ದಾಸರೋ ಹರಿದಾಸರೋ ||ಪ||

ದಾಸರೆನಿಸಿ ಧರ್ಮ ಹಿಡಿದು
ಆಸೆ ಕಡಿದು ತೂರ್ಯದಲ್ಲಿ
ಕಾಸು ಕವಡಿ ಕಾಲಿಲೊದ್ದು
ಈಶನೊಲಿಸಿಕೊಂಬುವಂಥಾ ||೧||

ಸ್ವಾಮಿ ಕೇಶವ ಅಚ್ಯುತ
ಗೋಕುಲದ ಗೋವಿಂದ
ರಾಮ ಕೃಷ್ಣ ಎಂಬ ಪಂಚ-
ನಾಮ ನಿತ್ಯ ಪಠಿಸುವಂಥ ||೨||

ತನುವ ತಂಬೂರಿ ಮಾಡಿ
ಪ್ರಣವನಾದ ಸ್ವರದಿ ಹಾಡಿ
ಚಿನುಮಯಾತ್ಮನೊಲವಿಲೈದು
ಮನೆಯ ಭಿಕ್ಷೆ ಬೇಡುವಂಥಾ ||೩||

ವರಶ್ರೀಮುಖಮುದ್ರೆ ಎನಗೆ
ಬರಸಿಕೊಟ್ಟ ಶಿರದ ಮೇಲೆ
ಕರವನಿಟ್ಟು ಸಲಹಿದಂಥಾ
ಶಿಶುವಿನಾಳಧೀಶನ ಹರಿ ||೪||

****