Home / Hannerdumath

Browsing Tag: Hannerdumath

ಆಡು ಬಾಬಾ ಕೂಡು ಬಾಬಾ ಬೆಳಗಿನಂಗಳ ಹೊಳೆಯಲಿ ಹಾಡು ಬಾಬಾ ನೀಡು ಬಾಬಾ ನಿಜದ ನಿರ್‍ಮಲ ಕೊಳದಲಿ ||೧|| ಎತ್ತ ನೋಡಲಿ ಸುತ್ತ ಓಡಲಿ ಒಲವಿನಮೃತ ಮಿಲನಜಂ ಸತ್ಯ ಸೋಂಸೋಂ ತೋಂತೋಂ ತನನ ತಂತನ ತನನ ಓಂ ||೨|| ಗಾಳಿ ಬಿಂಗರಿ ಮುಗಿಲ ಸಿಂಗರಿ ತುಂಬಿ ತಿರುಗಿದ...

ಸಾಮೇರ ಮಠದಾಗ ಚಪ್ಪಲ್ಲು ಮಠಮಾಯಾ ಅಯವತ್ತು ರೂಪಾಯಿ ಗಪ್ಪಗಾರಾ ||ಪಲ್ಲ|| ಬ್ಹಾಳ್ಬಾಳ ಭಕ್ತೀಲಿ ಕೈ ಮುಗುದು ಹೋಗಿದ್ದೆ ಜೋರ್‍ಜೋರು ಚಪ್ಪಲ್ಲು ಮಂಗಮಾಯಾ ಹುಳ್ಳುಳ್ಳ ಹುಣಿಸೆಣ್ಣು ಹಲ್ಲೆಲ್ಲ ಚಳ್ಳಣ್ಣು ಚಂದುಳ್ಳ ನನಭಕುತಿ ಚೂರುಚಾರಾ ||೧|| ಸಾಮೇರ...

ರತುನ ದಿಂದ ರತುನ ಕಂಡೆ ಕುತನಿ ಗಾದಿ ಕಂಡೆನೆ ತಂಪು ತನನ ಸಂಪು ಪವನ ನಿವುಳ ಹವುಳವಾದೆನೆ ||೧|| ಮುಗಿಲ ಗಾನ ನಗೆಯ ಯಾನ ಹಗೆಯ ಹೊಗೆಯ ನಂದಿಸಿ ನೆಲದ ತಾಳ ಪಕ್ಷಿ ಮೇಳ ವೃಕ್ಷ ವೃಕ್ಷ ತುಂಬಿಸಿ ||೨|| ನೋಡು ತೆಂಗು ನೋಡಿ ನಂಬು ಇಹಕೆ ಮಹಕೆ ಹೊಂದಿದೆ ...

ಏನ್ಚಂದ ಏನ್ಚಂದ ನಮ್ಮೂರ ಕಾಲೇಜು ಹನುಮಂತ ದೇವ್ರಾಂಗ ಮುದ್ದು ಯವ್ವಾ ಹುಡುಗೋರು ಮುದುಮುದ್ದ ಹುಡಿಗೇರು ಸುದಸುದ್ದ ಕಲಸೋರು ಕಲಸಕ್ರಿ ಕಣ್ಣಿಯವ್ವಾ ||೧|| ಲೈಬ್ರೀಯ ಪುಸ್ತೋಕು ಲೈಬ್ರ್ಯಾಗ ಕುಂತಾವ ಕುಂತಾರ ಹುಡುಗೋರು ಗೇಟಿನ್ಯಾಗ ಥೇಟ್ ಥೇಟ ಕಾಮಣ್...

ಹಗುರ ಹಗುರ ಹೂವ ಮೇಲೆ ಹೂವು ಗಲ್ಲ ಹೂವಿಸು ತನನ ತನನ ಹನಿಯ ಮೇಲೆ ಜೇನ ಹನಿಯ ಗಾನಿಸು ||೧|| ಮೆಲ್ಲ ಮೆಲ್ಲ ಮಧುರ ಪಾದ ಚಿಗುರ ಮೇಲೆ ತುಂಬಿಸು ದಲದ ದಲದ ಎಲೆಯ ಮೇಲೆ ಹಸಿರ ಪ್ರೀತಿ ರೂಪಿಸು ||೨|| ಮಂದ ಮಂದ ಪುಂಗಿ ಪವನ ಮುಗಿಲ ಮೇಲೆ ತೇಲಿಸು ಚಂದ ಚ...

