ಹನಿಗವನ ಚಪಲ December 17, 2022January 9, 2022 ಭವಸಾಗರ ದಾಟುವುದು ಹಾಗಿರಲಿ ನನ್ನ ಯೋಚನೆ ‘ಶಾಂತಿ ಸಾಗರ’ ದಾಟುವುದು *****
ಹನಿಗವನ ಬೀರ್ಬಲ್ December 3, 2022January 9, 2022 ಎರಡು ಬೀರ್ಗಳು ಒಳಗೆ ಹೋದ ನಂತರ ನಗೆ ಚಟಾಕಿ ಹಾರಿಸಿದ್ದರು ಬೀರ್ಬಲ? *****
ಹನಿಗವನ ವರ್ಗ November 19, 2022January 9, 2022 ಮನುಜರಲಿ ಎರಡು ವರ್ಗ ಕೆಲವರನು ಕೈತೊಳೆದು ಮುಟ್ಟಬೇಕು ಮತ್ತೆ ಕೆಲವರನು ಮುಟ್ಟಿದರೆ ಕೈ ತೊಳೆಯಬೇಕು *****
ಹನಿಗವನ ಭಡ್ತಿ November 5, 2022January 9, 2022 ಎರಡು ಪೆಗ್ಗಳ ನಂತರ ಎಲ್ಲರೂ ‘ಅಮಲ್’ ದಾರ್ರೂ ‘ಶೇಕ್’ ದಾರ್ರೂ! *****
ಹನಿಗವನ ಬಂಧುಗಳು October 22, 2022January 9, 2022 ಬಂಧುಗಳಲ್ಲಿ ಎರಡು ವಿಧ ಕೆಲವರು ಬರಿ ಕೈಯಲ್ಲಿ ಬರುವುದಿಲ್ಲ ಕೆಲವರು ಬರಿ ಕೈಯಲ್ಲಿ ಹೋಗುವುದಿಲ್ಲ *****
ಹನಿಗವನ ಮದುವೆ August 27, 2022January 9, 2022 ಹೆಣ್ಣು ಹೆತ್ತವರಿಗೆ ತಾಳಿ ಅವಸರ ಬಂಧು ಮಿತ್ರರಿಗೆ ಥಾಲಿ ಅವಸರ *****
ಹನಿಗವನ ಸೇವಾರ್ಥವೋ, ಜಾಹೀರಾತೋ? August 13, 2022January 9, 2022 ಬೆಳಗಿತ್ತು ದೇಗುಲದಲ್ಲಿ ಟ್ಯೂಬ್ ಲೈಟ್ ಸೇವಾರ್ಥದಾರರ ಹೆಸರು ವಿಳಾಸ, ವಿವರಗಳ ಹೊತ್ತು ಬೆಳಕಿಗಿಂತ ಹೆಚ್ಚಾಗಿ ಮಾಹಿತಿ ಚೆಲ್ಲಿತ್ತು. *****