ಹುಬ್ಬಳ್ಳಿಯೊಳು ಮನಿ ಮಾಡಿದ್ಯಾ
ಅಬ್ಬರದಿ ಮಾಂತನೊಳು ಕೂಡಿದ್ಯಾ ||ಪ||
ಮಂಗಳಾತ್ಮನೊಡನೆ ಮಾತಾಡಿದ್ಯಾ
ಗಂಗಾಧರನಿಗೆ ಕೋರಿಯ ಬೇಡಿದ್ಯಾ ||೧||
ಮರ್ಟಾಳ ಪತಿಯ ಪದವ ಹಾಡಿದ್ಯಾ
ಕಾಟ ಕರ್ಮ ಕಳಿದು ಈಡ್ಯಾಡಿದ್ಯಾ ||೨||
ತಾನರಸಿ ವಿಷಯ ಕಲಿ ದೂಡಿದ್ಯಾ
ದೇವ ಶಿಶುನಾಳಧೀಶಗ ಕರವ ಜೋಡಿಸಿದ್ಯ ||೩||
****
ಹುಬ್ಬಳ್ಳಿಯೊಳು ಮನಿ ಮಾಡಿದ್ಯಾ
ಅಬ್ಬರದಿ ಮಾಂತನೊಳು ಕೂಡಿದ್ಯಾ ||ಪ||
ಮಂಗಳಾತ್ಮನೊಡನೆ ಮಾತಾಡಿದ್ಯಾ
ಗಂಗಾಧರನಿಗೆ ಕೋರಿಯ ಬೇಡಿದ್ಯಾ ||೧||
ಮರ್ಟಾಳ ಪತಿಯ ಪದವ ಹಾಡಿದ್ಯಾ
ಕಾಟ ಕರ್ಮ ಕಳಿದು ಈಡ್ಯಾಡಿದ್ಯಾ ||೨||
ತಾನರಸಿ ವಿಷಯ ಕಲಿ ದೂಡಿದ್ಯಾ
ದೇವ ಶಿಶುನಾಳಧೀಶಗ ಕರವ ಜೋಡಿಸಿದ್ಯ ||೩||
****