ನಿನ್ನ ನೋಡಿ ತಡೆಯಲಾರದೆ ಕೇಳಿದೆ
ಕೂಡಿ ಗಡ ಕಾಡಬ್ಯಾಡ ಬೇಡಿದ್ದು ಕೊಡುವೆ ||ಪ||
ಮೂರಗಿರಿಮ್ಯಾಲಕ ಏರಿ
ಶಿಖರದೋಳ್ ನಿಂತು ಜೀರಗಿಂಡಿಯೊಳು
ಮಾರಿ ತೋರ್ವ ಬಾಲಿ ||೧||
ಹರಿ ಹರ ಸುರರಿಗೆ
ಕ್ಷೀರವನ್ನಿತ್ತು ಸಲುಹಿದಿ
ಚಾರುತನದಲಿ ಶ್ರುತಿ ಸಾರಿತಿದೆ ||೨||
ವಸುಧಿಯೊಳು ಶಿಶುನಾಳ
ಆದಿ ಸದ್ಗುರುವಿನ
ನಾದ ಬ್ರಹ್ಮದೋಳ್ ಬೈಲಾದ ಮ್ಯಾಲೆ ||೩||
* * * *