ಲಿಂಗಮ್ಮನ ವಚನಗಳು – ೭೫

ಅಯ್ಯ ನಾನು ಊರ ಮರೆದು ಆಡ ಹೋದರೆ ಒಕ್ಕಲು ಹೆಚ್ಚಿ ಸೊಕ್ಕಾಟ ಘನವಾಯಿತ್ತು. ಇದ ಕಂಡು ಊರ ಹೊಕ್ಕೆ, ಸ್ಥಾನದಲ್ಲಿ ನಿಂದೆ, ಒಂಬತ್ತು ಬಾಗಿಲ ಕದವನಿಕ್ಕಿದೆ. ಜ್ಞಾನಾಗ್ನಿಯ ಹೊತ್ತಿಸಲು, ಉರಿ ಎದ್ದಿತ್ತು. ಉಷ್ಣ ಊರ್ಧ್ವಕ್ಕೇರಿತ್ತು....

ಲಿಂಗಮ್ಮನ ವಚನಗಳು – ೭೪

ಆಧಾರವ ಬಲಿಯೆ, ಬೇಗೆ ಉರಿಯಿತ್ತು. ಆ ಕಿಚ್ಚು ಆವರಿಸಿ ಊರ್ಧ್ವಕ್ಕೇರಿತ್ತು. ಸಾಸಿರದಳ ಅಮೃತ ಕೊಡ ಕಾಯಿತ್ತು. ಕಾದ ಅಮೃತ ಉಕ್ಕಿ ತೊಟ್ಟಿಕ್ಕಿ ಅಮೃತವನುಂಡು ಹಸಿವೆ ಕೆಟ್ಟಿತ್ತು. ತೃಷೆಯಡಗಿತ್ತು. ನಿದ್ರೆ ಆರತಿತ್ತು. ಅಂಗಗುಣವಳಿಯಿತ್ತು. ಲಿಂಗಗುಣ ನಿಂದಿತ್ತು....

ಲಿಂಗಮ್ಮನ ವಚನಗಳು – ೭೩

ಒಂದು ಹುತ್ತಕ್ಕೆ ಒಂಬತ್ತು ಬಾಗಿಲು ಇರುವದು. ಒಂದು ಸರ್ಪ ಒಂಬತ್ತು ಬಾಗಿಲಲ್ಲಿಯು ನೋಡುತಿಪ್ಪುದು. ಒಂಬತ್ತು ಬಾಗಿಲಿಗೆ ಕದವನಿಕ್ಕಿ ಒಂದು ಬಾಗಿಲ ಅಗುಳಿ ದಾರವಂದವನಿಕ್ಕಿ ಬಲಿಯಲು ತಿರುಗುವುದಕ್ಕೆ ತಾವ ಕಾಣದೆ, ಇರುವುದಕ್ಕೆ ಇಂಬ ಕಾಣದೆ, ನಿಲುವುದಕ್ಕೆ...

ಲಿಂಗಮ್ಮನ ವಚನಗಳು – ೭೨

ಒಂದು ಊರಿಗೆ ಒಂಬತ್ತು ಬಾಗಿಲು, ಆ ಊರಿಗೆ ಐವರು ಕಾವಲು, ಆರು ಮಂದಿ ಪ್ರಧಾನರು, ಇಪ್ಪತ್ತೈದು ಮಂದಿ ಪರಿವಾರ, ಅವರೊಳು ತೊಟ್ಟನೆ ತೊಳಲಿ ಬಳಲಲಾರದೆ, ಎಚ್ಚತ್ತು ನಿಶ್ಚಿಂತನಾದ ಅರಸರ ಕಂಡೆ. ಅರಸಿನ ಗೊತ್ತುವಿಡಿದು, ಒಂಬತ್ತು...

