ಸಮಯ ನನ್ನದೇ ಅನ್ನಿಸಿದಾಗ

ಸಮಯವೆಲ್ಲ ನನ್ದೇ ಅನ್ನಿಸಿದಾಗ, ಊಟಕ್ಕೋ ಟೀಗೋ ಯಾರೂ ಕರೆಯಲು ಬಾರದಿದ್ದಾಗ, ಮೋಡ ಸಡಿಲವಾಗುತ್ತ, ಹರಡುತ್ತ, ಬಣ್ಣ ಕಳೆದುಕೊಳ್ಳುವುದನ್ನು ನೋಡಬಹುದು. ಮನೆಯ ಮುಂದಿನ ಗೋಡೆಯ ಮೇಲೆ ಬೆಕ್ಕು ಸಾವಧಾನವಾಗಿ ಗಂಭೀರವಾಗಿ ನಡೆಯುತ್ತಿರುವುದನ್ನು ನೋಡಬಹುದು. ಈಗ ಪ್ರತಿ...

ವಿಗ್ರಹ

ಹೌದು, ನನಗವನು ಗೊತ್ತಿದ್ದ. ವರ್ಷಗಟ್ಟಲೆ ಅವನೊಡನೆ ಇದ್ದೆ. ಚಿನ್ನದಂಥ ಮನುಷ್ಯ, ಕಲ್ಲಿನಷ್ಟು ಗಟ್ಟಿ. ಸುಸ್ತಾಗಿದ್ದ. ಪೆರುಗ್ವೇಯಲ್ಲಿ ಅಪ್ಪ ಅಮ್ಮನನ್ನು ಬಿಟ್ಟು ಮಕ್ಕಳನ್ನು ಬಿಟ್ಟು, ಮಾವ ಚಿಕ್ಚಪ್ಪಂದಿರನ್ನು ಬಿಟ್ಟು ಹೊಸದಾಗಿ ಭಾವನಂಟರಾದವರನ್ನು ಬಿಟ್ಟು, ಮನೆ ಬಿಟ್ಟು,...
ಮುಂಜಾವಿನಲ್ಲಿ

ಮುಂಜಾವಿನಲ್ಲಿ

ಸಾನ್ ಗಾಬ್ರಿಯಲ್ ಊರು ಥಂಡಿ ಕಾವಳದಿಂದ ಇಷ್ಟಿಷ್ಟೆ ಹೊರತೋರುತ್ತಿದೆ. ಜನಗಳ ಮೈ ಬಿಸಿ ತಾಕಲೆಂದು ರಾತ್ರಿಯಲ್ಲಿ ಮೋಡಗಳು ಊರಿನ ಮೇಲೆ ಕವುಚಿಕೊಂಡು ನಿದ್ದೆ ಹೋಗಿವೆ. ಸೂರ್ಯ ಇನ್ನೇನು ಕಾಣಬೇಕು ಅನ್ನುವಾಗ ಕಾವಳದ ತೆರೆಯ ಹಚ್ಚಡ...

ಕೊನೆ, ಮೊದಲು

ಪ್ರತಿಯೊಂದು ಯುದ್ಧಮುಗಿದ ಮೇಲೂ ಯಾರಾದರೂ ಮತ್ತೆ ಎಲ್ಲವನ್ನೂ ಅಣಿಗೊಳಿಸಬೇಕು. ಹಾಳಾದದ್ದೆಲ್ಲ ಮತ್ತೆ ತನಷ್ಟಕ್ಕೇ ಸರಿಯಾಗುವುದಿಲ್ಲ ತಾನೇ? ಯಾರಾದರೂ ಬಂದು ರಸ್ತೆ ಮೇಲೆ ಬಿದ್ದ ಕಲ್ಲು ಮಣ್ಣು ಪಕ್ಕಕ್ಕೆ ತಳ್ಳಿ ಹೆಣ ಹೂತ್ತೆಗಾಡಿಗಳು ಸಾಗುವುದಕ್ಕೆ ದಾರಿ...

ಮಿಸ್ಟರ್ ಕಾಗಿಟೋ ನರಕದ ಬಗ್ಗೆ ಹೀಗೆಂದುಕೊಳ್ಳುತ್ತಾನೆ

ನರಕದ ತಳಾತಳದಲ್ಲಿರುವ ಸೀಮೆ. ಎಲ್ಲರೂ ಅಂದುಕೊಂಡಂತೆ ಅಲ್ಲಿ ನಿರಂಕುಶಾಧಿಕಾರಿಗಳಿಲ್ಲ. ಮಾತೃಹಂತಕರು, ಮಾತೃಗಾಮಿಗಳು, ಹೆಣಗಳನ್ನು ದರದರ ಎಳೆದಾಡಿದವರು, ದೇಶದ್ರೋಹಿಗಳು ಯಾರೂ ಇಲ್ಲ. ನರಕದ ತಳಾತಳ ಕಾಲವಿದರ ಆಶ್ರಯತಾಣ, ಎಲ್ಲೆಲ್ಲೂ ಕನ್ನಡಿಗಳು, ಸಂಗೀತ ವಾದ್ಯಗಳು, ವರ್ಣಚಿತ್ರಗಳು. ಸುಮ್ಮನೆ...

