ಲಿಂಗಮ್ಮನ ವಚನಗಳು – ೯೫

ಅದೇನು ಕಾರಣವೆಂದರೆ ಘನಕ್ಕೆ ಘನವಾದರು. ಮನಕ್ಕೆ ಮನವಾದರು. ತನುವಿಂಗೆ ತನುವಾದರು. ನಡೆನುಡಿಗೆ ಚೈತನ್ಯವಾದರು. ನೋಡುವುದಕ್ಕೆ ನೋಟವಾದರು. ಕೂಡುವದಕ್ಕೆ ಲಿಂಗವಾದರು. ಈ ಒಳಹೊರಗೆ ಬೆಳಗುವ ಬೆಳಗು ನೀವೆಯಾದ ಕಾರಣ ನಿಮ್ಮ ಪಾದದಲ್ಲಿ ನಾ ನಿಜಮುಕ್ತಳಾದೆನಯ್ಯ ಚನ್ನಮಲ್ಲೇಶ್ವರ...

ಲಿಂಗಮ್ಮನ ವಚನಗಳು – ೯೪

ಹೊತ್ತು ಹೊತ್ತಿಗೆ ಕಿಚ್ಚನೆ ಬರಿಸಿದರೆ, ಕಲೆ ಉರಿದುದೆಂದು, ಹೊತ್ತು ಹೊತ್ತಿಗೆ ಪ್ರಾಣಕ್ಕೆ ಪ್ರಸಾದವ ಸ್ಥಾಪ್ಯವ ಮಾಡಿ, ತನುವ ಖಂಡಿಸದೆ, ಕಾಯವ ಮರಗಿಸದೆ, ಭಾವವನೆ ಬಯಲು ಮಾಡಿ, ಭವಕೆ ಸವೆದು, ಕಾಣದಪ್ತತವನೆ ಕಂಡು, ಮಹಾಬೆಳಗಿನಲಿ ಬಯಲಾದರು...

ಲಿಂಗಮ್ಮನ ವಚನಗಳು – ೯೩

ಮನವೆಂದರೆ ಮರವೆಗೆ ಒಳಗು ಮಾಡಿತ್ತು. ತನುವೆಂದರೆ ತಾಮಸಕ್ಕೊಳಗು ಮಾಡಿತ್ತು. ಧನವೆಂದರೆ ಆಸೆ ಎಂಬ ಪಾಶಕ್ಕೊಳಗು ಮಾಡಿತ್ತು. ಇವು ಮಾಯಾ ಪಾಶವೆಂದು ಬಿಟ್ಟು ಹುಟ್ಟನರಿದು, ಬಟ್ಟಬಯಲಲ್ಲಿ ನಿಂದು, ಚಿತ್ತ ನಿರ್ಮಳವಾಗಿ ನೋಡಿ ಕಂಡ ಶರಣಗೆ ತನುವೆ...

ಲಿಂಗಮ್ಮನ ವಚನಗಳು – ೯೨

ಮಹಾಬೆಳಗನೆ ನೋಡಿ, ಮನವ ನಿಮ್ಮ ವಶವ ಮಾಡಿ, ತನುವ ಮರೆದು, ಧನವ ಜಂಗಮಕ್ಕಿತ್ತು, ತಾನು ಬಯಲ ದೇಹಿಯಾದಲ್ಲದೆ ನಿಜಮುಕ್ತಿ ಇಲ್ಲವೆಂದುರ ನಮ್ಮ ಅಪ್ಪಣಪ್ರಿಯ ಚನ್ನಬಸವಣ್ಣಾ. *****

ಲಿಂಗಮ್ಮನ ವಚನಗಳು – ೯೧

ಅಯ್ಯ, ಕಿಚ್ಚಿನೊಳಗೆಬೆಂದ ಕಾಯಕ್ಕೆ ಅಚ್ಚುಗ ಉಂಟೆ? ತಾನುತಾನಾದ ಬಳಿಕ ಮೂವ ಹಂಗುಂಟೆ? ಮನವು ಮಹದಲ್ಲಿ ನಿಂದ ಬಳಿಕ ಮರವೆಯುಂಟೇ? ತನುವ ಮರೆದಂಗೆ, ಇನ್ನಿದಿರೆಂಬುದುಂಟೆ? ಬೆಳಗ ಕಂಡವಂಗೆ ಕತ್ತಲೆಯ ಹಂಗುಂಟೆ? ಇವೆಲ್ಲವನು ಹಿಂಗಿಸಿ, ಈ ಮಹದಲ್ಲಿ...

