ಹಸಿವಿನ ಕಂದನ
ರೊಟ್ಟಿಯೆಂಬೋ ಮಹಾತಾಯಿ
ಒಡಲೊಳಗಿರಿಸಿ
ಎದೆಗಪ್ಪಿ ಸಂತೈಸಿದರೆ
ಹಸಿವೆಗೆ ಉಸಿರುಕಟ್ಟುತ್ತದೆ.
ಗಾಳಿಯಲಿ ತೂರಿ
ಬಯಲಿಗೆ ಬಿಟ್ಟರೆ
ಕಂಗೆಟ್ಟು ದಿಕ್ಕು ತಪ್ಪುತ್ತದೆ.
ರೊಟ್ಟಿಗೆ ದಿಗ್ಭ್ರಮೆ.
*****