
ನಮಿಸುವೆನು ನಮಿಸುವೆನು ನಮಿಸುವೆನು ತಾಯೆ ನಿನ್ನ ಪ್ರೀತಿಗೆ ಬಾಗಿ ಕೈಮುಗಿದೆ ಕಾಯೆ ಜನಮನದಲಿ ಗಿರಿವನದಲಿ ಉಸಿರಾಗಿ ಹಸಿರಾಗಿ ಹರಿಯುತಿಹ ಮಾಯೆ ಬಲ್ಲೆ ನಾ ನಿನ್ನ ದನಿ ಕಲರವದಲಿ ಮೈಬಣ್ಣ ಉದಯಾಸ್ತ ಮುಗಿಲುಗಳಲಿ ನಡಿಗೆಯಿದೆ ಹರಿಯುತಿಹ ತೊರೆಗಳಲ್ಲಿ ...
ತಾಯೆ ನಿನ್ನ ಮಡಿಲಲಿ ಕಣ್ಣ ತೆರೆವ ಕ್ಷಣದಲಿ ಸೂತ್ರವೊಂದು ಬಿಗಿಯಿತಮ್ಮ ಸಂಬಂಧದ ನೆಪದಲಿ ಆಕಸ್ಮಿಕವೇನೋ ತಿಳಿಯೆ ನಿನ್ನ ಕಂದನಾದುದು, ಆಕಸ್ಮಿಕ ಹೇಗೆ ನಿನ್ನ ಪ್ರೀತಿ ನನ್ನ ಗೆದ್ದುದು? ಗುಣಿಕೆ ಮಣಿದು ನಾನು ನಿನ್ನ ಚರಣತಳಕೆ ಬಿದ್ದುದು? ಇಲ್ಲಿ ಹರ...
ಯಾವ ಸೌಭಾಗ್ಯ ಸಮ ಈ ಚಲುವಿಗೆ ಪ್ರೀತಿ ಚಿಮ್ಮುವ ತಾಯ ಮೊಗದ ಸಿರಿಗೆ? ಸಾಲು ಹಿಮಗಿರಿ ಇವಳ ಹೆಮ್ಮೆಯ ಮುಡಿ ಸಾಗರವೆ ಬಿದ್ದಿಹುದು ಕಾಲಿನ ಅಡಿ, ಹಣೆಯಲ್ಲಿ ಮುಗಿಲ ಮುಂಗುರುಳ ದಾಳಿ ಉಸಿರಾಡುವಳು ಮರುಗ ಮಲ್ಲಿಗೆಯಲಿ. ಉದಯರವಿ ಹಣೆಗಿಟ್ಟ ಭಾಗ್ಯಬಿಂಬ ಆ...













