Home / Poem

Browsing Tag: Poem

ಹಳ್ಳೀಯೆ ನಮ ದೇಶ ಪಂಚಾಯ್ತಿ ನಮ ಕೋಶ || ನಮ್ಮ ಉದ್ಧಾರವ ಮತ್ಯಾರು ಮಾಡ್ಯಾರು ಸವಲತ್ತು ತಾಕತ್ತು ಇನ್ಯಾರು ಕೊಟ್ಟಾರು || ಗ್ರಾಮಾದ ಸಹಕಾರ ಅದೆ ನಮ್ಮ ಸರಕಾರ ಪಂಚಾಯ್ತಿ ಕಾನೂನು ತಿಳಿಬೇಕು ಇನ್ನೂನು || ಅಬಲರಿಗೆ ಸವಲತ್ತು ಕೊಡಿಸೋಣ ಯಾವತ್ತು ಉಳ್...

ಮಾನಸ ಲೋಕದ ಪ್ರಭುವೆ ಮನ ಮಾನಸದ ಹೊನಲಿನ ವಿಭುವೆ  ||ಪ|| ಮುಗಿಲಿಗೂ ಮಿಗಿಲು ನಿನ್ನಯ ಹರವು ಕಡಲಿಗೂ ಹಿರಿದು ತಿಳಿವಿನ ಅಳವು ಸಮೀರನ ಹಿಂದಿಕ್ಕೂ ವೇಗದ ಲೀಲೆ ಅನಲನ ದಾಟಿಸೋ ಅಪುವಿನ ಓಲೆ ಮಾಯಾ ಮೃಗದ ನಯನದ ಮಿಂಚೊ ನಾನಾ ಛಾಯೆಯ ಥಳುಕಿನ ಸಂಚೋ ಕಾಂತ...

ಕರ್ಪುರದಾತಿ ಬೆಳಗಿರೆರ ಹರಗೆ ಕಾಮಿನಿಯಿರೆಲ್ಲಾ ಕರುಣಸಾಗರಗೆ || ಪ || ಅಪ್ಸರ ಸ್ತ್ರೀಯರು ಹರುಷಮನಸದಿ ರೂಪ ಲಕ್ಷಣವಂತರೆಲ್ಲರು ಮುಪ್ಪರ ಮನ ಮುಂದಿಟ್ಟು ಮಹಾಗುರು ಸರ್ಪಭೂಷಣ ಸಾಂಬಗೆ || ಅ. ಪ. || ವಾರಿನೋಟದ ವನಜಾಕ್ಷಿಯರು ಚಾರುತರದ ಚನ್ನಿಗ ಪ್ರ...

ಅಗ್ಗದರವಿ ತಂದು ಹಿಗ್ಗಿ ಹೊಲೆಸಿದೆನಂಗಿ ಹೆಗ್ಗಣ ವೈತವ್ವ ತಂಗಿ ಈ ಅಂಗೀ ||ಪ|| ಅಗಣಿತ ವಿಷಯದ ಆರು ಗೇಣಿನ ಕವಚ ಬಗಲು ಬೆವರನು ಕಡಿದು ಸಿಗದೆ ಹೋಯಿವ್ವ ತಂಗಿ ಈ ಅಂಗೀ ||೧|| ಬುದ್ಧಿಗೇಡಿಗಳಾಗಿ ನಿದ್ದಿ ಕೆಡಿಸಿಕೊಂಡು ಎದ್ದು ನೋಡಲು ಕರ್ಮ ಗುದ್ದಿ...

ಆಗ ನಾವೆಲ್ಲರೂ ರೈಲಿನಲ್ಲಿ ಪ್ರಯಣ ಮಾಡುತ್ತಿದ್ದೆವು; ಆಲಿಕಲ್ಲುಗಳು ಬಂಡೆಗಲ್ಲಿನಂತೆ ಬಿದ್ದು ನೀರಾಗುತ್ತಿದ್ದವು. ಲಾವಣಿ ಪದ, ಒಣಗಿಸಿ ಸುಟ್ಟ ಹಸುಮಾಂಸ, ಕಾಯಿಸಿದ ರಮ್ ಹೀರುತ್ತಿದ್ದೆವು. ಅವನ ತರಡಿನ ದರಿದ್ರ ಹೇನುಗಳು ನಮ್ಮ ತಲೆ ತಿನ್ನುತ್ತಿದ...

