ಮಧುಮಾಸದೊಂದು ಹಗಲಿಗೆ ನಿನ್ನ ಹೋಲಿಸಲೆ ?

ಮಧುಮಾಸದೊಂದು ಹಗಲಿಗೆ ನಿನ್ನ ಹೋಲಿಸಲೆ ? ನಿನ್ನ ಸೌಮ್ಯತೆ ಚೆಲುವು ಅದಕಿಂತಲೂ ಹಿರಿದು. ನಡುಗುವುವು ಸವಿಮೊಗ್ಗುಗಳು ಒಡ್ಡುಗಾಳಿಗೆ, ಬೇಸಿಗೆಯ ಗೇಣಿ ಬಲು ಬೇಗನೇ ಮುಗಿಯುವುದು; ಆಗಸದ ಕಣ್ಣು ಕೆಲವೊಮ್ಮೆ ಧಗೆ ಕಾರುವುದು, ಎಷ್ಟೊ ಸಲ...

ನನ್ನ ಕವಿತೆಗಳಲ್ಲಿ ನಿನ್ನ ಗುಣಗಳ ತಂದು

ನನ್ನ ಕವಿತೆಗಳಲ್ಲಿ ನಿನ್ನ ಗುಣಗಳ ತಂದು ನಿಜ ಬಣ್ಣಿಸಿದ್ದರೂ, ಅದು ನಿನ್ನ ಘನತೆಯನು ಅರ್ಧ ಮಾತ್ರವೆ ತೋರುವಂಥ ಸ್ಮಾರಕ ಎಂದು ಸ್ವರ್ಗಕೇ ಗೊತ್ತಿದ್ದೂ ನಂಬುವರು ಯಾರದನು ? ಆ ಕಣ್ಣ ಸೊಬಗ ಹಾಗೇ ಚಿತ್ರಿಸಿದರೂ,...

ಈ ನಿರಂಕುಶ ಕ್ರೂರ ಕಾಲನನು ಇದಕಿಂತ

ಈ ನಿರಂಕುಶ ಕ್ರೂರ ಕಾಲನನು ಇದಕಿಂತ ಧೀರನೆಲೆಯಲಿ ನೀನು ಕಾದದಿರುವುದು ಏಕೆ ? ನನ್ನ ಈ ಬರಡು ಪದ್ಯಕ್ಕೂ ಮಿಗಿಲಾದಂಥ ಸಾಧನದ ರಕ್ಷಣೆಯ ಪಡೆಯದಿರುವುದು ಏಕೆ ? ಜೀವನದ ಸುಖಕ್ಷಣದ ಶಿಖರದಲಿ ನಿಂತಿರುವೆ, ಮದುವೆಯಾಗದ...

ನಕ್ಷತ್ರ ನೋಡಿ ಅಳೆವವನಲ್ಲ ನಾಳೆಗಳ

ನಕ್ಷತ್ರ ನೋಡಿ ಅಳೆವವನಲ್ಲ ನಾಳೆಗಳ, ಆದರೂ ಇದೆ ನನಗೆ ಜ್ಯೋತಿಷ್ಯ ನುಡಿವ ಬಲ. ಬರಲಿರುವ ಹಿತ, ಅಹಿತ, ಪಿಡುಗು, ಋತು ಧಾಟಿಗಳ ಕಾಲಕಾಲಕ್ಕೆ ಅದು ಹೇಳಬಲ್ಲದ್ದಲ್ಲ ; ವ್ಯಕ್ತಿಯೊಬ್ಬನ ಬಾಳಿನೊಳಗೆ ಹಾಯುವ ಗಾಳಿ ಸಿಡಿಲು...

ನೀನು ನೀನೇ ಅಲ್ಲ, ಒಳಿತಿತ್ತು ಹಾಗಿರಲು

ನೀನು ನೀನೇ ಅಲ್ಲ, ಒಳಿತಿತ್ತು ಹಾಗಿರಲು. ಒಲವೆ ನೀನೆಂದಿಗೂ ಹೀಗೇ ಇರುವುದಿಲ್ಲ. ಸಿದ್ಧತೆಯ ಮಾಡು ಬರಲಿರುವ ಕೊನೆ ಎದುರಿಸಲು ನಿನ್ನ ಸವಿಬಿಂಬವನು ಯಾರಿಗಾದರು ನೀಡು. ನಿನ್ನ ಗೇಣಿಯೊಳಿರುವ ಚೆಲುವು ನೀ ನಡೆದಾಗ ಕೊನೆಗೊಳ್ಳುವುದು ಸಲ್ಲ....

