ನಿತ್ಯ ಸತ್ಯ

ಕನ್ನಡವೆ ಸತ್ಯ ಕನ್ನಡವೆ ನಿತ್ಯ ಕನ್ನಡರೆ ನಿತ್ಯ ಸತ್ಯ ಕನ್ನಡವ ಮರೆತ ಈ ಕಾವ್ಯ ತುಡಿತ ಎಷ್ಟಿದ್ದರೂನು ಮಿಥ್ಯ ಕಣ್ಸೆಳೆದರೇನು ಮಲ್ಲಿಗೆಯ ಮಾಲೆ ಕನ್ನಡಕು ಅಲ್ಲ ಮಿಗಿಲು; ನಲ್ವತ್ತ‌ಏಳು ಅಕ್ಷರವ ಆಯ್ದು ಜೋಡಿಸಲು ಸಾಲು...

ಕನ್ನಡ ಉಳಿಸೇಳಿ

ಎದ್ದೇಳಿ ಎದ್ದೇಳಿ ಎದ್ದೇಳಿ ಎಲ್ಲ ಕನ್ನಡದ ತನವಿರುವ ಕನ್ನಡಿಗರೆಲ್ಲ ಬೆಳಗಾವಿ ನಮ್ಮಿಂದ ಸರಿಯುವ ಮುನ್ನ ಬೆಂಗ್ಳೂರು ದೆಹಲಿಯ ವಶವಾಗೊ ಮುನ್ನ ಕನ್ನಡವೆ ಮರೆಯಾಗಿ ಹೋಗುವ ಮುನ್ನ ಎದ್ದೇಳಿ ಕನ್ನಡಿಗರೇ ತೆರೆದು ಕಣ್ಣ ಕಾವೇರಿ ಕರುನಾಡ...

ಕನ್ನಡ ಪ್ರೇಮ

ಹುಟ್ಟುವುದಿದ್ದರೆ ಮರುಜನುಮದಲಿ ಕನ್ನಡ ನಾಡಲ್ಲೆ ಈ ಚಿನ್ನದ ಬೀಡಲ್ಲೆ ಹುಟ್ಟದಿದ್ದರೂ ಮಾನವನಾಗಿ ಕಾವೇರಿಯಲಿರುವೆ - ಅಲ್ಲಿ ಹನಿಹನಿಯಾಗಿರುವೆ - ಕನ್ನಡ ಹೊಂಬೆಳೆ ಸಿರಿ ತರುವೆ ಹಾಡದಿದ್ದರೂ ಗಾಯಕನಾಗಿ ಕೋಗಿಲೆಯಾಗಿ ಇರುವೆ - ಉಲಿವ ಸ್ವರಸ್ವರದಲೂ...

ಎದೆ ತುಂಬಿದ ಹಾಡು

ಕನ್ನಡ ನಾಡು ಸುವರ್ಣ ಬೀಡು ಮುತ್ತು ಹರಿವ ಜಾಡು ಕನ್ನಡ ನಾಡಿನ ಚೆಲುವಿಗೆ ಒಲಿದು ಹಾಡುವೆ ನಾ ಹಾಡು - ಎದೆ ತುಂಬಿ ಬಂದ ಹಾಡು ಬೇಲೂರಿನ ಶಿಲೆ ಶಿಲ್ಪಿಗಳಾ ಕಲೆ ಸಮ್ಮೋಹನವಾಗಿ ಮಲೆನಾಡಿನ...

ಕರ್ನಾಟಕ ವೈಭವ

ಮಾನವನಾಗಿ ಹುಟ್ಟಿದ್ಮೇಲೆ ಕರ್ನಾಟಕ ನೋಡು ಹೇಗೋ ಏನೋ ನಿನ್ನೀ ಜನ್ಮ ಪಾವನವ ಮಾಡು ಕಣ್ಣಿದ್ದರು ಈ ಸುಂದರ ನಾಡನು ನೋಡದ ನಿನ ಬಾಳು ಕಣ್ಣಿದ್ದರು ತಾ ಕುರುಡನಂತೆ ಆಗುವೆ ನೀ ಹಾಳು ಪಂಪ ರನ್ನ...

