ಗಳಿಗೆಬಟ್ಟಲ ತಿರುವುಗಳಲ್ಲಿ – ೬೭

ಹಸಿವಿನ ಕಂದನ ರೊಟ್ಟಿಯೆಂಬೋ ಮಹಾತಾಯಿ ಒಡಲೊಳಗಿರಿಸಿ ಎದೆಗಪ್ಪಿ ಸಂತೈಸಿದರೆ ಹಸಿವೆಗೆ ಉಸಿರುಕಟ್ಟುತ್ತದೆ. ಗಾಳಿಯಲಿ ತೂರಿ ಬಯಲಿಗೆ ಬಿಟ್ಟರೆ ಕಂಗೆಟ್ಟು ದಿಕ್ಕು ತಪ್ಪುತ್ತದೆ. ರೊಟ್ಟಿಗೆ ದಿಗ್ಭ್ರಮೆ. *****

ಗಳಿಗೆಬಟ್ಟಲ ತಿರುವುಗಳಲ್ಲಿ – ೬೬

ಹಸಿವನರಿಯದ ರೊಟ್ಟಿ ರೊಟ್ಟಿಯರಿಯದ ಹಸಿವು ಎರಡರದೂ ತಪ್ಪಲ್ಲ. ಪರಸ್ಪರ ಪರಿಭಾವಿಸುವ ಮೂಲ ಕ್ರಮವೇ ತಪ್ಪು. ಅರಿವೂ ಹದಗೊಳ್ಳದಿದ್ದರೆ ತಪ್ಪಿನಿಂದ ತಪ್ಪಿನ ಸರಮಾಲೆ. *****

ಗಳಿಗೆಬಟ್ಟಲ ತಿರುವುಗಳಲ್ಲಿ – ೬೪

ಹಸಿವು ರೊಟ್ಟಿಗಾಗಿ ರೊಟ್ಟಿ ಹಸಿವಿಗಾಗಿ ಕಾಯುವುದು ಎಂದೂ ಒಂದೇ ಅಲ್ಲ. ಕಾಯುವಿಕೆಯ ಅಂತರ ಅರಿವಾಗಿ ಕಂದಕ ತುಂಬಿದರೆ ಸಂಗತ ತುಂಬದಿದ್ದರೆ ಅದರದರ ಪರಿಧಿಯಲೇ ಅಸ್ತಂಗತ. *****

ಗಳಿಗೆಬಟ್ಟಲ ತಿರುವುಗಳಲ್ಲಿ – ೬೩

ಆಕ್ರಮಣಕಾರಿ ಹಸಿವು ಚೈತನ್ಯದಾಯಿ ರೊಟ್ಟಿ ಸಂತೃಪ್ತಿ ಹಸಿವಿನ ಗುರಿ ಕೊಟ್ಟು ನಿರ್ನಾಮವಾಗುವುದೇ ರೊಟ್ಟಿ ಹುಟ್ಟಿನ ಉದ್ದೇಶ. ಪ್ರತ್ಯೇಕ ಕಾರಣ ವಿಭಿನ್ನ ನಿಮಿತ್ತ ವಿನಾಕಾರಣ ಸಮವೆಂಬ ತರ್‍ಕ. *****

ಗಳಿಗೆಬಟ್ಟಲ ತಿರುವುಗಳಲ್ಲಿ – ೬೨

ಹಸಿವಿನೊಳಗೆ ರೊಟ್ಟಿ ರೊಟ್ಟಿಯೊಳಗೆ ಹಸಿವು ತನ್ಮಯತೆಯಲಿ ಬೆರೆತು ಅಹಂಗಳು ನಾಶವಾಗಿ ಪರಸ್ಪರ ಸೋಲದೇ ಗೆಲ್ಲದೇ ಹಸಿವು ಹಸಿವೇ ಆಗಿ ರೊಟ್ಟಿ ರೊಟ್ಟಿಯೇ ಆಗಿ ಖಂಡಗಳು ಅಖಂಡವಾಗುವ ಪರಿಪೂರ್ಣತೆಯ ಕೌತುಕ ಆ ಕ್ಷಣದ ನಿಜ. *****

ಗಳಿಗೆಬಟ್ಟಲ ತಿರುವುಗಳಲ್ಲಿ – ೬೧

ರೊಟ್ಟಿ ಹಸಿವಿಗೆ ಮುಖ್ಯವಾಗುವ ಕ್ಷಣ ಕ್ಷಣಿಕ ಹಸಿವಿನ ಅಪಾರ ಸಾಧ್ಯತೆಗಳ ಮುಂದೆ ಆದ್ಯತೆಗಳೂ ಬದಲಾಗುತ್ತದೆ. ಅಂತಿಮ ಕ್ಷಣದಲ್ಲಿ ರೊಟ್ಟಿಗೆ ತನ್ನ ಪಾತ್ರ ಮತ್ತು ಸ್ಥಾನದ ಅರಿವಾಗುತ್ತದೆ. *****

ಗಳಿಗೆಬಟ್ಟಲ ತಿರುವುಗಳಲ್ಲಿ – ೫೮

ಹಸಿವು ರೊಟ್ಟಿಯನ್ನು ಕಂಡುಕೊಳ್ಳುತ್ತದೆ ಕೊಂಡುಕೊಳ್ಳುತ್ತದೆ. ಪಾತ್ರ ಕೊಟ್ಟು ತಾಲೀಮು ನೀಡುತ್ತದೆ. ನಟನೆಯಲಿ ತನ್ಮಯ ಅಮಾಯಕ ರೊಟ್ಟಿ ಪಾತ್ರವೇ ತಾನಾಗಿ ಕರಗಿಹೋಗುತ್ತದೆ. *****
cheap jordans|wholesale air max|wholesale jordans|wholesale jewelry|wholesale jerseys