
ಅಲ್ಲಿ ಮರದಡಿಯಲ್ಲಿ ನಲ್ಗಬ್ಬಮೊಂದಿರಲು, ರೊಟ್ಟಿಯೊಂದಿನಿಸೊಂದು ಕುಡಿಕೆಯಲಿ ಮಧುವು, ಮೇಣ್ ಮುಗುದೆ, ನೀನೆನ್ನ ಬಳಿ ಕುಳಿತು ಪಾಡಲಹ! ಕಾಡಾದೊಡೇನದುವೆ ಸಗ್ಗ ಸುಖವೆನಗೆ. *****...
೧ ಕೂಸಿಗಂದು ಏನು ಬೇಡ, ತಿಂಡಿ ಗೊಂಬೆ ಮುದ್ದು ಬೇಡ. ಏನೊ ಅರಕೆ, ಏನೊ ಬೇನೆ, ಅತ್ತು ಸೊರಗಿತು : “ಅಮ್ಮ ಎಲ್ಲಿ ಹೋತು” ಎನುತ ಅತ್ತು ಸೊರಗಿತು. ಅಳುವ ಕೇಳಿ ಬಂದ ತಾಯ ಅಮೃತಸ್ಪರ್‍ಶಕಾರೆ ಗಾಯ, ತೊಯ್ದ ಕಣ್ಣ ಬಿಚ್ಚಿ, ಸುಳಿಸಿ, ತೊಂದ...