ಮೂಡದ ಕವಿತೆ

ಕೋಗಿಲೆ ಕೊರಗುತಿದೆ ನವಿಲು ಮರುಗುತಿದೆ ಕನ್ನಡ ನಾಡಲ್ಲಿ ಸಿರಿ ಗಂಧದ ಬೀಡಲ್ಲ ಜಿಂಕೆ ಓಡದಿದೆ ಹಕ್ಕಿ ಹಾರದಿದೆ ಕನ್ನಡ ಬಾನಲ್ಲಿ ! ತಿಳಿ ಗನ್ನಡ ನೀಲಿಯಲಿ ಸಹ್ಯಾದ್ರಿಯ ಹಸಿರು ಕಳಕೊಂಡಿದೆ ಉಸಿರು ನಂದನ ವನದಲ್ಲಿ...

ಎದೆಯ ಬಡಿತ

‘ಲಬ್‌ಡಬ್ ಲಬ್‌ಡಬ್’ ಎನ್ನದೆ ಹೋದರು ನನ್ನಯ ಈ ಹೃದಯ ಕನ್ನಡ ಕನ್ನಡ ಎನ್ನತಲಿರುವುದು ಕೇಳೋ ಓ ಗೆಳೆಯ ಎದೆ ಸೀಳಿದರೂ ಅಕ್ಷರ ನಾಲ್ಕು ನನ್ನಲಿ ಇಲ್ವಂತೆ ಆದರೆ ಏನು? ಮೂರಕ್ಷರದ ಕನ್ನಡ ಇಹುದಂತೆ! ನನ್ನಯ...

ನಲ್ಮೆಯ ಕರೆ

ಕನ್ನಡದನ್ನವ ಉಂಡವರೆ - ನೀವ್ ಕನ್ನಡಿಗರು ಆಗಿ ಕಾವೇರಿಯನು ಕುಡಿದವರೇ - ನೀವ್ ನಮ್ಮಲಿ ಒಂದಾಗಿ ಅನ್ಯಭಾಷೆಯನು ನುಡಿವವರೆ ಕಲಿಯಿರಿ ಕನ್ನಡವ ಕರುನಾಡಿನ ಈ ನೆಲದಲ್ಲಿ ಮೆರೆಸಿರಿ ಸದ್ಗುಣವ ಕರ್ನಾಟಕದಲೆ ನಿಂತವರೆ ಕಾಯಿರಿ ಕನ್ನಡವ...

ಮಲೆನಾಡಿನ ಕೋಗಿಲೆ

ಮಲೆನಾಡಿನ ಕೋಗಿಲೆ ನೀ ಹಾಡಿದೆ ಸ್ವರವೆತ್ತಿ ಬರಡಾದ ಎದೆಗಳಲಿ ಹಸಿರನ್ನು ಬಿತ್ತಿ ಅನಿಕೇತನದಿಂದ ಬಂದೆ ನಿಕೇತನದ ಕಡೆಗೆ ಮತ್ತೆ ಅನಿಕೇತನ ನೀ; ಜನಮನದಿ ನಿಕೇತನ ಕಗ್ಗತ್ತಲ ರಾತ್ರಿಯಲಿ ಮೂಡಿದೆ ಧೃವತಾರೆ ಕ್ರಾಂತಿ ಕಾಳಿ ಕಠಾರಿಗೆ...

ಕನ್ನಡಮ್ಮನಿಗೆ

ಜನ್ಮವ ನೀಡಿಹೆ ಏಕಮ್ಮ? ನಿನ್ನೀ ಕರುಳಿನ ಕುಡಿಗಳಿಗೆ ಮೊಲೆಯನು ಉಂಡು ಮೊಲೆಯನೆ ಕಚ್ಚಿ ವಿಷವನು ಉಗುಳುವ ದುರುಳರಿಗೆ ಅರೆ ಬೆತ್ತಲೆ ನೀನಾಗಿ ಕಂಡರೂ ಪರ ಹೆಣ್ಣಿನ ಮೈ ಮುಚ್ಚುತಿಹ ಹಸಿವಿಂದಲಿ ನೀ ರೋಧಿಸುತ್ತಿದ್ದರೂ ಅನ್ಯರ...