ಗಳಿಗೆಬಟ್ಟಲ ತಿರುವುಗಳಲ್ಲಿ – ೧೧೭

ಸುಡುಸುಡುವ ಆಕ್ರೋಶ ಒಳಗೇ ಅದುಮಿಟ್ಟು ಎಂದಿಗೂ ಹಡೆಯದ ರೊಟ್ಟಿಯ ಬಸಿರು. ದಿಟ ಕಂಡರೂ ಕಣ್ಣುಮುಚ್ಚಿ ಸದ್ದಿಲ್ಲದೇ ಒಳಗೇ ಬೆಚ್ಚಿ ಏನೂ ಕಂಡಿಲ್ಲವೆಂಬ ಕಪಟ ನಾಟಕವಾಡುತ್ತದೆ ಹಸಿವು. *****

ಗಳಿಗೆಬಟ್ಟಲ ತಿರುವುಗಳಲ್ಲಿ – ೧೧೬

ತನಗೆ ಬೇಕೆಂದಂತೆ ತಾನೇ ಕಂಡುಕೊಳ್ಳುವ ಸತ್ಯದ ಹುಡುಕಾಟದಲ್ಲಿ ಹಸಿವು ನೀಡುತ್ತದೆ ಏಕಪಕ್ಷೀಯ ತೀರ್ಪು ರೊಟ್ಟಿಯ ಜೀವಕಾರುಣ್ಯ ಬೀದಿಗೆ ಬಿದ್ದ ಬೆಪ್ಪು. *****

ಗಳಿಗೆಬಟ್ಟಲ ತಿರುವುಗಳಲ್ಲಿ – ೧೧೫

ಜಂಗಮ ಹಸಿವೆಗೆ ಆಲಯ ಕಟ್ಟುವುದು ಬೇಕಿಲ್ಲ. ಆಜ್ಞೆಗೆ ರೊಟ್ಟಿ ಕಿವಿಗೊಟ್ಟಿದೆ ಮನಸು ಕೊಟ್ಟಿಲ್ಲ. ಜಂಗಮದ ಬಯಲಲಿ ಸ್ಥಿರ ಆಲಯ ಕಟ್ಟುತ್ತದೆ. ರೊಟ್ಟಿ ಅಳಿಯುತ್ತದೆ ಸೃಷ್ಟಿಯಂತಿಮ ಸತ್ಯದ ಸ್ಥಾವರ ಉಳಿಯುತ್ತದೆ. *****

ಗಳಿಗೆಬಟ್ಟಲ ತಿರುವುಗಳಲ್ಲಿ – ೧೧೩

ಮತ್ತೆ ಹಸಿವು ವ್ಯಘ್ರಗೊಂಡಿದೆ ಎಲ್ಲ ಸೂರ್ಯನದೇ ಕಿತಾಪತಿ ಅವನ ಮುಖಕ್ಕಿಷ್ಟು ಉಗಿದು ಒಳ ಬಂದ ರೊಟ್ಟಿಗೆ ಏಕೋ ಕ್ಷಮಯಾಧರಿತ್ರಿ ತಣ್ಣಗಿನ ಇಳೆ ನೆನಪಾಗುತ್ತಾಳೆ. ಮತ್ತೆ ಹೊರಬಂದು ಉರಿವ ಸೂರ್ಯನನ್ನೇ ಅಣಕಿಸಿ ಬೀಗುತ್ತ ಹೇಳುತ್ತದೆ ‘ನಾನು...

ಗಳಿಗೆಬಟ್ಟಲ ತಿರುವುಗಳಲ್ಲಿ – ೧೧೨

ಸುತ್ತೆಲ್ಲ ಹಸಿವಿನ ನಿಗೂಢ ಕರಿ ಮೌನ ಆವರಿಸಿ ಪಸರಿಸಿದೆ ಭೀತಿಯನು ಹಸಿ ನೆತ್ತರಲಿ ಕಲೆಸಿ ದೈನ್ಯತೆಯೇ ಮೈವೆತ್ತು ಬೇಡುತ್ತದೆ ರೊಟ್ಟಿ ‘ಪ್ರಭು ಆಕಾಶ ಬೇಡ ನನಗೆ ಅರಳಲು ಬಿಡು ನೆಲದ ನಗೆಗೆ’ *****

ಗಳಿಗೆಬಟ್ಟಲ ತಿರುವುಗಳಲ್ಲಿ – ೧೧೧

ಹೇಗೆಂದು ಅಳೆವುದು ಈ ಹಾಳು ಹಸಿವನ್ನು ಒಮ್ಮೆ ಇತ್ತಿತ್ತ ಒಮ್ಮೆ ಅತ್ತತ್ತ ಅಳತೆಗೋಲುಗಳೇ ಪೊಳ್ಳು. ಲೆಕ್ಕವಿರದಷ್ಟು ರೊಟ್ಟಿ ತುಂಬಿಸಿದರೂ ಹಸಿವಿನ ತಕ್ಕಡಿ ತಟ್ಟೆ ಏರುವುದಿಲ್ಲ ತುಲಾಭಾರ ಮುಗಿಯುವುದಲ್ಲ. *****

ಗಳಿಗೆಬಟ್ಟಲ ತಿರುವುಗಳಲ್ಲಿ – ೧೧೦

ಪರಸ್ಪರ ರೊಟ್ಟಿ ಹಸಿವುಗಳ ಅಂತರಂಗ ಅನಾವರಣಗೊಳದೇ ಅಪರೂಪದ ಸಮರಸವಿಲ್ಲ. ಮುಕ್ತಗೊಳದೇ ಅರಿವಿಲ್ಲ. ನದಿ ಮೌನವಾಗಿ ಹರಿಯುತ್ತದೆ ಎರಡೂ ದಡಗಳು ಸುಮ್ಮನೆ ಬಿದ್ದುಕೊಂಡಿರುತ್ತವೆ. *****

ಗಳಿಗೆಬಟ್ಟಲ ತಿರುವುಗಳಲ್ಲಿ – ೧೦೯

ಹಸಿವು ಮಾತನಾಡುವಾಗ ರೊಟ್ಟಿ ಮೌನವಾಗಿದ್ದು ರೊಟ್ಟಿ ಮಾತನಾಡುವಾಗ ಹಸಿವು ಮೌನವಾಗಿದ್ದರೆ ಮಾತಿಗೂ ಮೌನಕ್ಕೂ ಬೆಲೆ ಪರಸ್ಪರ ಒಟ್ಟಾಗಿ ಗುದ್ದಾಡಿದರೆ ಮಾತು ಮೌನಗಳೇ ಅರ್ಥಹೀನ. *****