲ್ಲಲ್ಲಿ ತೀರ್ಥಕ್ಷೇತ್ರ. ಮುಕ್ತಿ ಗಂಗೆಯು ಇಳಿದ ಭಕ್ತಿ ಭೂಮಿಯು ತಮ...

ನಿರ್‍ದೋಷಕೃತಿಯ ನಿರ್‍ಮಿಸುವೆನೆನ್ನುವ ಪಂಥ- ಗಾರ! ಹಂಬಲವೇನೊ ಹಿರಿದು; ಗುಣದೋಷ ಚ- ರ್‍ಚೆಯಲಿ ಪಳಗಿದ ಬಗೆಯ ನುರಿತ ನಯದಲಿ ಬಲಿತ ಕೈ ಚಳಕದಲಿ ಹಿಳಿವೆ ರಸವ, ಜುಬ್ಬರದ ಜಂ- ಜಡ ಸವರಿ; ಬಯಕೆ ಬರುವಾ ಬಾಲ ಲೀಲೆಯನು ಹೊಳೆಯಿಸುವ ತೆರ, ಚಿರಂಜೀವ ಸುಕೃ...

ನಗೆಯಾಡದಿರು ನನ್ನ ನಲುಮೆ ಒಲುಮೆಯ ಕುರಿತು. ಅರಿಯೆನೇ ತುಂಬು ಮೈ ಮಾಂಸಪಿಂಡದ ಡಂಭ- ವೆಂಬುದನು? ನಾಣು ನೆತ್ತರದಾಟ, ಮಧು ಚುಂಬ- ನವು ಕುನ್ನಿ ಚಿನ್ನಾಟ, ಸಂತತಿಯ ತಂತು ಋತು- ಮಾನಗಳ ಮಾಟ; ಅಂತಃಕರಣ ಹುಲು ಡೊಂಬ- ನೊಲು ಕುಣಿದು ಮಣಿವಾಟ. ಅತಿಥಿ ರೂ...

“ತಿಣಕದಿರು ಸುಖದ ಸಂಪಾದನೆಗೆ -ಒಂದಿನಿಸು ನಗೆ, ಇನಿಸು ದುಃಖ ವಿಸ್ಮೃತಿ, ಇನಿಸು ಲೋಕಾನು- ಭವವು, ರಸಿಕತೆ ಇನಿಸು, ತಾಳ್ಮೆಯಿರೆ ಇನಿಸಾನು; ಹಲಸು ಕಾತಂತೆ ರಸಭಾವ ರೋಮಾಂಚಿತಸು. ಹಸು ಕರುವಿನೆಡೆಗೆ ಕೆಚ್ಚಲುದೊರೆದು ಬರುವಂತೆ, ಅಂಬೆಗರೆಯಲು...

ಆನಂದದಿಂದ ಬಂದೀ ಜಗದ ರುಚಿಯೆ ಕಹಿ ಯೆಂದು ಕಾತರಗೊಳ್ಳಬೇಡ, ನಾಲಿಗೆಯೆ! ಇದು ಎಲ್ಲವೂ ಅನ್ನ; ಅದರದರ ರುಚಿಯದಕೆ; ಬಿಡು, ನಿನ್ನ ಬಯಕೆಯ ಬಣ್ಣವೆರಚದಿರು, ರಸವೆ ಸಿಹಿ. ಒಗರು, ಸಿಹಿ, ಕಹಿ, ಕಾರ, ಉಪ್ಪು, ಹುಳಿ, ಒಡವೆಯದು; ರಸವು ರಸಬಲ್ಲ ರಸಿಕನದು? ...

ಗಂಧವತಿ ಪೃಥ್ವಿಯ ಸುಗಂಧ-ಕಂದದ ಬಳ್ಳಿ ಹಬ್ಬುತಿದೆ ಬೆಟ್ಟ ಸಾಲುಗಳಲ್ಲಿ; ಗಿರಿಶಿಖರ ಮುಕುಲದೊಲು ಮೊಗವನೆತ್ತಿವೆ ನಭದಲಲ್ಲಲ್ಲಿ; ಮಲರುವದದೆಂದೋ? ಕೊನೆಯ ಪ್ರಳಯ ಪ್ರಖರ ದ್ವಾದಶಾದಿತ್ಯರದಿಸಿದ ಮೇಲೆ, ಚಳಿ ತಳ್ಳಿ ನವವಸಂತವು ಬರಲು, ಸುರ-ತಾರಕಾನಿಕರ ...

ಕವಿಗಳಿಗೆ ಗುರುವು ತಾನೆಂಬ ಗರುವಿಕೆಯ ಮರು- ಭೂಮಿಯ ಮರೀಚಿಕಾಜಲಪಾನಲೋಲನಾ- ಗುವನು ಅರೆಗಳಿಗೆ, ಬಿಡಿಕರಡುಗವಿತೆಯ ಮೊದಲ ಒಂದೆರಡು ಸಾಲುಗಳ ಲೀಲೆಯಲಿ ಬರೆದ ಬಡ- ಗಬ್ಬಿಗನು ಕೂಡ; ಸ್ವಕಪೋಲಕಲ್ಪಿತದ ಕೀ- ರ್‍ತಿಯ ಪ್ರತಿಧ್ವನಿಯು ತುಂಬುವದು ಕಿವಿಗವಿಯ...

ಬಾಗಿ ಬಾಗದ ಹಠದ ದಿಟದ ಸಾಧನೆಯ ಸಾ- ಹಸದಲ್ಲಿ, ಜೋಕೆ ತೂಕಗಳಿಂದ ವಿಷವ ಹಿಳಿ- ದೆಳೆದು, ಜೀವನದ ಸವಿ ಬೆರಿಸಿ, ರಸವನ್ನು ತೊರೆ- ಯಿಸಲೆಳಸಿ, ನಿನ್ನ ಜೀವನ ಚಂದ್ರಕಲೆ ಮಿತ್ರ- ತಾಪವನ್ನು ನುಂಗಿ ನಗೆಗೂಡಿ, ಬಡತನ ನೀಗಿ, ತಾಯಿ ನೆಲವನೆ ಸುತ್ತಿಯೊಳಗೊಂ...

ಮುಟ್ಟಿ ನೋಡುವೆನು ಕಾಂಚನಗಂಗೆ, ಎಂದೊಮ್ಮೆ ಹೂಡುವದು ಗಾಳಿದೇರಿನಲಿ ಲಗ್ಗೆಯ; ಚಂದ್ರ ಲೋಕವನು ಸೇರಬೇಕೆಂದು ಜ್ಯೋತಿಃಸಾಂದ್ರ ಆಕಾಶ ಬಾಣಗಳನೇರಿ ಬಯಲಲಿ ಚಿಮ್ಮಿ ನುಗ್ಗುವದು; ದುರ್‍ಬೀನುಗಳ ಚಾಚಿ ನಕ್ಷತ್ರ ಚಕ್ರಪಸರವ ಕಣ್ಣು ತಾಗೆ ಕಾಣುವೆನೆಂದು ನನ...

1...45678

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...