ಯಾವ ನಲಿವು ನನ್ನ ಹೀಗೆ ತಬ್ಬಿ ಹಿಡಿದಿಹುದು?

ಯಾವ ನಲಿವು ನನ್ನ ಹೀಗೆ ತಬ್ಬಿ ಹಿಡಿದಿಹುದು ಸಹಿಸಲಾಗದಂಥ ಮಧುರ ನೋವು ಕೆರಳಿಹುದು? ಬೀದಿಜನರು ಕೈ ತೋರುವ ಮನೆಯ ತನಕ ಬಂದು ರಾಧೆಗೊಲಿದ ಮೇಘಪ್ರೀತಿ ಕದವ ತಟ್ಟಿತು ಇಷ್ಟು ದಿನದ ಧ್ಯಾನಕೆ ಕಾಯ್ದುಕೊಂಡ ಮಾನಕೆ...

ಯಾವುದೀ ಹೊಸ ಸಂಚು?

ಯಾವುದೀ ಹೊಸ ಸಂಚು ಎದೆಯಂಚಿನಲಿ ಮಿಂಚಿ ಮನಸು ಕನಸುಗಳನ್ನು ಕಲೆಸಿರುವುದು? ಗಿರಿಕಮರಿಯಾಳದಲಿ ತೆವಳಿದ್ದ ಭಾವಗಳ ಮುಗಿಲ ಮಂಚದೊಳಿಟ್ಟು ತೂಗುತಿಹುದು? ಸತ್ತ ಬಾಳಿಗೆ ಮತ್ತೆ ಅಮೃತವೆರೆದು ಕತ್ತಲಾಳಗಳಲ್ಲಿ ದೀಪವುರಿದು ಬಾಳು ಕೊನೆಯೇರುತಿದೆ ಬೆಳಕಿನುತ್ಸವದಲ್ಲಿ ಮೈಯ ಕಣಕಣದಲ್ಲು...

ಹೇಳು ಸಖೀ ಹೇಳೇ ಆ ಹೆಸರನು

ಹೇಳು ಸಖೀ ಹೇಳೇ ಆ ಹೆಸರನು ನನ್ನೀ ಕಿವಿಗಳಲಿ, ಮಿಡಿಯುತಿದೆ ಅದು ದಿವ್ಯಗಾನವನು ನನ್ನೆದೆ ವೀಣೆಯಲಿ. ವಸಂತ ಬಿಡಿಸಿದ ವನದ ಹಾಸಿನಲಿ ತೇಲಿ ಬಂದ ಹೆಸರು ವಿರಹಿ ವಿಹಂಗದ ಮಧುರ ಗೀತೆಯಲಿ ಕಳವಳಿಸಿದೆ ಉಸಿರು...

ಎಲ್ಲೆ ಇರು ನಾ ನಿನ್ನ ನೆನೆಯುವೆನು

ಎಲ್ಲೆ ಇರು ನಾ ನಿನ್ನ ನೆನೆಯುವೆನು ಚಿನ್ನ ನೀ ಮರೆತರೂ ಹೇಗೆ ನಾ ಮರೆವೆ ನಿನ್ನ? ನಭದ ನೀಲಿಮೆಯಲ್ಲಿ ಓಲಾಡಿ ಮುಗಿಲು ಬರೆಯುವುದು ನಿನ್ನದೇ ಮುಖಮಾಟ ಹೆರಳು ಓಡುವಾ ತೊರೆಯಲ್ಲಿ ಜಲಜಲಿಸಿ ಹರಳು ನುಡಿಸುವುದು...

ನಿನ್ನ ಚೆಲುವನ್ನೆಲ್ಲ ಹಿಂಗೆ ಹಂಚುವುದೇನೆ?

ನಿನ್ನ ಚೆಲುವನ್ನೆಲ್ಲ ಹೀಗೆ ಹಂಚುವುದೇನೆ ಕಂಡವರಿಗೆ? ಪಡೆದ ಚೆಲುವಿಗೆ ತಕ್ಕ ಘನತೆ ಉಂಟೇನೆ ಕೊಂಡವರಿಗೆ? ಮಲ್ಲಿಗೆಗೆ ನೀಡಿದೆ ನಿನ್ನ ಉಸಿರಾಟದಾ ಪರಿಮಳವನು, ಹೂ ಗುಲಾಬಿಗೆ ಕೊಟ್ಟೆ ನಿನ್ನ ಕೆನ್ನೆಯ ಹೊನ್ನ ಸಂಜೆಯನ್ನು, ಪುಟ್ಟ ಕನಕಾಂಬರಿಗೆ...

