ಶ್ರೀ ಸತ್ಯ ಶಿವಯುಗದ ಕಲ್ಪತರಲಿ

ಓ ಮುಗಿಲ ದೇವತೆಯೆ ಓ ಕಡಲ ರೂಪಸಿಯೆ ಓ ಹೇಳಿ ಕಿಟ್ಟಣ್ಣನೆಂದು ಬರುವ ಹೂವಿಗಿಂತಲು ಹೂವು ಮುದ್ದಿಗಿಂತಲು ಮುದ್ದು ಕೆನೆಹಾಲ ಸವಿಗಲ್ಲ ಎಂದು ತರುವ ಓ ಗಗನ ಮಲ್ಲಿಗೆಯೆ ಓ ಸಿಡಿಲ ಸಂಪಿಗೆಯೆ ಆ...

ಬಾರೈ ಬಾರೈ ಹೋಳಿ ಕಾಮಾ

ಬಾರೈ ಬಾರೈ ಹೋಳಿ ಕಾಮಾ ಹೋಳಿಗೆ ನಿನ್ನಾ ಮಾಡೂವೆ ನಿನ್ನಾ ಕಾಳು ಬ್ಯಾಳಿ ಕುಚ್ಚಿ ಯೋಗಾ ಬೆಲ್ಲಾ ಹಾಕೂವೆ ರುಬ್ಬೀ ರುಬ್ಬೀ ಗುಬ್ಬಿ ಮಾಡಿ ನಿನ್ನಾ ಹೂರ್‍ಣಾ ರುಬ್ಬೂವೆ ಯೋಗಾ ಆಗ್ನಿ ಹಂಚು ಮಾಡಿ...

ನಾವು ಕಮಲದ ಹೂಗಳು

ನಾವು ಮಕ್ಕಳು ಶಿವನ ಶಿಶುಗಳು ನಾವು ಕಮಲದ ಹೂಗಳು ನಾವು ಆತ್ಮರು ಬಿಂದು ರೂಪರು ನಾವು ನಂದಾದೀಪರು ದೊಡ್ಡ ತೇರು ಎಳೆದ ಮೇಲೆ ಗಿಡ್ಡ ತೇರು ಏತಕೆ ಆತ್ಮ ದೇವರ ಕಂಡ ಮೇಲೆ ಗಿಂಡಿ...

ನಾ ಸೈ ನೀ ಸೈ

ಆಕೈ ಇಕೈ ತಾತಾ ಕೈಕೈ ಗಿಮಿಗಿಮಿ ತಿರುಗೋಣ ನಾಸೈ ನೀಸೈ ಸೈಸೈ ಹೈಹೈ ಗರ್ರನೆ ತಿರುಗೋಣ ನಾನೂ ನೀನೂ ಬಿಸಿಬಿಸಿ ಪಾನಂ ಜನುಮದ ಜೇಂಗಾನಂ ನೀನೂ ನಾನೂ ಖುಶಿ ಖುಶಿ ಮಿಲನಂ ಒಲವಿನ ಓಂ...

ದೀಪ ಆರಿದೆ

ಎದೆಯ ಗುಡಿಯಲಿ ದೀಪವಾರಿದೆ ಸತ್ಯ ದೀಪವ ಹೊತ್ತಿಸು || ಬೇಕು ಬೇಕಿನ ಜೀಕು ಜೀಕಿನ ಕಾಯ ಕಾಮನೆ ತಿರುಗುಣಿ ನಾನು ನನ್ನದು ನನಗೆ ಎಂಬುವ ಮಮತೆ ಮರುಕದ ಸರಪಣಿ ಇರದೆ ಇರುವಾ ಇದ್ದು ಬೆರೆವಾ...

ದೇವ ಭಾರತಿ ಇಳಿಯಲಿ

ದಂಡಖಾನೆ ದವಾಖಾನೆ ಕೋರ್‍ಟು ಠಾಣೆ ಇಲ್ಲದಾ ಖಂಡಖಾನೆ ಹೆಂಡಖಾನೆ ಹೆಣ್ಣ ಪೇಟೆ ಇಲ್ಲದಾ ಬರಲಿ ಸುಂದರ ಸತ್ಯಸಿಂಗರ ಸತ್ಯ ಯುಗದಾ ಕಾಲವು ಸತ್ತು ಹೋಗಲಿ ಕಲಿಯ ಕಾಲವು ಬರಲಿ ದೇವರ ಕಾಲವು ಮಠವೆ ಸಂತಿ...

ಕಣ್ಣು ಮುಚ್ಚಲು ತಾಯಿ ಕಣ್ಣು ಬಿಚ್ಚಲು ತಾಯಿ

ಬಾಳುವೆನು ಭಗವಂತನಾನಂದ ತೊಟ್ಟಿಲಲಿ ಈ ಹಗಲು ರಾತ್ರಿಗಳ ತೂಗಿ ತೂಗಿ ಆತ್ಮ ಜೋಜೋ ಮಗುವೆ ಬಿಂದು ಜೋಜೋ ಶಿಶುವೆ ಜೋಕಂದ ಜೋಗುಳದ ನಾದವಾಗಿ ಬೆಚ್ಚನೆಯ ತೊಟ್ಟಿಲಲಿ ಕೆನೆಬೆಲ್ಲ ಚುಂಬನದಿ ಸಕ್ಕರೆಯ ಎದೆಹಾಲ ಪಾನಗೈವೆ ವಿಶ್ವದೇವತೆ...

ಸಾಕು ಯುದ್ಧದ ಯೋಜನಂ

ಏನ ಹಾಡಲಿ ಏನ ಹೇಳಲಿ ಬನವು ಬಿಸಿಲಿಗೆ ಬೆಂದಿದೆ. ಹೊತ್ತಿ ಬತ್ತಿದ ಕೆರೆಯ ಮಣ್ಣಲಿ ಹಕ್ಕಿ ಹವ್ವನೆ ಅತ್ತಿದೆ ಮುಗಿಲ ನೀಲಿಮೆ ಕೆಂಡ ಕುಲಿಮೆಯೆ ಕಾಸಿ ಕಬ್ಬಿಣ ಬಡಿದಿದೆ ಗುಡ್ಡ ಬಡಿದಿದೆ ಬೆಟ್ಟ ಬಡಿದಿದೆ...