ಒಬ್ಬ ಸಾಧಕ ತನ್ನ ತಾನೇ ಪ್ರೀತಿಸಿದ. ತನಗೆ ತಾನೇ ಪ್ರೇಮ ಪತ್ರ ಬರೆದ, ತನ್ನ ಆತ್ಮ ಸುಂದರಿಗೆ, ಎದೆಯ ಢಭಢಭದಲ್ಲಿ ಪ್ರೇಮದ ಮೃದಂಗ ಬಾರಿಸಿದ. ಕಣ್ಣ ಬೆಳಕಿನ ಆರತಿ ಬೆಳಗಿದ. ತನ್ನೊಳಗೊಂದು ಪ್ರೇಮ ಹಂದರ ಕಟ್ಟಿದ. ಭಾವದ ಬಾಳೆಗೊನೆಯ ಬಾಳೆಗಿಡ ಬೆಳೆಸಿ, ಮಮತೆಯ ಮಾವಿನ ತೋರಣ ಕಟ್ಟಿದ, ಮನದ ಬುಟ್ಟಿ ತುಂಬಾ ಪ್ರೀತಿ ಸುಮನಗಳ ತುಂಬಿಟ್ಟ. ಬೊಗಸೆ ತುಂಬಾ ಪ್ರೇಮಾಮೃತ ಸುರಿದ. ಹೆಜ್ಜೆ ಹೆಜ್ಜೆಗೂ ಪ್ರೀತಿ ಗೆಜ್ಜೆ ಕಟ್ಟಿ ಕುಣಿದ. ವಿಶ್ವ ವರಿಸಿ ಬಂತು, ಮದುವೆ ಹಂದರದೊಳಗೆ ಆತ್ಮ ಸುಂದರಿ ನಲ್ಮೆಯ ಹಾರ ಹಾಕಿ ವರಿಸಿದಳು. ವಿಶ್ವ, ಆತ್ಮದ ಆತ್ಮೀಯತೆಯಲ್ಲಿ ಜಗದ ಕಲ್ಯಾಣವೇ ಆಯಿತು.
*****