ಲಿಂಗಮ್ಮನ ವಚನಗಳು – ೭೧

ತುಂಬಿದ ಮನೆಯ ಹೊಕ್ಕರೆ ದೊಂದಳವಾಯಿತ್ತು. ಈ ಸಂದಳಿಗಾರದೆ, ತುಂಬಿದ ಮನೆಯ ಕಿಚ್ಚನಿಕ್ಕಿದರೆ, ನಿಶ್ಚಿಂತವಾಯಿತ್ತು. ಬಟ್ಟಬರಿಯ ಮನೆಯೊಳಗೆ ನಿಮ್ಮ ಬೆಳಗನೆ ನೋಡಿ ಸುಖಿಯಾದೆನಯ್ಯ ಅಪ್ಪಣಪ್ರಿಯ ಚನ್ನಬಸವಣ್ಣಾ. *****

ಲಿಂಗಮ್ಮನ ವಚನಗಳು – ೭೦

ಬಟ್ಟಬಯಲಲ್ಲಿ ಒಂದು ಮರ ಹುಟ್ಟಿತ್ತು. ಅದಕ್ಕೆ ಸುತ್ತಲು ಬೇರು ಆವರಿಸಿತ್ತು. ಅದಕ್ಕೆ ಶತಕೋಟಿ ಕೊನೆ ಬಿಟ್ಟಿತ್ತು. ಅಡಗಿದ ಬೇರನೆ ಸವರಿ, ಶತಕೋಟಿ ಕೊನೆಯನೆ ಕಡಿದು, ಮರ ಒಣಗಿತ್ತು. ಉಲುಹು ನಿಂದಿತ್ತು. ಎಲೆ ಉದುರಿತ್ತು. ತರಗೆಲೆಯಾದ...

ಲಿಂಗಮ್ಮನ ವಚನಗಳು – ೬೯

ನೆನೆದಿಹೆನೆಂದರೆ, ಏನ ನೆನೆವೆನಯ್ಯ! ಮನ ಮಂಕಾಯಿತ್ತು. ತನು ಬಯಲಾಯಿತ್ತು. ಕಾಯ ಕರಗಿತ್ತು. ದೇಹ ಹಮ್ಮಳಿಯಿತ್ತು. ತಾನು ತಾನಾಗಿ, ಬೆಳಗಿನೊಳಗೋಲಾಡಿ ಸುಖಿಯಾದೆನಯ್ಯ ಅಪ್ಪಣಪ್ರಿಯ ಚನ್ನಬಸವಣ್ಣಾ. *****

ಲಿಂಗಮ್ಮನ ವಚನಗಳು – ೬೭

ಕಂಡು ಕೇಳಿಹೆನೆಂಬ ದುಂದುಗ ಬಿಟ್ಟು, ನೋಡಿ ನುಡಿವೆನೆಂಬ ನೋಟವ ನಿಲಿಸಿ, ಮಾಡಿ ಕೂಡಿಹೆನೆಂಬ ಮನ ನಿಂದು, ತನುವ ಮರೆದು, ತಾ ನಿಜ ಸುಖಿಯಾದಲ್ಲದೆ, ಘನವ ಕಾಣಬಾರದೆಂದರು ನಮ್ಮ ಅಪ್ಪಣಪ್ರಿಯ ಚನ್ನಬಸವಣ್ಣಾ. *****

ಲಿಂಗಮ್ಮನ ವಚನಗಳು – ೬೬

ಕಂಡಿಹೆ ಕೇಳಿಹೆನೆಂಬ ದ್ವಂದ್ವವ ಹಿಂಗಿ, ಉಂಡಿಹೆ ಉಟ್ಟಿಹೆನೆಂಬ ಹಂಗವ ಬಿಟ್ಟು, ನಡಿದಿಹೆ ನುಡಿದಿಹೆನೆಂಬ ಮಾಟವ ನಿಲಿಸಿ, ಜಗದಾಟವ ನಿಲಿಸಿ, ಮಾಟ ಕೂಟ ಜಗದಾಟ ಕೋಟಲೆಯೊಳು ಸಿಕ್ಕದೆ ದಾಟಿ ಹೋದ ಶರಣರ ಪಾದಕ್ಕೆ ಶರಣೆಂದು ಬದುಕಿದೆನಯ್ಯ...
cheap jordans|wholesale air max|wholesale jordans|wholesale jewelry|wholesale jerseys