
ಈ ಮಹಾದೇವನ ಸ್ತೋತ್ರವ ಮಾಡುವದಕ್ಕೆ ಜಿಹ್ವೆ ಮೆಟ್ಟದು. ಆ ಮಹಾದೇವನ ಸ್ತೋತ್ರವ ಕೇಳುವದಕ್ಕೆ ಕರ್ಣ ಮೆಟ್ಟದು. ಮುಟ್ಟಿ ಪೂಜಿಸಿಹೆನೆಂದರೆ, ಹಸ್ತ ಕೆಟ್ಟದು. ನೋಡಿಹೆನೆಂದರೆ ನೋಟಕ್ಕೆ ಅಗೋಚರ, ಅಪ್ರಮಾಣ. ಇಂತು ನಿಶ್ಚಿಂತ ನಿರಾಳ ಬಯಲ ದೇಹ ಎನ್ನಲ್ಲಿ...
ಅಯ್ಯ ನರರೊಳು ಹುಟ್ಟಿ, ಮರಹಿನೊಳಗೆ ಬಿದ್ದು, ಒಳತಂದು ಮಹಾಶರಣರೊಳು ಎನ್ನ ನಿಲಿಸಿ ಕುರುಹ ತೋರಿದರು. ಗುರುವೆಂಬುದನರುಹಿದರು. ಜಂಗಮವೆಂಬುದನರುಹಿದರು. ಅವರ ನೆಲೆವಿಡಿದು ಮನವ ನಿಲಿಸದೆ, ಕಾಯಜೀವವೆಂಬುದನರಿದೆ. ಭವಬಂಧನವ ಹರಿದೆ. ಮನವ ನಿರ್ಮಳವ ಮ...
ನಾಮ ರೂಪು ಕ್ರಿಯೆಗಿಲ್ಲದ ಘನವ ನಾಮರೂಪಿಂಗೆ ತಂದಿರಯ್ಯ. ಅದೇನು ಕಾರಣವೆಂದರೆ, ನನ್ನ ಮನಕ್ಕೆ ಚನ್ನಮಲ್ಲೇಶ್ವರನಾದಿರಿ. ಹೀಗೆಂದು ನಿಮ್ಮ ನಾಮಾಂಕಿತ ಹೀಗಾದರೂ ಕಾಣಲರಿಯರು. ನಡೆ ನುಡಿ ಚೈತನ್ಯವಿಡಿದು, ಕರದಲ್ಲಿ ಲಿಂಗ ಪಿಡಿದು, ಚನ್ನಮಲ್ಲೇಶ್ವರನೆಂ...
ಮಾಣಿಕವ ಕಂಡವರು ತೋರುವರುಂಟೇ? ಮುತ್ತ ಕಂಡವರು ಅಪ್ಪಿಕೊಂಬುವರಲ್ಲದೆ, ಬಿಚ್ಚಿ ತೋರುವರೇ? ಆ ಮುತ್ತಿನ ನೆಲೆಯನು ಮಾಣಿಕ್ಯದ ನೆಲೆಯನು ಬಿಚ್ಚಿ ಬೇರಾಗಿ ತೋರಿ ರಕ್ಷಣೆಯ ಮಾಡಿದ ಕಾರಣದಿಂದ, ಬಚ್ಚ ಬರಿಯ ಬೆಳಗಿನೊಳಗೋಲಾಡಿ ನಿಮ್ಮ ಪಾದದೊಳಗೆ ನಿಜಮುಕ್...
ಕಾಣಬಾರದ ಕದಳಿಯಲೊಂದು ಮಾಣಿಕ ಹುಟ್ಟಿತ್ತು. ಇದಾರಿಗು ಕಾಣಬಾರದು. ಮಾರೆನೆಂದರೆ ಮಾನವರಿಗೆ ಸಾಧ್ಯವಾಗದು. ಸಾವಿರಕೆ ಬೆಲೆಯಾಯಿತ್ತು. ಆ ಬೆಲೆಯಾದ ಮಾಣಿಕ ನಮ್ಮ ಶರಣರಿಗೆ ಸಾಧ್ಯವಾಯಿತ್ತು. ಆ ಮಾಣಿಕವ ಹೇಗೆ ಬೆಲೆಮಾಡಿ ಮಾರಿದರೆಂದರೆ, ಕಾಣಬಾರದ ಕದಳ...
