ಕುರುಡನೊಬ್ಬ ಕೋಲನೂರಿ ಮರದ ಕೆಳಗೆ ನಿಂದಿರುತ್ತ ಕರವ ನೀಡಿ ಬೇಡುತಿದ್ದ ಪುರದ ಜನರನು, "ಹುಟ್ಟು ಕುರುಡ ಕಾಸನೀಡಿ ಹೊಟ್ಟೆಗಿಲ್ಲ ದಯವ ತೋರಿ ಬಟ್ಟೆಯೆಂಬುದರಿಯೆ" ಎಂದು ಪಟ್ಟಣಿಗರನು. ಬೇಡುತಿದ್ದ ದೈನ್ಯದಿಂದ ಆಡುತಿದ್ದ ಶಿವನ ಮಾತ "ಮಾಡಿರಯ್ಯ...
ಕಲ್ಲು ತಂದು ರೂಪುಮಾಡಿ ದೇವನೆಂದು ಕರೆದು ನಿನ್ನ ಎಲ್ಲ ಜಗದ ಒಡೆಯನಾಗಿ ಕಾವುದೆಂದೆನು. ಮೆಯ್ಯ ತೊಳೆದು ಹಾಲನೆರೆದು ಹೂವು ಮುಡಿಸಿ ಗಂಧವಿಕ್ಕಿ ತುಯ್ಯಲಿಟ್ಟು ದೀಪವಿಟ್ಟು "ದೇವ" ಎಂದೆನು. ನಾನು ಮಾಡೆ ನೀನು ಆದೆ ನಾನು...
ನಾವು ಬಡಜೀವಿಗಳು ನೀವು ಮಾತಪಸ್ವಿಗಳು ದೃಷ್ಟವನ್ನು ತೋರಿರಯ್ಯ ; ಕಣ್ಕಟ್ಟು ಮಾಯೆಯೋ ಸೃಷ್ಟಿ ಸಾಮರ್ಥ್ಯವೋ ಒಂದನ್ನು ತೋರಿರಯ್ಯ. ಹಿರಿಯ ಮರಗಳನಾಳ್ವ ಯತಿವರರು ಕೆಲರುಂಟು ಡಂಬದಲಿ ಮೆರೆವರುಂಟು; ಉಪವಾಸ ನಿಯಮದಲಿ ಜಗವ ಜಯಿಸುವರುಂಟು ಒಳಬೆಳಗ ಕಾಣ್ಬರುಂಟು....
ಜಟಕಾ ಹೊಡೆಯುವ ಕೆಲಸವ ಬಿಟ್ಟು, ಹೆಂಡಿರ ಮಕ್ಕಳ ಎಲ್ಲರ ಬಿಟ್ಟು ತಟ್ಟನೆ ಬಲು ವೈರಾಗ್ಯವ ತೊಟ್ಟು ನಡೆದೇ ನಡೆದನು ಜಟಕಾ ಸಾಬಿ ಸಾಬಿಯ ಜನರಲಿ ರಂಗು ಗುಲಾಬಿ. ಹೆಂಡಿರು ಮಕ್ಕಳು ಹುಡುಕಾಡಿದರು ಪೇಟೆಯ ಸಾಬಿಗಳಲೆದಾಡಿದರು....
ಅಂತರಂಗದ ಶಕ್ತಿ ವಿಶ್ವನಾಳುವ ಶಕ್ತಿ; ಅಂತರಂಗದ ದೀಪ್ತಿ ವಿಶ್ವ ಬೆಳಗುವ ದೀಪ್ತಿ- ನಡುವಿರುವ ಮಾಯೆಮೋಹವನೆಲ್ಲ ಕಳಚಯ್ಯ. ಸ್ಥೂಲ ಸೂಕ್ಷ್ಮದ ಭಾರ ಪಂಚಭೂತದ ಭಾರ, ಕಾಲಪಾಶದ ಉರುಲು ಪಂಚೇಂದ್ರಿಯಗಳುರುಲು- ಆತ್ಮ ಪಕ್ಷಿಯ ಕಾಲ್ಗಳಿಂ ತೆಗೆದು ಬಿಸುಡಯ್ಯ,...