ಗಂಟೆ ಸರಿಯುವುದು, ಬೆಳಗಿದ ಹಗಲು ಇಳಿಯುವುದು

ಗಂಟೆ ಸರಿಯುವುದು, ಬೆಳಗಿದ ಹಗಲು ಇಳಿಯುವುದು ಕರಿಗಪ್ಪು ಇರುಳಲ್ಲಿ, ಮುಪ್ಪು ನೇರಿಳೆ ಹೊಗೆ, ಕಪ್ಪು ಗುಂಗುರುಳು ನೆರೆ ಬಣ್ಣಕ್ಕೆ ಹೊರಳುವುದು; ಉರಿಬಿಸಿಲ ಹೀರಿ ಹಿಂದೆಲ್ಲ ಕುರಿಮಂದೆಗೆ ತಂಪೆರೆದ ಭಾರಿ ಮರಗಳ ಹಸಿರು ಛಾವಣಿ ಎಲೆಗಳಚಿ...

ವಿಧವೆಯೊಬ್ಬಳ ಕಣ್ಣು ಒದ್ದೆಯಾದೀತೆಂದು

ವಿಧವೆಯೊಬ್ಬಳ ಕಣ್ಣು ಒದ್ದೆಯಾದೀತೆಂದು ಭಯವೆ, ಒಬ್ಬಂಟಿ ಬದುಕನ್ನೇಕೆ ತೇಯುವೆ ? ಸಂತಾನ ಭಾಗ್ಯವಿಲ್ಲದೆ ನೀನು ಸತ್ತಂದು ಜೊತೆ ಕಡಿದ ಹೆಣ್ಣಂತೆ ಈ ಲೋಕ ನರಳದೆ ? ಉಳಿದ ವಿಧವೆಯರೆಲ್ಲ ತಮ್ಮ ಮಕ್ಕಳ ಕಣ್ಣ ನೋಟದಲ್ಲೇ...

ಅದೊ ಪೂರ್ವದಿಕ್ಕಿನಲಿ ಘನ ಉದಾತ್ತಜ್ಯೋತಿ

ಅದೊ ಪೂರ್ವದಿಕ್ಕಿನಲಿ ಘನ ಉದಾತ್ತಜ್ಯೋತಿ ತನ್ನ ಬೆಳಕಿನ ಶಿರವನೆತ್ತುತಿದೆ, ಕೆಳಗಿಲ್ಲಿ ; ಇಳೆಯ ದೃಷ್ಟಿಗಳು ಆ ರಾಜಗಾಂಭೀರ್ಯದತಿ ಹೊಸ ಬಗೆಯ ದರ್ಶನಕೆ ನಮಿಸುತಿವೆ ಬೆರಗಲ್ಲಿ. ಕಡಿದಾದ ಮೇರುಗಿರಿ ನೆತ್ತಿಯನ್ನೇರಿ ರವಿ ನಡುವಯಸ್ಸಿನ ಕ್ಷಾತ್ರದಲ್ಲಿ ಝಗಝಗಿಸಿರುವ,...

ಎಲೆ ಚೆಲುವ ದುಂದುಗಾರನೆ

ಎಲೆ ಚೆಲುವ ದುಂದುಗಾರನೆ ಏಕೆ ವ್ಯಯಿಸುವೆ ಪಡೆದ ಸ್ವತ್ತನ್ನೆಲ್ಲ ಬರಿದೆ ನಿನಗಾಗೇ? ನಿಸ್ಪೃಹಳು, ಪ್ರಕೃತಿ ನೀಡುವುದೆಲ್ಲ ಸಾಲವೇ, ಅದನು ಸಹ ನೀಡುವಳು ಕೇವಲ ಉದಾರಿಗೆ. ಎಲೆ ಜಿಪುಣ ಚೆನ್ನಿಗನೆ ದಾನಮಾಡಲು ಇತ್ತ ಭಾರಿ ಕೊಡುಗೆಯ...

ನೋಡಿಕೋ ಮುಖವ ಕನ್ನಡಿಯಲ್ಲಿ

ನೋಡಿಕೋ ಮುಖವ ಕನ್ನಡಿಯಲ್ಲಿ, ಇಂಥದನೆ ಇನ್ನೊಂದ ಕೊಡು ಎಂದು ಕೇಳಿಕೋ. ನೀ ನಿನ್ನ ಮತ್ತೆ ಸೃಷ್ಟಿಸಿಕೊಳದೆ ಬಿಟ್ಟಲ್ಲಿ ಲೋಕವನೆ ವಂಚಿಸುವೆ, ಜೊತೆಗೆ ಹೆಣ್ಣೊಂದಕ್ಕೆ ತಾಯ್ತನವ. ನಿನ್ನ ಪೌರುಷದ ಬಿತ್ತನೆಗೆ ಒಪ್ಪದ ಕನ್ನೆ ಇರುವಳೇ ?...