ಜಾತಿ ಮಾಡಬ್ಯಾಡಿರಿ ಪಂಚಾಯ್ತಿ ವಳಗೆ || ಜಾತಿ ಎಂಬುದು ಒಳರೋಗ ನ್ಯಾಯ ನೀತಿಗದು ಮೋಸಾದಗ ಜಾತಿ ಮಾಡಬ್ಯಾಡಿರಿ ಓಟು ಹಾಕುವಾಗ || ನಮ್ಮವನೆಂಬುದು ಸರಿಯಲ್ಲ ಒಂದೆ ಜಾತಿಗೆ ಅಧಿಕಾರವಲ್ಲ ಜಾತಿ ಮಾಡಬ್ಯಾಡಿರಿ ಸವಲತ್ತು ಕೇಳುವಾಗ || ಜಾತಿ ಮೀರಬೇಕೊ ಅಣ...

ಯಾವ ತೀರದಿ ನಿಲ್ಲಲಿದೆಯೋ ಜಗದ ಜೀವನ ನೌಕೆಯು… ಭೀತ ಛಾಯೆಯು ನಿತ್ಯ ಕಾಡಿದೆ ಯುದ್ಧ ಕಾರಣ ಛಾತಿಯು… ಕ್ಷಿಪಣಿ-ಯಕ್ಷಿಣಿ ನಭದ ರಂಗದಿ ರುದ್ರ ತಾಂಡವ ತಾಲೀಮಿದೆ… ನಂಬಿ-ನಂಬದ ಮಾತಿನೊರೆಯಲಿ ಜೀವ ಮಹತಿಯು ಸೊರಗಿದೆ… ವಿನಾ...

ರಾಜನೀತಿಯಲ್ಲಿ ಜಯವೋ ಬಂತೋ ಇಂಗ್ಲಂಡ ದೇಶಕ್ಕೆ ಬೆಂಕಿಯ ಮಳಿಯೋ ||ಪ|| ರಾಣಿ ರಾಜರ ವೈಭವಕೆ ಪ್ರಾಣಹಾನಿಗಳಾದಾವು ಎಣಿ ಇಲ್ಲ ಇದಕೆ ಜಾಣ ಕಲಿಗಳ ಸೈನ್ಯ ಹೊಕ್ಕಿತೋ ಯೂರೋಪುಖಂಡಕೆಲ್ಲ ಮುಸುಕಿತೋ ಕಾಣದಂಥಾ ಐದು ವ್ಯಕ್ತಿ ಕ್ಷೋಣಿ ಗದಗದ ನಡುಗಿ ಹೋದೀತು ...

ಡೀಸೆಲ್ ಫ್ಯಾಕ್ಟರಿಯ ಮಗ್ಗುಲಿನ ಕಿರಿದಾದ ಓಣಿಯಿಂದ ಹಾದುಬಂದರೆ, ಮನುಷ್ಯನೊಬ್ಬನ ತಲೆಯನ್ನು ಸವರಿದಂತೆ ಕಾಣುವ ಹಿಪ್ಪೆಮರ ಭೀತಿ ಹುಟ್ಟಿಸುತ್ತದೆ. ರೈಲ್ವೆ ಲೆವೆಲ್ ಕ್ರಾಸಿಂಗ್ ಕಾವಲುಗಾರ ಅಲ್ಲಿ, ಆ ಮರಕ್ಕೆ ಆನಿಕೊಂಡು ಕುಳಿತಿರುತ್ತಾನೆ ಅಥವಾ ತೂ...

ಜಗತ್ತು ಬದಲಾತು ಬುದ್ದಿಯ ಕಲಿಬೇಕು || ಮಡಿ ಮೈಲಿಗೆಯ ಕೈಬಿಡಬೇಕು ದೆವ್ವ ಪಿಶಾಚಿಯ ಭಯ ಬಿಡಬೇಕು || ಜಾತಿ ಭೇದ ಮರೆತು ಸಹಮತ ತರಬೇಕು ರಾಹು ಗುಳಿಕಾಲಗಳ ಲೆಕ್ಕವ ಬಿಡಬೇಕು || ಹಲ್ಲಿಯ ಶಕುನ ನಂಬಬೇಡಿ ತೀರ್ಥಧೂಪ ನಂಬಿಕೆ ಬಿಡಿ ಆರೋಗ್ಯ ಕೆಟ್ಟರೆ ಆ...

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...