ದಣಿದ ಜೀವಕೆ ಮತ್ತೆ ಕನಸುನುಣಿಸಿ

ದಣಿದ ಜೀವಕೆ ಮತ್ತೆ ಕನಸನುಣಿಸಿ ಕುಣಿಸಿರುವ ನೀರೆ ನೀನು ಯಾರೆ? ಯಾರೆ ಚದುರೆ, ನೀನು ಯಾರೆ ಚದುರೆ? ಬಗೆಗಣ್ಣ ತೆರೆಸಿದ ಭಾವಮದಿರೆ ಉರಿವ ಬಿಸಿಲಿಗೆ ತಂಪು ಗಾಳಿ ಸುಳಿಸಿ ಮಣ್ಣಿನಲಿ ಮಳೆಬಿಲ್ಲ ಬಣ್ಣ ಕಲೆಸಿ,...

ನಿನಗಾಗೇ ಈ ಹಾಡುಗಳು

ನಿನಗಾಗೇ ಈ ಹಾಡುಗಳು ನೀ ಕಟ್ಟಿಸಿದ ನಾಡುಗಳು; ನೀನೇ ಇದರ ಮೂಲ ಚೂಲ ಒಳಗಿವೆ ನನ್ನ ಪಾಡುಗಳು. ಯಾಕೆ ಕಂಡೆನೋ ನಾ ನಿನ್ನ ತುಂಬಿ ಹರಿಯುವ ಹೊಳೆಯನ್ನ? ಯಾಕೆ ಹೊಕ್ಕಿತೋ ಹಿಡಿವಾಸೆ ಹೊಳೆಯುವ ಕಾಮನ...

ನೀ ಸಿಗದೆ ನಾನೆಂತು ತಿಳಿವೆನೇ ನನ್ನ?

ನೀ ಸಿಗದೆ ನಾನೆಂತು ತಿಳಿವೆನೇ ನನ್ನ ಸಾಣೆ ಗೆರೆಮಿಂಚದೆ ತಿಳಿವರೇ ಹೊನ್ನ? ನೂರಾರು ಕೊಪ್ಪರಿಗೆ ನಿಧಿ ಹುಗಿದ ಗವಿಯು ಆತ್ಮ ಸೆರೆಯಿದ್ದೂ ಅರಿತಿರದ ಭವಿಯು ನಾನೊಂದು ಕಗ್ಗಾಡು ನನ್ನ ನಾ ಅರಿಯೆ ಬೆಳಕಾಗಿ ಒಳತೂರಿ...

ಹೊಂಬಿಸಿಲು ನಾಚೀತು

ಹೊಂಬಿಸಿಲು ನಾಚೀತು ನನ್ನ ಚೆನ್ನೆಯ ಕೆನ್ನೆ- ಯಲ್ಲಿ ಮಿರುಗುವ ಕಾಂತಿಗೆ, ನಕ್ಷತ್ರ ನಮಿಸೀತು ನನ್ನ ದೇವಿಯ ಕಣ್ಣು ಸುತ್ತ ಹರಡುವ ಶಾಂತಿಗೆ ನನ್ನ ಹುಡುಗಿಯ ಪ್ರೇಮಕಿಂತಲೂ ವಿಸ್ತಾರ ಯಾವುದಿದೆ ಭೂಮಿಯೇ, ಬಾನೇ? ಅವಳ ಬಿಸಿತುಟಿಯಲ್ಲಿ...

ನೀ ಯಾರೋ ನಾ ಯಾರೋ!

ನೀ ಯಾರೋ ನಾ ಯಾರೋ ಚೂರೂ ಅರಿಯದವರು ಕಂಡ ಕ್ಷಣವೆ ಆದವೇ ಜನ್ಮಾಂತರ ಗೆಳೆಯರು? ಕ್ಷಣ ಕ್ಷಣವೂ ಆಕರ್ಷಿಸಿ ಮನಮಿಡಿಯುವುದೇಕೆ? ಕಾಣದಿರಲು ಈ ಲೋಕ ಜಡ ಎನಿಸುವುದೇಕೆ? ಧ್ಯಾನ ಸ್ಮರಣೆ ಜಪಗಳಲ್ಲು ತೂರಿ ಬರುವುದೇಕೆ?...
cheap jordans|wholesale air max|wholesale jordans|wholesale jewelry|wholesale jerseys