Home / Chandrashekara AP

Browsing Tag: Chandrashekara AP

ಕೆರೆದರದುವೇ ಕೃಷಿಯೆಂದರಿಯದವರರುಹುತ್ತಿರೆ ಗರಿಕೆಯನು ಕೆರೆದುನ್ನತದ ಮನೆಯ ಕನ ವರಿಸುತಲಿ ಇಳೆಯ ಕಳೆಯನ್ನು ಕಳೆಯುತಿರೆ ಕೆರೆದು ಕೆಟ್ಟಿಹನೆಮ್ಮ ರೈತನು, ಆದೊಡಾತನು ಕೆರೆವ ಯಂತ್ರಗಳನಿತ್ತವನು ಮನೆಯ ಕಟ್ಟಿಹನು – ವಿಜ್ಞಾನೇಶ್ವರಾ *****...

ನೂರೊಂದಾರೋಗ್ಯ ದೋಷವನೆಣಿಸಿ ಉಣುವಾ ಹಾರದೊಳು ಸಾವಯವವೆಂದಾಗ್ರಹಿಸಿದೊಡೇನು? ವರುಷವೈವತ್ತರ ಮೊದಲು ಯಂತ್ರ ತಂತ್ರದ ಬ್ಬರದ ಬದಲಿದ್ದ ಬದುಕೆಲ್ಲ ಸಾವಯವವೆಂ ದರಿತು ಮರಳಿದರಾ ನೆಲಮನದೊಳಿಕ್ಕು ಸಾವಯವ – ವಿಜ್ಞಾನೇಶ್ವರಾ *****...

ಅಮೃತವು ದಕ್ಕೀತು ಕಡೆಗೋಲು ಮಥಿಸಿದೊಡೆ ಹಮ್ಮನತ್ತಿಕ್ಕಿ ವಿಚಾರದುರುಳನೆಳೆದೊಡೆ ಸುಮ್ಮನುಂಡುದನು ಸಾವಯವವೆಂದೊಡದು ಬುರುಡೆ ಎಮ್ಮ ತನುಮನದೊಳನುದಿನ ಉದಿಪ ವಿಷ ವಮೃತಮಪ್ಪೊಡೆ ಅನಿವಾರ್‍ಯ ಬೆವರ ಬಿಡುಗಡೆ – ವಿಜ್ಞಾನೇಶ್ವರಾ *****...

ಶಕ್ತಿ ಯಂತ್ರಗಳೇನೆ ಬಂದರು ತಿನಲಪ್ಪುದ ದಕೊಂದೆ. ಪೆಟ್ರೋಲು ತಪ್ಪಿದರೆ ವಿದ್ಯುತ್ತು ಶಕ್ತ ಜೀವಿಗಳೀ ಜಗದೊಳೆಷ್ಟೊಂದು? ತಿನಲಪ್ಪುದ ದಕೆ ಮಣ್ಣಿಂದ ಹಣ್ಣಿನಾ ತನಕ ಸಾವಿರದೊಂದು ಲೋಕವೀ ಸತ್ಯವನರಿತೊಡದು ಸುಜ್ಞಾನ ಸಾವಯವ – ವಿಜ್ಞಾನೇಶ್ವರಾ *...

ಲಾಬಿ ಮಾಳ್ವಂದದಾ ಗುಲಾಬಿಯೊಳಿಪ್ಪ ಗಂಭೀರ ಮುಳ್ಳಿನಾ ತೆರದಿ ಗಾಬರಿಯ ಕಷ್ಟಗಳು ಸಾವಯವ ವೆಂಬೊಂದು ಕೃಷಿಯೊಳಗೆ ಲೋಭದೊಳಾಯ್ಕೆ ಫಲಿಸದು – ವಿಜ್ಞಾನೇಶ್ವರಾ *****...

ಆರೋಗ್ಯ ಪಿರಿದದಕೆ ವರ ಸಾವಯವ ತರಕಾರಿ ಬೇಕೆನ್ನುವರು, ಆದೊಡಂ ಅ ವರವಯವವ ನೋಯಿಸರು, ಒಲಿದು ನೀರಿಗಾದರು ಉಗುರನದ್ದರು, ಒಬ್ಬರಿನ್ನೊ ಬ್ಬರಿಗೆ ದುಡಿದೊಡದೆಂತು ಸಾವಯವ – ವಿಜ್ಞಾನೇಶ್ವರಾ *****...

ವೈಜ್ಞಾನಿಕವೆಂದೇನೇನೋ ಮಾಳ್ಪರಲಾ ಭಜಿಸುತಲಧಿಕ ಇಳುವರಿಯ ಕೃಷಿಯೊಳಗೆ ನಿಜದೊಳೇನು ಮಾಡದ ಸಾವಯವದೊಳಿಕ್ಕು ವಿಜ್ಞಾನವಿದೆಮ್ಮ ಸೇಂದ್ರೀಯ ಬಲದೊಳುದಿತ ಋಜು ಭರಿತ ಪ್ರಕೃತಿ ಜ್ಞಾನ ಸಂಸ್ಕರಿತವಲಾ – ವಿಜ್ಞಾನೇಶ್ವರಾ *****...

ಹಿಂದಿರಲಿಲ್ಲ ಸಾವಯವವೆಂಬೊಂದು ಪಂಥ ಅಂದೆಲ್ಲವುಂ ಸ್ವಂತ ದುಡಿಮೆಯ ಹಂತ ಎಂತಕೀ ಕಠಿಣ ಬದುಕೆನುತಿಂದು ಪ್ರಗತಿ ಪಥ ಸಂಭ್ರಾಂತ ವೇಗದೊಳೆಲ್ಲ ಮರೆಯಾದೊಡಂ ಕಂಡೆನೆನುವರಲಾ ಕೊಂಡಕೂಳನೆ ಸಾವಯವವೆಂದೆನುತ – ವಿಜ್ಞಾನೇಶ್ವರಾ *****...

ಇದು ಸಾವಯವವೆಂದೊಂದು ವಾಕ್ಯದೊಳು ಪೇ ಳ್ವುದಳವಿಲ್ಲವಿದು ಅವರವರು ಅಲ್ಲಲ್ಲೇ ಮಾಳ್ಪು ದಿದು ದಿನ ದಿನವು ಹೊಸತೊಂದು ಹಸುರುದಿಸಿ ಹದವರಿತು ಹೂ ಹಣ್ಣು ಹಡೆವಂತೆ ಬದಲಪ್ಪುದಿದು ಬದಲಾದ ಉಸುರಿಗಪ್ಪಂತೆ – ವಿಜ್ಞಾನೇಶ್ವರಾ *****...

ಸಾವಯವವೆಂದೊಡದು ಪರ್‍ಯಾಯನಾಮ ಸಹನೆಯೊಡಗೂಡಿ ತತ್ತ್ವ ಸಾಧನೆಗೆ ಸಹನೆಯದು ಗೆಲು ಮನದ ಮರ್ಮ ಸಾಧನೆಯು ತನುವಿನಾಶ್ರಿತ ಧರ್ಮ ಸಾರ್ಥಕವು ತನುಮನಗಳೊಂದಾದ ಕರ್ಮ – ವಿಜ್ಞಾನೇಶ್ವರಾ *****...

1...1718192021...27

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...