ಹಾಸಿಗಿ ಹಾಸಾಕ ಬಂದೇನ ನಾ ಗೆಣತಿ ಹಾಸಿಗಿ ಹಾಸಾಕ ನಿಂತೇನ ||ಪಲ್ಲ|| ಗೆಣಿಯಾನು ಬರತಾನ ಗೆಣತೀಯ ಬೇಡ್ತಾನ ಮಖಮಲ್ಲು ಹಾಸೀಗಿ ಮಾಡ್ತೇನ ಬೀಸಣಿಕಿ ಇಡತೇನ ಹೂಹಣ್ಣು ಕೊಡತೇನ ಬೆಚ್ಚಂಗ ಕುತನೀಯ ಹಾಕ್ತೇನ ||೧|| ದೇವರಾ ಹೆಸರಾಗ ದೇವಕಿ ಬಸರಾದ್ರ ಬಾಣೆಯ...

ನಿನ್ನ ಒಂದು ನೋಟ ಸಾಕು ಕೋಟಿ ಜನ್ಮ ಸಾರ್ಥಕಾ ನಿನ್ನ ಒಂದು ನಗೆಯು ಸಾಕು ಕಷ್ಟ ಕೋಟಿ ಚೂರ್ಣಕಾ ||೧|| ನೀನೆ ನೀನು ಕಾಮಧೇನು ಪುಂಗಿ ನಾದ ಪವನಪಂ ನೀನೆ ಕಂಪು ತಂಪು ಇಂಪು ಸೊಂಪು ಸುಮನ ಸೋಮಪಂ ||೨|| ಲಲನೆ ಲಲನೆ ಚಲನೆ ಚಲನೆ ಹಲಲ ಹಲಲ ಹಲ್ಲಣ್ಣ ನೀನ...

ಬಂಗರ ಚಂದ್ರಾ ಮುಗಿಲಾ ಇಂದ್ರಾ ಹೌವ್ವನೆ ನಕ್ಕಿದ್ದಾ|| ಏನ್ಚಂದಽಽ ಏನ್ಚಂದಽಽ ||ಪಲ್ಲ|| ಚಂಚಂದಾಗಿ ಆಡ್ಯಾಡ್ಯಾಡ್ತಾ- ನನ್ನನ್ರಾಗ ಇಲ್ಲಾಗಿ ಹೋದ ಬಂದೇನೆಂದು ಬ್ಯಾಸತ್ತಾನು ಹೇಳೇಳ್ರಾಗ ಗಳ್ಳನೆ ಹೋದ ||೧|| ಕಂಡ್‍ಕಂಡಾನು ಕಲ್ಲಾಬಿಲ್ಲಿ ಹೌವ್ವವ್ವ...

ಆಹಾ ಬಂತು ಬಂತು ಹಬ್ಬ ನೀನು ಬಂದ ಗಳಿಗೆಗೆ ಒಹೋ ಬಂತು ಬಂತು ಹರುಷ ನೀನು ಕಂಡ ನಿಮಿಷಕೆ ||೧|| ನನ್ನ ಒಡೆಯ ನಲ್ಲ ರಾಯ ಯುಗದ ಕೂಗು ಕೂಗಿದೆ ಜಗದ ನೊಗದ ನೂರು ಭಾರ ಚರಣ ತಲಕೆ ಬಾಗಿದೆ ||೨|| ನೀನೆ ಮೂಡು ನೀನೆ ಬೆಳಗು ನೀನೇ ಹಿರಿಯ ಪ್ರೇರಣಾ ನೀನೆ ಜ...

ಜೋಗತಿ ನಾನು ಬೀಗತಿ ಕಾಡತಿ ಯಾಕ ನೋಡತಿ ||ಪ|| ತುರುಬೀನ ಸಿಂಬ್ಯಾಗ ಬಿಂದೀಗಿ ನಾನಿಟ್ಟೆ ತುಂಬೀದ ಮಂದ್ಯಾಗ ಕುಣದೇನ ವಾರೀಗಿ ಗೆಳತೇರು ಛೀಮಾರಿ ಹಾಕ್ಯಾರ ಬೀದೀಯ ಬಸವೆಂದ್ರು ಬಂದೇನ ||೧|| ಇಲಕಲ್ಲ ಸೀರ್‍ಯಾಗ ಬೀಸೀದ ತೋರ್ಮುತ್ತ ಪಕ್ಕಂತ ಹಾರೀತ ಪರ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...