ಕೋಳಿ

ಕೋಳಿ ಅತ್ಯುತ್ತಮ ನಿದರ್ಶನ -ಸತತವಾಗಿ ಮನುಷ್ಯರೊಡನೆ ಬದುಕಿದರೆ ಏನಾಗುತ್ತೆದೆನ್ನುವುದಕ್ಕೆ. ಹಕ್ಕಿಯ ಲಾಘವ, ಗಾಂಭೀರ್ಯ ಕಳೆದುಕೊಂಡಿದೆ ಕೋಳಿ. ಅಭಿರುಚಿ ಹೀನ ದೊಡ್ಡ ಹ್ಯಾಟಿನಂತೆ ಅದರ ಅಂಡಿನ ಮೇಲೆ ಉದ್ದೋ ಉದ್ದ ಪುಕ್ಕ. ಅಪರೂಪಕ್ಕೊಮ್ಮೆ ಭಾವೊನ್ಮತ್ತ ಕ್ಷಣದಲ್ಲಿ,...

ಸಾವು ಬಂದಾಗ

ಸಾವು ಬಂದಾಗ ನಾನು ನಿನ್ನೊಡನೆ ಇರಲಿಲ್ಲ. ಮುನಿಸಿಪಲ್ ಆಸ್ಪತ್ರೆ ನೀನಿದ್ದಕೊನೆಯ ಮನೆ : ಬಿಳಿಯ ಬಣ್ಣದ ರೂಮು, ಮೂಲೆಯಲ್ಲಿ ಜೇಡರಬಲೆ, ಚಕ್ಕೆ ಎದ್ದ ಗೋಡೆಯ ಬಣ್ಣ, ಉಪ್ಪಿನ ಕಾಯಿ ಬಾಟಲು, ನಾಲ್ಕು ತಿಂಗಳು ಹಳೆಯ...

ಮುಂಜಾವದಲ್ಲಿ

ಮುಂಜಾವದಲ್ಲಿ ರೈಲಿನ ಕಿಟಕಿಯಿಂದ ನೋಡಿದಾಗ ಮಲಗಿದ್ದ ನಗರಗಳು, ರಕ್ಷಣೆಗೆ ಗಮನಕೊಡದೆ ಬೆನ್ನಡಿಯಾಗಿ ಬಿದ್ದುಕೊಂಡ ದೈತ್ಯ ಪ್ರಾಣಿಗಳು. ವಿಶಾಲ ಸರ್ಕಲ್ಲುಗಳಲ್ಲಿ ನನ್ನ ಆಲೋಚನೆಗಳು ಮತ್ತು ಬೆಳಗಿನ ಗಾಳಿ ಮಾತ್ರ ಸುಳಿದಾಡುತ್ತವೆ : ಕಛೇರಿಯ ಗೋಪುರದಲ್ಲಿ ಮೂರ್ಛೆ...

ನಿಜ ಒತ್ತಾಯಮಾಡುತ್ತದೆ

ನಾವು ಇದನ್ನೂ ಹೇಳಬೇಕೆಂದು ನಿಜ ಒತ್ತಾಯ ಮಾಡುತ್ತದೆ : ‘ಬದುಕು ಸಾಗುತ್ತದೆ.’ ಕ್ಯಾನೆ, ಬೊರೊಡಿನೋಗಳಲ್ಲಿ ಕೊಸೊವೊ ಪೊಲ್ಯೆ, ಗುರೆನಿಕಾಗಳಲ್ಲಿ ಬದುಕು ಸಾಗುತ್ತದೆ. ಜೆರಿಕೋದ ಪುಟ್ಟ ಸರ್ಕಲ್ಲಿನಲ್ಲಿ ಒಂದು ಪೆಟ್ರೋಲ್ ಬಂಕಿದೆ, ಬಿಲಾಹೊರಾದ ಪಾರ್ಕಿನ ಬೆಂಚಿಗೆ...

ಅನಿರೀಕ್ಷಿತ ಭೇಟಿ

ಎಷ್ಟೋ ವರ್ಷಗಳ ನಂತರ ಕಾಣುತ್ತೇವೆ. ಸಭ್ಯತೆಯಿಂದ ಕೈ ಕುಲುಕಿ ‘ನೈಸ್ ಮೀಟಿಂಗ್ ಯೂ’ ಅನ್ನುತ್ತೇವೆ. ನಮ್ಮ ಹುಲಿಗಳು ಹಾಲು ಕುಡಿಯುತ್ತವೆ ನಮ್ಮ ರಣಹದ್ದುಗಳು ನೆಲದ ಮೇಲೆ ನಡೆಯುತ್ತವೆ ನಮ್ಮ ತಿಮಿಂಗಿಲಗಳು ನೀರೊಳಗೆ ಬಚ್ಚಿಟ್ಟುಕೊಳ್ಳುತ್ತವೆ ನಮ್ಮ...
cheap jordans|wholesale air max|wholesale jordans|wholesale jewelry|wholesale jerseys