ಕಾಡಿನೊಳು ಗಿಡಬಳ್ಳಿಗಳನು ಸುತ್ತಾಡಿ ನಾ
ನಾಡಿನೊಳಗಿನ ತೋಟಗಳನು ನೆರೆನೋಡೀಗ
ಬಾಡಿ ಬಳಲುತ ಜೇನು ಹನಿ ತೊಟಕು ದೊರಕದೇ
ತಿರುಗಾಡಿ ತಿರುಗಿ ಬಂದೆ
ಬೆಂದು ಬಿಸಿಲಿಗೆ ನೊಸಲ ಬೆವರನೊರೆಸುತ ಬಂದು
ಒಂದು ಬೇವಿನ ಬುಡಕೆ ನಿಂದು ಅಳವಳದಿಂದ
“ಏ೦ದಿಗೂ ಸಿಗಲಾರೆಯಾ, ಜೀನಿನರನಿಯೇ”
ಮನದೆ ಕಡುನೊಂದು ಎಂದೆ
ಎನ್ನು ತೀಪರಿ ಕಾಲ ಜಾಚಿ ಬೇಸರದಿಂದ
ಬೆನ್ನ ಭೂಮಿಗೆ ಹಚ್ಚಿ ಮಲಗುವನಿತರೊಳೆನ್ನ
ಕಣ್ಣಿದಿರು ಗಿಡದೊಳಗೆ ಗುಟ್ಟಿನಂತಡಗಿರುವ
ಜೇನ ಹಿ೦ರಿಹುಟ್ಟು ಕಂಡೆ!
ಅಬ್ಬರದ ಬೇಸಿಗೆಯ ಬೇಟಗಾರತಿ ರತಿಯ
ಹುಬ್ಬೆ! ಹರೆಯದ ಬಯಕೆಗಳು ಕೊಬ್ಬಿ ಹೊರಡಿಸಿದ
ನಿಬ್ಬಣವೆ! ಕಬ್ಬಿಣವ ಮಣಿಸಲಳವುಳ್ಳ ಕಾ-
ಮನ ಕೈಯ ಬಿಲ್ಲುಗಬ್ಬೇ!
ಹಬ್ಬವೇ ಕರಳು ಮರುಳಾಗಿ ಹಾಡುವ ಹಾಡು-
ಗಬ್ಬವೇ! ಉಬ್ಬಿದೆದೆಯಂದ ಕೆಲೆದೆಂದೆ ನಾ-
ನೊಬ್ಬನೇ ನಿನ್ನನ್ನು ಬೆಟ್ಟಿಯಾಗುವೆನಿಂದು
ನಿಟ್ಟುರುಳಿನಲ್ಲಿ ಬಂದು
ಕಾರಿರುಳ ಕತ್ತಲೆಯ ಗವಿಗೆ ಗೊತ್ತಾದಂತೆ
ಹಾರುಗಾಲಿನ ಭರದಿ ಗಿಡದಡಿಗೆ ತಲುಪಿದೆನು
ದಾರಿಕಾರರ ಹಾಗೆ, ನೀರಡಿಸಿ, ಬೇಸಿಗೆಯ
ನಡುಹಗಲಿನಲ್ಲಿ ನಡೆದು
ಮೂರು ಬೊಟ್ಟಿನ ಮೇಲೆ ಕಂಡೆ ಕಟ್ಟಿದ ಮುಗಿಲು
ಹಾರಿದೆನು ಜೇಂಗೊಡಕೆ, ಹೀರಿದೆನು ಬಾಯ್ಹಚ್ಚಿ
ತೀರಿದರು ತಣಿವಿಲ್ಲ ಮೈಮರೆಯೆ ಕುಡಿದರೂ
ಮನದಣಿಯಲಿಲ್ಲ ಕಡೆಗೂ.
*****