ಲಿಂಗಮ್ಮನ ವಚನಗಳು – ೯೦

ಅಯ್ಯ, ನಾ ಮರ್ತ್ಯದಲ್ಲಿ ಹುಟ್ಟಿ, ಕಷ್ಟ ಸಂಸಾರಿ ಎನಿಸಿಕೊಂಡೆ. ಕತ್ತಲೆಯಲ್ಲಿ ಮುಳುಗಿದೆ. ಕರ್ಮಕ್ಕೆ ಗಿರಿಯಾಗುತಿದ್ದರೆ, ಹೆತ್ತ ತಾಯಿ ಎಂಬ ಗುರುಸ್ವಾಮಿ ಎನ್ನ ಕೊರಳಿಗೆ ಗಂಡನೆಂಬ ಲಿಂಗಕಟ್ಟಿದನು. ತಂದೆ ಎಂಬ ಜಂಗಮಲಿಂಗವು ಎನ್ನ ಪ್ರಾಣಕ್ಕೆ ಪ್ರಸಾದವ...

ಲಿಂಗಮ್ಮನ ವಚನಗಳು – ೮೯

ಮನವ ಗೆದ್ದೆವೆಂದು ತನುವ ಕರಗಿಸಿ, ಕಾಯವ ಮರಗಿಸಿ ನಿದ್ರೆಯ ಕೆಡಿಸಿ, ವಿದ್ಯೆಯ ಕಲಿತೆನೆಂಬ ಬುದ್ಧಿಹೀನರಿರಾ, ನೀವು ಕೇಳಿರೋ, ನಮ್ಮ ಶರಣರು ಮನವನೆಂತು ಗೆದ್ದರೆಂದರೆ, ಕಾಮ, ಕ್ರೋಧವ ನೀಗಿ, ಮೋಹ ಮದ ಮತ್ಸರವ ನಿಶ್ಚೈಸಿ, ಆಕೆ...

ಲಿಂಗಮ್ಮನ ವಚನಗಳು – ೮೮

ಕಂಗಳ ಮುಂದೆ ಮಾಣಿಕವಿದ್ದು, ಕಾಣಲರಿಯರಯ್ಯ. ಬಾಗಿಲ ಮುಂದೆ ಹಾಲಸಾಗರವಿದ್ದು, ಒರತೆಯ ನೀರಿಗೆ ಹಾರುವರಂತೆ, ಕಂಗಳ ಮುಂದೆ ಮಹಾಶರಣಿನಿದ್ದು, ಕತ್ತಲೆ ಎನಲೇಕೆ? ಇನ್ನು ಬೇರೆ ಲಿಂಗವನರಸಿಹೆನೆನಲೇಕೋ ಆ ಮಹಾಶರಣ ನಮ್ಮ ಅಪ್ಪಣಪ್ರಿಯ ಚನ್ನಬಸವಣ್ಣಾ. *****

ಲಿಂಗಮ್ಮನ ವಚನಗಳು – ೮೭

ಆಗದಾಗದು ಮರ್ತ್ಯದ ಮನುಜರಿಗೆ ಶಿವಸುಖ. ಅದೆಂತೆಂದರೆ ಕಾಳು ವಿಷಯದಲ್ಲಿ ಬಿದ್ದು ನುಡಿವುತ್ತ, ಮರವೆ ನಡೆವುತ್ತ, ಮರವೆ ಮುಟ್ಟುತ್ತ, ಮರವೆ ಕೇಳುತ್ತ, ಮರವೆ ನೋಡುತ್ತ, ಮರವೆ ಇಂತು ಮರಹಿನೊಳಗಿರ್ದು, ಅರುಹ ಕಂಡಿಹೆನೆಂಬ ಅಣ್ಣಗಳಿರಾ, ನೀವು ಕೇಳಿರೋ....

ಲಿಂಗಮ್ಮನ ವಚನಗಳು – ೮೬

ತುಂಬಿದ ಕೆರೆಗೆ ಅಂಬಿಗ ಹಂಗೋಲಹಾಕಿ, ಬಲಿಯ ಬೀಸಿದಂತೆ ತುಂಬುತ್ತ ಕೆಡೆವುತ್ತಲಿದ್ದ ಲಿಂಗವ ನೋಡಿ ಕೊಡೆವೆಂದು ಜಂಗಮದ ನೆಲೆಯ ಕಾಣದೆ ಸಂದು ಹೋದರಲ್ಲ ಈ ಲೋಕವೆಲ್ಲವು ಲಿಂಗದ ನೆನೆಯ ಕಾಂಬುದಕ್ಕೆ ಹರಿಗೋಲನೆ ಹರಿದು, ಹುಟ್ಟ ಮುರಿದು,...