ಕನಿಷ್ಟದಲ್ಲಿ ಹುಟ್ಟಿದೆ. ಉತ್ತಮದಲ್ಲಿ ಬೆಳೆದೆ. ಸತ್ಯಶರಣರ ಪಾದವಿಡಿದೆ. ಆ ಶರಣರ ಪಾದವಿಡಿದು ಗುರುವ ಕಂಡೆ. ಲಿಂಗವ ಕಂಡೆ. ಜಂಗಮವ ಕಂಡೆ. ಪ್ರಸಾದವ ಕಂಡೆ. ಪಾದೋದಕವ ಕಂಡೆ. ಇಂತಿವರ ಕಂಡೆನ್ನ ಕಂಗಳ ಮುಂದಣ ಕತ್ತಲೆ ಹರಿಯಿತ್ತು. ಕಂಗಳ ಮುಂದಣ ...
ಅಯ್ಯ ನಾನು ಬಂದ ಭವಾಂತರದಲ್ಲಿ ನೀವು ಕಡೆ ಹಾಯಿಸಿದಿರೆಂಬುದನರಿಯೆ. ಕಂಗಳಿಗೆ ಕನ್ನಡಿಯ ತೋರಿದರು. ನಿಮ್ಮ ಕಾಣದೆ ಇದ್ದೆನಯ್ಯ. ಅದು ಕಾರಣದಿಂದ ಮನಕೆ ಪ್ರಾಣವಾಗಿ ಬಂದು ನಿಂದಿರಿ. ತನುವಿಂಗೆ ರೂಪಾಗಿ ಬಂದು ಸುಳಿದಿರಿ. ನಿಮ್ಮ ಸುಳುಹ ಕಾಣಲೊಡನೆ ಎನ...
ಪೃಥ್ವಿಯನೆ ಆದಿಯ ಮಾಡಿ, ಅಪ್ಪುವಿನಲ್ಲಿ ಗೋಡೆಯನಿಕ್ಕಿ, ಅಗ್ನಿಯನೆ ಅಪ್ಪುವಿನೊಳಗೆ ಹುದುಗಿಸಿ, ಅಗ್ನಿಯನೆ ಬೀಸಿ, ವಾಯುವನೆ ಬೀರಿ, ಆಕಾಶವನೆ ಹೊದಿಸಿ, ಸಹಸ್ರದಳ ಕಮಲವನೆ ಮೇಲು ಕಟ್ಟಕಟ್ಟಿ, ಬಯಲಮಂಟಪವ ಶೃಂಗಾರವ ಮಾಡಿ, ಒಡೆಯನಾಭರಣವ ಹಾರುತಿದ್ದೆನ...
ಏನೇನು ಇಲ್ಲದಾಗ ನೀವಿಲ್ಲದಿದ್ದರೆ, ನಾನಾಗಬಲ್ಲೆನೇ ಅಯ್ಯ? ಆದಿಅನಾದಿ ಇಲ್ಲದಂದು ನೀವಿಲ್ಲದಿದ್ದರೆ, ನಾನಾಗಬಲ್ಲೆನೇ ಅಯ್ಯ? ಮುಳುಗಿ ಹೋದವರ ತೆಗೆದುಕೊಂಡು ನಿಮ್ಮ ತೊತ್ತಿನ ತೊತ್ತಿನ ಪಡಿದೊತ್ತಿನ ಮಗಳೆಂದು, ರಕ್ಷಣೆಯ ಮಾಡಿದ ಶಿಸುವಾದ ಕಾರಣ ಹಡಪದ...
ಬಸವಣ್ಣ, ಚನ್ನಬಸವಣ್ಣ, ಮಡಿವಾಳಯ್ಯ, ಅಲ್ಲಮಪ್ರಭು, ಚನ್ನಮಲ್ಲೇಶ್ವರ, ಹಡಪದಪ್ಪಣ್ಣ, ತಮ್ಮೆಲ್ಲರ ತೊತ್ತಿನ ತೊತ್ತಿನ ಪಡಿದೊತ್ತಿನ ಮಗಳೆಂದು ಹೊತ್ತುಹೊತ್ತಿಗೆ ಎಚ್ಚರವ ಪಾಲಿಸಿ ರಕ್ಷಣೆಯ ಮಾಡಿದ ಕಾರಣದಿಂದ ತಮ್ಮೆಲ್ಲರ ಪಾದದಲ್ಲಿಯೆ ನಿಜಮುಕ್ತಳಾದೆ...














