ಉದಯಿಸು ರವಿತೇಜನೇ ನೀನು
ಅಮೋಘ ಸಾಧನೆ ಮಾಡಿರುವ ಆನಂದ ಹೆಬ್ಬಾಳು ಎಂದು ಗುರುತಿಸಿಕೊಂಡಿರುವ ಇವರ ಹೆಸರು ಆನಂದಾಚಾರ್.ಟಿ. ಇವರ ಕಾವ್ಯನಾಮ "ಜಾನಕಿತನಯಾನಂದ". ತಮ್ಮ ಬಿಡುವಿನ ವೇಳೆಯಲ್ಲಿ ಕನ್ನಡ ಸಾಹಿತ್ಯದಲ್ಲಿ ತೊಡಗಿಸಿಕೊಂಡು ಅನೇಕ ಕವನಗಳನ್ನು ರಚಿಸಿ, ಸುಗಮಸಂಗೀತ ಕ್ಷೇತ್ರದ ದಿಗ್ಗಜರಾಗಿದ್ದ ಶ್ರೀಯುತ ಮೈಸೂರು ಅನಂತಸ್ವಾಮಿಯವರ ಸಲಹೆಯಂತೆ ಹೆಚ್ಚಿನ ವಿದ್ಯಾಭ್ಯಾಸಮಾಡಿ, ಜೀವನ ತರಂಗಗಳು, ಮಂಥನ, ಚಕ್ಷು ಹಾಗು ಅಕ್ಷಯ ಎಂಬ ಕವನ ಸಂಕಲನ ರಚಿಸಿದ್ದಾರೆ.
- ಏಕಿಷ್ಟು ದೂರ ಮಾಡಿದೆ ಎನ್ನ? - March 1, 2021
- ಅಂದುಕೊಳ್ಳುವುದೊಂದು - February 22, 2021
- ಬಾರೋ ವಸಂತ ಬಾರೋ - February 15, 2021
ಉದಯಿಸು ರವಿತೇಜನೇ ನೀನು ಹೊಂಗಿರಣವ ಹೊರ ಸೂಸುತ| ನಿನ್ನ ಸ್ವಾಗತಿಸೆ ಕಾದಿಹಳು ಇಬ್ಬನಿ ತಬ್ಬಿಕೊಂಡು ಬಾಹುಬಂಧನದಿ ಕರಗಿ ನೀರಾಗಲು ಹುಲ್ಲ ಹಾಸಿಗೆಮೇಲೆ ಮಲಗಿ|| ಉದಯಿಸು ರವಿತೇಜನೇ ನೀನು ಹಕ್ಕಿಗಳ ಇಂಚರವನಾಲಿಸುತ| ಉದಯಿಸು ರವಿತೇಜನೇ ನೀನು ಝುಳು ಝುಳು ಹರಿವ ನದಿಯ ನಿನಾದವನು ಕೇಳುತ|| ಉದಯಿಸು ರವಿತೇಜನೇ ನೀನು ಕರ್ಮವೀರ ನೇಗಿಲಯೋಗಿಯ ಪ್ರಣಾಮವನು ಸ್ವೀಕರಿಸುತ| ಉದಯಿಸು ರವಿತೇಜನೇ […]