ಚಂದ್ರಚುಂಬಿತ ಯಾಮಿನೀ

ಚಂದ್ರಚುಂಬಿತ ಯಾಮಿನೀ ನವವಿರಹಿ ಚಿತ್ತೋನ್ಮಾದಿನೀ, ಜಾರುತಿದೆ ಕಲನಾದಿನೀ, ಅದೊ! ಹಾಡುತಿರುವಳು ಕಾಮಿನೀ. ತರುಣಿ ವೀಣೆಯ ಮಿಡಿವಳು ತಚ್ಛ್ರುತಿಗೆ ವಾಣಿಯನೆಳೆವಳು- ಮಧುರಗೀತದ ನುಡಿಯೊಳು ತನ್ನೆದೆಯ ಭಾವವ ಮೊಗೆವಳು: ಒಲುಮೆ ಹೃದಯವ ಹೊಗಲು ಬಯಸಲು ಆರು ತಡೆಯಲು...

ಹೇಮಾವತಿಯ ತೀರದಲ್ಲಿ

ಹಗಲ ಕಣ್ಣನು ಮಂಕು ಕವಿಯಿತು, ಮುಗಿಲ ಬಾಣದ ಬಿರುಸು ಹೆಚ್ಚಿತು, ನೆಗೆದು ನೊರೆಯನು ಕೀಳುತೋಡಿತು ಮಲೆಯನಾಡಿನ ಹೇಮೆಯು. ಕರೆಯ ಮಂಟಪದೊಳಗೆ ಕುಳಿತು, ಬೆರಗುಮಾಡುವ ಪ್ರಕೃತಿಯಂದಿನ ಇರವ ನೋಡುತ ಮೂಕರಾದೆವು ನಾನು ರಾಮ ಇಬ್ಬರೂ. ಮುಗಿಲಿನಾರ್‍ಭಟ,...

ನಿನ್ನ ನಾನರಿಯೆನೈ

ನಿನ್ನ ನಾನರಿಯೆನೈ ಅರಿಯೆ ಅರಿಯೆ, ಎನ್ನ ಮೋಹವ ಮೀರಿ ನಿಂದಿರುವೆ ಹರಿಯೇ. ನಿನ್ನಿರವು ನನ್ನಿರವಿನೊಳಗೆಂದು ನೆಚ್ಚುವೆನು, ಇನ್ನೊಮ್ಮೆ ಶಂಕಿಸುವೆ ಕೆದಕಿ ಬೆದಕಿ. ನನ್ನಿ ರವ ಜಗದಿರವನೆಲ್ಲವನು ಮೀರಿರುವ ನಿನ್ನಿರವ ಮರ್‍ಮವನು ಎಂತರಿವೆ ಹರಿಯೇ? ನಿನ್ನ...

ಹಣತೆ

ಮುದವಾರಲು, ಅಳಲೇರಲು, ಭಯ ಮಸಗಲು- ತುಡಿದು, ಮನ ದೇವಗೆ ಮೊರೆಯಿಡುವುದು ನರನೊಲುಮೆಯ ಜರೆದು. ಹರುಷವಿದ್ದರೆ ದೇವನೇತಕೆ? ಹರಕೆಯಾತ್ರೆಗಳೇಕೆ? ಮನುಜಗಾಸೆಗಳಿಂಗಿಹೋದರೆ ಹರಿಯ ಹಂಗವಗೇಕೆ? ಸ್ವಾರ್‍ಥತ್ಯಾಗದ ನಲವನರಿಯಲು ಮೋಕ್ಷದೊಳು ನೆಚ್ಚೇಕೆ? ಮರ್‍ತ್ಯನೊಲುಮೆಗೆ ಕಂಗಳಿದ್ದರೆ ದೇವನೊಲುಮೆಯದೇಕೆ? ಆಸೆ ಸಲ್ಲಿಸಲು...

ರಾಮಿಯ ಗಂಡು

ಸರಸಿಯ ದಡದೊಳು ಹೊಂಗೆಯ ನೆಳಲೊಳು ಗರುಕೆ ಮೆತ್ತೆಯ ಮೇಲೆ ಉರುಳಿ, ಹರುಷದ ಮುದ್ದೆಯೆ ತಾನೆಂಬ ತೆರದೊಳ- ಗಿರುವನು ರಾಮಿಯ ಗಂಡು. ಹೊಲ್ಲಳು ರಾಮಿ; ಇಂದವಳಿಗೆ ಮನೆಯಿಲ್ಲ- ಇಲ್ಲ ಬಾಂಧವ್ಯದ ಅಂಟು. ಎಲ್ಲವು ಆ ಕಂದನೊಬ್ಬನೆ...

ಮಗುವಿನ ನಗು

ವರ್‍ಷದ ನಿಶಿಯೊಳು ಮುಗಿಲಿನ ಮರೆಯೊಳು ಇಣಿಕುವ ಚಂದ್ರನ ಜೊನ್ನದೊಲು, ಹರ್‍ಷವು ಮೂಡಿತು ಚಿಂತೆಯ ಸದನದಿ ಹೊಳೆಯಲು ಆಂಡಾಳಿನ ನಗೆಯು. ಜಾಜಿಯ ಮುಗುಳನು ಮುತ್ತಿಡೆ ನುಸುಳಿದ ಕಿರಣದ ಚೆಲುವಿನ ಹೊಸ ನಗೆಯು, ವ್ಯಾಜವೆ ಇಲ್ಲದೆ ಸೋಜಿಗಪಡುವಾ...

ಹೋದ ಬಾಲ್ಯ

ಕಿರಿಯತನವು ಕಳೆದುದನ್ನು ಮರೆತು ನಡೆವುದೆಷ್ಟು ಹುಚ್ಚು! ಹರೆಯದೊಡನೆ ನಿಲುವುದೆಂತು ಕಿರಿಯತನದ ಮುಗ್ಧತೆ? * * * ಹಗಲು ಹಣ್ಣು ತಿರುಗುತಿತ್ತು, ಹೊಗೆಯ ಬಂಡಿಯೋಡುತಿತ್ತು, ಮನದಿ, ಹಿಂದೆ ಬಿಟ್ಟುದರದು ನೆನಪು ಬೇಯುತಿದ್ದಿತು. ಕಳೆದ ಸುಖವ, ತಬ್ಬುವಳಲ,...

ತ್ಯಾಗವೆ ಒಲುಮೆ

ಮೇಜಿನ ಮೇಲೊಂದು ರೋಜದ ಹೂವು, ಹಿಂದೆಂದು ಕಾಣದ ಸೊಗಸಿನ ಹೂವು, ಅಂದೆ ಅರಳಿದ ಹೂವು, ಸಂಜೆಗೆಂಪಿನ ಹೂವು, ಕಂಗಳು ತಂಗುವ ಸೊಗಸಿನ ರೇವು. ಬಾಲಸೂರ್‍ಯನ ಕಿರಣ ರಂಧ್ರದಿ ತೂರಿ, ಮಲರನ್ನು ಮುತ್ತಿಡಲು ಹೊಸ ಚೆಲುವ...

ಉಷಃಕಾಲದಲ್ಲಿ

ಉಷೆಯ ಕಾಲ ಸೋಂಕಿನಿಂದ ಬಾನು ತಳಿತಿದೆ; ನಿಶೆಯ ಮಡಿಲನುಳಿದು ಜಗವು ಜೀವಗೊಳುತಿದೆ; ಕತ್ತಲಂಜುತೋಡುತಿಹುದು, ಬೆಳಕು ತಿರೆಯ ತುಂಬುತಿಹುದು; ನಾಡು ಮೇಡು ಕಾಡೊಳೆಲ್ಲು ಸೊಗವು ಮೂಡಿ ಬರುತಿದೆ. ತರುಗಳಿನಗೆ ಮಂಜುಹನಿಗ- ಳರ್‍ಘ್ಯ ಹಿಡಿದಿವೆ; ಅಲರ ಸುರಿದು...
cheap jordans|wholesale air max|wholesale jordans|wholesale jewelry|wholesale jerseys